spot_img
spot_img

ಆಧುನಿಕ ಭಗೀರಥ ದಿ. ಮನಗೂಳಿ ಸದಾ ಸ್ಮರಣೀಯರು

Must Read

spot_img
- Advertisement -

ಸಿಂದಗಿ: ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆಯಿಂದ ಇಲ್ಲಿನ ಹುಡುಗರಿಗೆ ಮದುವೆಯಾಗಲು ಕನ್ಯಾ ಕೊಡಲು ಮುಂದೆ ಬರುತ್ತಿಲ್ಲ. ಇಂತಹ ಹಣೆ ಪಟ್ಟಿಯಿಂದ ಶಾಶ್ವತವಾಗಿ ಹೋಗಲಾಡಿಸಿ ಶಾಶ್ವತ ಕುಡಿವ ನೀರಿನ ಬವಣೆಯನ್ನು ನೀಗಿಸಿ ಆಧುನಿಕ ಭಗೀರಥ ಎಂಬ ಕೀರ್ತಿಗೆ ಭಾಜನರಾದ ಸದಾ ಸ್ಮರಣೀಯರೆಂದರೆ ಅದು ದಿ.ಎಂ.ಸಿ.ಮನಗೂಳಿಯವರು ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.

ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಮನಗೂಳಿ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ನಗರ ಒಮ್ಮೆ ಸುತ್ತಿಕೊಂಡು ಬಂದರೆ ಮನಗೂಳಿ ಅವರ ಅಭಿವೃದ್ದಿ ಕಾರ್ಯಗಳು ಮಾತನಾಡುತ್ತವೆ ಎಂದರು.

ಈ ವೇಳೆ ತಾಶಿಪ್ರ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಮಾತನಾಡಿ, ಶಕ್ತಿ ಇದ್ದಾಗ ದುಡಿಬೇಕು, ಧನ ಸಂಪತ್ತಿದ್ದಾಗ ದಾನ-ಧರ್ಮ ಮಾಡಬೇಕು, ಅಧಿಕಾರವಿದ್ದಾಗ ಪ್ರಾಮಾಣಿಕವಾಗಿ ಜನ ಸೇವೆ, ಅಭಿವೃದ್ಧಿ ಕಾರ್ಯ ಮಾಡಬೇಕು ಎನ್ನುವ ಅವರ ಉದಾತ್ತ ಧ್ಯೇಯವನ್ನು ಪರಿಪಾಲಿಸಿಕೊಂಡು ಬಂದಿರುವ ಅವರ ಪುತ್ರ ಅಶೋಕ ಮನಗೂಳಿ ಅವರು ಕೂಡಾ ಅಷ್ಟೇ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದವರಾಗಿದ್ದು, ಆಲಮೇಲ ತೋಟಗಾರಿಕಾ ಕಾಲೇಜು, ಕಡಣಿ ಬ್ಯಾರೇಜ್, ಪಟ್ಟಣದ ಅಲಂಕಾರಿಕ ಬೀದಿ ದೀಪಗಳು, ರಸ್ತೆ ವಿಭಜಕಗಳಲ್ಲಿ ಸಾಲು ಮರಗಳು, ಟ್ರೀ ಪಾರ್ಕ್ ನಿರ್ಮಾಣದಂತಹ ಅನೇಕ ಅಭಿವೃದ್ಧಿಪರ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಪ್ರಸ್ತುತ ಶಾಸಕರಿಗೆ ಸಲ್ಲುತ್ತದೆ. ಈ ಭಾಗದ ನೀರಾವರಿ ಹರಿಕಾರ, ಅಪರೂಪದ ಸರಳ ಸಜ್ಜನಿಕೆಯ ರಾಜಕಾರಣಿಯಾದ ಎಂ.ಸಿ.ಮನಗೂಳಿ ಅವರು ತಮ್ಮೊಡನೆ ಇತರರನ್ನು ಕೈಹಿಡಿದು ಕರೆದೊಯ್ಯುವ ಆತ್ಮೀಯತೆ ಸ್ವಭಾವವನ್ನು ಹೊಂದಿದ್ದರು ಎಂದರು.

- Advertisement -

ಈ ವೇಳೆ ಊರಿನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ರಾಜ್ಯ ಕೃಷಿ ಇಲಾಖೆಯ ನಿರ್ದೇಶಕ ಪರವೇಜ್ ಬಂಥನಾಳ, ಡಾ.ಅರವಿಂದ ಮನಗೂಳಿ ವೇದಿಕೆಯ ಮೇಲಿದ್ದರು. ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು. ಡಾ.ಪ್ರಕಾಶ ಮೂಡಲಗಿ ಪ್ರಾರ್ಥಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ನಾಗರತ್ನ ಮನಗೂಳಿ, ಡಾ.ಚೆನ್ನವೀರ ಮನಗೂಳಿ, ಭರತ ಮನಗೂಳಿ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಎಂ.ಎಂ.ಹಂಗರಗಿ, ಮಹಾನಂದ ಬಮ್ಮಣ್ಣಿ, ಸುನಂದಾ ಯಂಪುರೆ, ಶಶಿಕಲಾ ಅಂಗಡಿ, ಪ್ರತಿಭಾ ಚಳ್ಳಗಿ, ಸಂಗೀತಾ ತಿಕೋಟಿ, ಸಿದ್ದು ಮಲ್ಲೇದ, ಕುಮಾರ ಬಗಲಿ, ಎನ್.ವ್ಹಿ.ಕುಲಕರ್ಣಿ, ಸಂಗು ಬಿರಾದಾರ, ಸತೀಶ ಬಸರಕೋಡ, ಮನಗೂಳಿ ಪರಿವಾರ ಸೇರಿದಂತೆ ಹಲವರು ಇದ್ದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group