ರಾಜ್ಯಾದ್ಯಂತ ವಕ್ಫ ಎಂಬ ಭೂತ ದಿನೇ ದಿನೇ ರೈತರ ಜಮೀನುಗಳನ್ನು ಕಬಳಿಸುತ್ತ ಹೊರಟಿದೆ. ಇದನ್ನೆಲ್ಲ ಕಾಂಗ್ರೆಸ್ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸೂಚನೆಯಂತೆ ಮಾಡಲಾಗಿದೆ ಎಂದು ಸಚಿವ ಜಮೀರ ಅಹ್ಮದ ಬಹಿರಂಗವಾಗಿಯೇ ಹೇಳಿದ್ದಲ್ಲದೆ ಮುಸಲ್ಮಾನರ ಸ್ಮಶಾನಗಳಿಗೆ ಹಸಿರು ಬಣ್ಣ ಹಚ್ಚಿ ಅದು ನಮ್ಮದೇ ಎಂದು ಸಾರಿ ಹೇಳಿ ಎನ್ನುತ್ತ ಅವಡುಗಚ್ಚಿ ಹಿಂದೂಗಳ ಮೇಲಿನ ದ್ವೇಷ ಕಾರಿದರೂ ಹಿಂದೂಗಳಂತೂ ನಿದ್ದೆಯಿಂದ ಎಚ್ಚರಗೊಳ್ಳಲಿಲ್ಲ. ಇತ್ತ ರಾಜ್ಯಾದ್ಯಂತ ಬಿಜೆಪಿ ಪಕ್ಷವು ಇದರ ವಿರುದ್ಧ, ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಇಳಿದಿದ್ದು ದಿ. ೪ ರಂದು ಅನಿರ್ದಿಷ್ಟ ಕಾಲ ಪ್ರತಿಭಟನೆ ನಡೆಸಲಿದೆ ಎನ್ನಲಾಗಿದೆ.
ಆದರೆ ಈ ವಕ್ಫ್ ಅವಾಂತರವನ್ನು ಭಾರತೀಯ ಜನತಾ ಪಕ್ಷದ ತಲೆಗೇ ಕಟ್ಟುವ ಪ್ರಯತ್ನದ ವಿಡಿಯೋ ಒಂದು ಬಹಿರಂಗವಾಗಿದ್ದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಕ್ಫ್ ಜಮೀನು ಕುರಿತಂತೆ ಮುಸ್ಲಿಮರಿಗೆ ನೀಡಿದ್ದ ಸಲಹೆಯನ್ನೇ ತಿರುಚಿ ಬಿಜೆಪಿಯು ವಕ್ಫ್ ಕಾಯ್ದೆಯ ಪರ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ.
‘ಈ ದಿನ’ ಎಂಬ ನ್ಯೂಸ್ ಚಾನಲ್ ನಲ್ಲಿ ಮಹಿಳೆಯೊಬ್ಬಳು ಸುದ್ದಿ ಓದುತ್ತಿದ್ದು ಹಿಂದಿನ ಮುಖ್ಯಮಂತ್ರಿ ಬಿಜೆಪಿಯ ಬಸವರಾಜ ಬೊಮ್ಮಾಯಿಯವರು ಮುಸ್ಲಿಮರಿಗೆ, ನಿಮ್ಮ ವಕ್ಫ್ ಆಸ್ತಿಯನ್ನು ನೀವೆ ರಕ್ಷಿಸಿಕೊಳ್ಳಿ, ಬೇರೆ ಯಾವುದೇ ಖಾಸಗಿ ವ್ಯಕ್ತಿಗಳಿಗೆ ಬಿಟ್ಟುಕೊಡಬೇಡಿ ಎಂದು ಭಾಷಣ ಮಾಡುವ ವಿಡಿಯೋ ಉಲ್ಲೇಖಿಸಿ, ಇಂದು ರೈತರ ಜಮೀನುಗಳನ್ನು ವಕ್ಫ ಕಬಳಿಸಲು ಬಿಜೆಪಿಯೇ ಕಾರಣ ಎಂಬ ಸುಳ್ಳನ್ನು ಹರಡುತ್ತಿದೆ.
ಈ ವಿಡಿಯೋದಲ್ಲಿ ವಕ್ಫ ನವರೇ ಹಿಂದೂಗಳ ಆಸ್ತಿಗಳನ್ನು ಕಬಳಿಸಿ ಎಂದು ಬೊಮ್ಮಾಯಿ ಹೇಳಿಲ್ಲ. ನಿಮ್ಮ ಅಧಿಕೃತ ಆಸ್ತಿಯನ್ನು ರಕ್ಷಿಸಿಕೊಳ್ಳಿ, ಖಾಸಗಿ ವ್ಯಕ್ತಿಗಳು ಕಬಳಿಸಲು ಬಿಡಬೇಡಿ ಎಂದಿದ್ದಾರೆ. ವಕ್ಫ್ ಆಸ್ತಿಯಲ್ಲಿ ಕಾಲಿಡುವ ಖಾಸಗಿ ವ್ಯಕ್ತಿಗಳೆಂದರೆ ಮುಸಲ್ಮಾನರೇ. ಆದರೆ ಅದನ್ನು ತಿರುಚಿರುವ ಈ ಹಿಂದೂ ದ್ರೋಹಿ ಚಾನಲ್ ಬಿಜೆಪಿಯ ಹೆಸರು ಕೆಡಿಸುತ್ತಿದೆಯೆಂದರೆ ತಪ್ಪಲ್ಲ.
ಹಾಗೆ ನೋಡಿದರೆ ವಕ್ಫ ನ ಬೋರ್ಡಿಗೆ ಇಷ್ಟೊಂದು ಶಕ್ತಿ ತುಂಬಿದ್ದು ಕಾಂಗ್ರೆಸ್ ನ ನೆಹರೂ ಮತ್ತು ನರಸಿಂಹರಾವ್. ಇದನ್ನು ಅರ್ಥ ಮಾಡಿಕೊಳ್ಳದ ಈ ಮಹಿಳೆ ಸುದ್ದಿ ಹೆಸರಿನಲ್ಲಿ ಸುಳ್ಳು ಬಿತ್ತರ ಮಾಡುತ್ತಿರುವುದು ಅತ್ಯಂತ ಖಂಡನೀಯ.