- Advertisement -
ಮಕ್ಕಳು ಗಮನಿಸುವುದೇ ಇಲ್ಲ
ಜೀವನವಿಡೀ ದುಡಿದು
ಬಸವಳಿಯುತ್ತಾನೆ ಅಪ್ಪ
ಆದರೂ ಮಕ್ಕಳೆದುರು
ನಗೆ ಚಿಮ್ಮಿಸುತ್ತಾನೆ
ಅವನ ದಣಿವು ಗೊತ್ತಾಗುವುದೇ ಇಲ್ಲ
ಮಾನಸಿಕ ಉದ್ವೇಗಕೆ ಒಳಗಾಗಿ
ಕಾಯಿಲೆ ತಂದು ಕೊಳ್ಳುತ್ತಾ
ಚುಚ್ಚುಮದ್ದು ಚುಚ್ಚಿಕೊಳ್ಳುತಿಹ ಅಪ್ಪನ,
ಮಕ್ಕಳು ಗಮನಿಸುವುದೇ ಇಲ್ಲ
ದುಡಿದು ಹಣ್ಣಾಗುತಲೇ
ಮಕ್ಕಳ ವಿದ್ಯಾಭ್ಯಾಸ ನೌಕರಿಗೆ ಅನುವಾಗುತ ಮದುವೆ ಮಾಡುತ್ತಾನೆ,ಅದಕ್ಕಾಗಿ ಮಾಡಿದ ಸಾಲ ಮಕ್ಕಳು ಗಮನಿಸುವುದೇ ಇಲ್ಲ
- Advertisement -
ಇನ್ನೇನು ನಿವೃತ್ತಿ ಮಕ್ಕಳೊಂದಿಗೆ
ಹಾಯಾಗಿ ಇರಬೇಕೆನ್ನುವಾಗ
ಮಕ್ಕಳು ಹೊರಟೇ ಬಿಟ್ಟಿರುತ್ತಾರೆ
ಅಪ್ಪನ ಭಾವನೆಗಳು ಮಕ್ಕಳಿಗೆ ಅಥ೯ವಾಗುವದೇ ಇಲ್ಲ
ಒಂಟಿತನದಿ ದಿನಕಳೆಯುತ
ಕೊರಕೊರಗಿ ಮರುಮರುಗಿ
ಸಾಕೆನಿಸುವ ನೋವಿನಲ್ಲಿ
ಉಸಿರು ನಿಂತಿದ್ದು
ಮಕ್ಕಳ ಗಮನಕ್ಕೆ ಬರುವುದೇ ಇಲ್ಲ
(ಮರೆಯಾದ, ಮರಗುತಿಹ ಅಪ್ಪಂದಿರಿಗೆ
ಸಮಪಿ೯ತ)
ರಾಧಾ ಶಾಮರಾವ