ಧರ್ಮಸ್ಥಳ ಸಂಘದ ತಾಲೂಕಾ ಮಟ್ಟದ ಪದಾಧಿಕಾರಿಗಳ ಸಮಾವೇಶ

Must Read

ಮೂಡಲಗಿ: ಮೂಡಲಗಿ ನಗರದ ಅತ್ತಾರ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಪದಾಧಿಕಾರಿಗಳ ತಾಲೂಕಾ ಮಟ್ಟದ ಸಮಾವೇಶವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಸಂಘದ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ಹಾಗೂ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ತಾಲೂಕು ಯೋಜನಾಧಿಕಾರಿಗಳಾದ ರಾಜು ನಾಯಕ ರವರು ಸರ್ವರಿಗೂ ಸ್ವಾಗತ ಕೋರಿ, ಕಾರ್ಯಕ್ರಮದ ಪ್ರಾಸ್ತಾವಿಕತೆ ಹಾಗೂ ಮೂಡಲಗಿ ತಾಲೂಕಿನ ಅಂಕಿ ಅಂಶಗಳ ವರದಿಯನ್ನು ಮಂಡಿಸಿದರು .

ಕಾರ್ಯಕ್ರಮದ ಉದ್ಘಾಟಕರು ಹಾಗೂ ಜಿಲ್ಲಾ ನಿರ್ದೇಶಕರಾದ ಶ್ರೀಮತಿ ನಾಗರತ್ನ ರವರು ಸಂಘಶಕ್ತಿ ಸರ್ವಶಕ್ತಿ ಸಂಘದ ವ್ಯವಹಾರ ಹಾಗೂ ಗುಣಮಟ್ಟ ಸದಸ್ಯರ ಕೈಯಲ್ಲಿದೆ ಎಂದು ಮನವರಿಕೆ ಮಾಡಿದರು. ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯು ಲಾಭಕ್ಕಾಗಿ ಇರುವಂತಹ ಸಂಸ್ಥೆಯಲ್ಲ, ಜನರ ಒಳಿತಿಗಾಗಿ ಇರುವಂತಹ ಸಂಸ್ಥೆ, ಬ್ಯಾಂಕಿನ ಎಲ್ಲಾ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಾ ಬ್ಯಾಂಕ್ ಹಾಗೂ ಜನರ ನಡುವೆ ಕೊಂಡಿಯಾಗಿ ತನ್ನ ಸೇವೆ ಸಲ್ಲಿಸುತ್ತಾ ಬಂದಿದೆ. ಸ್ವ- ಸಹಾಯ ಸಂಘಗಳ ನಿರ್ವಹಣಾ ಹೊಣೆಗಾರಿಕೆಯನ್ನು ಬ್ಯಾಂಕುಗಳು ಯೋಜನೆಗೆ ಜವಾಬ್ದಾರಿಯಾಗಿ ನೀಡಿದೆ. ಕಡ್ಡಾಯವಾಗಿ ವಾರದ ಸಭೆಯೊಂದಿಗೆ, ಕ್ರಮವತ್ತಾಗಿ ಸಾಲ ಮರುಪಾವತಿ ಮಾಡಬೇಕು ಎಂದು ಸವಿವರವಾಗಿ ವಿವರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿ, ಜನರೊಂದಿಗೆ ಬೆರೆಯುವ ಸಂಪತ್ತು ಸಂಘಟನೆಯಾಗಿದೆ. ಸಂಘಟನೆಯಿಂದ ಜ್ಞಾನದ ಅಭಿವೃದ್ಧಿಯಾಗುತ್ತದೆ. ಈ ಜ್ಞಾನದಿಂದ ನಾವು ಬೆಳೆಯಬೇಕು ಹಾಗೂ ಸಮುದಾಯವನ್ನು ಬೆಳೆಸಬೇಕೆಂದು ಶುಭ ಹಾರೈಸಿದರು.

ಇನ್ನೋರ್ವ ಮುಖ್ಯ ಅತಿಥಿಗಳು ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರ ಗೋಕಾಕ ಶಾಖಾ ಪ್ರಬಂಧಕರಾದ ಶ್ರೀಮತಿ ರಶ್ಮಿರವರು ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬ್ಯಾಂಕಿನ ನಡುವಿನ ಒಪ್ಪಂದದ ಕುರಿತು ಮಾತನಾಡುತ್ತಾ, ಬ್ಯಾಂಕುಗಳು ಕಾಲಕಾಲಕ್ಕೆ ಕೇಳುವ ದಾಖಲಾತಿಯನ್ನು ನೀಡಬೇಕು, ದಾಖಲಾತಿಗಳು ಸರಿಯಾಗಿ ನಿರ್ವಹಣೆ ಯಾಗಬೇಕು. ಇದಕ್ಕೆ ಪೂರಕವಾಗಿ ಗ್ರಾಮ ಅಭಿವೃದ್ಧಿ ಯೋಜನೆಯು ವಾರದ ಸಭೆ, ಕಾಲಕಾಲಕ್ಕೆ ತರಬೇತಿಗಳನ್ನು ನೀಡುತ್ತಾ ಬ್ಯಾಂಕಿನ ಸೌಲಭ್ಯಗಳಾದ ಉಳಿತಾಯ, ಸಾಲ ವಿಮೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸುತ್ತಾ CC ಖಾತೆಯ ಬಗ್ಗೆ, ಸಂಘದ DP, CC limit, ಗ್ರೇಡಿಂಗ್, ಸಿಬಿಲ್ ಸ್ಕೋರ್ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ ಜನ ಜಾಗೃತಿ ವೇದಿಕೆ ಸದಸ್ಯರುಗಳಾದ ಶ್ರೀಮತಿ ಶಿವಲೀಲಾ ಗಾಣಿಗೇರ, ಶ್ರೀಶೈಲ ಢವಳೇಶ್ವರ, ಶಿವಶಂಕರ ಖಾನಾಪುರ, ಈರಪ್ಪ ಸಂಡೂರವರು ಎಲ್ಲಾ ಒಕ್ಕೂಟದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಶ್ರೇಣಿಯ ಎಲ್ಲಾ ಸಿಬ್ಬಂದಿಗಳು, ಆಡಳಿತ ವರ್ಗದ ಸಿಬ್ಬಂದಿಗಳು, ಸೇವಾ ಪ್ರತಿನಿಧಿಗಳು ಹಾಗೂ ಸಿಎಸ್‌ಸಿ ಸೇವಾದಾರರು ಭಾಗವಹಿಸಿದ್ದರು.

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group