spot_img
spot_img

ಓತಿಹಾಳ ಪಿಕೆಪಿಎಸ್ ಬ್ಯಾಂಕ್ ಅವ್ಯವಹಾರ ತಡೆಯಲು ಆಗ್ರಹ

Must Read

- Advertisement -

ಸಿಂದಗಿ ; ತಾಲೂಕಿನ ಓತಿಹಾಳ ಪಿಕೆಪಿಎಸ್ ಬ್ಯಾಂಕಿನಲ್ಲಿ ನಡೆಯುತ್ತಿರುವ ಆಢಳಿತ ಮಂಡಳಿಯ ಕರ್ಮಕಾಂಡ ತಡೆಹಿಡಿವಂತೆ ಆಗ್ರಹಿಸಿ ತಾಲೂಕಿನ ತಳವಾರ ಸಮಾಜದ ಮುಖಂಡರುಗಳುಗಳಿಂದ ಪ್ರತಿಭಟನೆ ನಡೆಸಿ ಗ್ರೇಡ್ ೨ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ತಳವಾರ ಸಮಾಜದ ರಾಜ್ಯ ಮಹಾಸಭಾದ ಅಧ್ಯಕ್ಷ ಶಿವಾಜಿ ಮೆಟಗಾರ ರವರು ಮಾತನಾಡಿ; ತಾಲೂಕಿನ ಓತಿಹಾಳ ಪಿಕೆಪಿಎಸ್ ಬ್ಯಾಂಕಿನಲ್ಲಿ ೨೦೨೪ರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ(ಮೀಸಲಾತಿಯ) ಅಭ್ಯರ್ಥಿಯಾಗಿ ಶ್ರೀಮತಿ ಸಂಗಮ್ಮ ಎಸ್. ಕೊರಬು ರವರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ. ಇವರನ್ನು ಸದರಿ ಸಂಘದ ನಿರ್ದೇಶಕರು(ಅಧ್ಯಕ್ಷರೊಳಗೊಂಡು) ಸಂಘದ ಸಭೆಯಲ್ಲಿ ದುರಾಡಳಿತದಿಂದ ದಿನಾಂಕ ೦೫-೧೧-೨೦೨೪ರ ತುರ್ತು ಸಭೆಯಲ್ಲಿ ಹಣ ದುರುಪಯೋಗ ಮಾಡಿಕೊಂಡು ವಜಾಗೊಂಡಿದ್ದ ಅಂಬಣ್ಣ ಶಂಕ್ರೆಪ್ಪ ಹೂಗಾರ ರವರನ್ನು ಸಂಘದ ಕಾರ್ಯದರ್ಶಿಯನ್ನಾಗಿ ಮರು ನೇಮಕ ಮಾಡಿಕೊಳ್ಳಲು ಕರೆದ ಸಭೆಯ ನಕಲಿ ಠರಾವಿನಲ್ಲಿ ತಳವಾರ ಸಮಾಜದ ನಿರ್ದೇಶಕಿ ಸಂಗಮ್ಮ ಎಸ್. ಕೊರಬು ರವರ ಹೆಸರನ್ನು ಠರಾವಿನಲ್ಲಿ ಕೈಬಿಟ್ಟು ಸಂಘದಲ್ಲಿ ವೃತ್ತಿಪರ ನಿರ್ದೇಶಕರನ್ನು ಸಂಘದ ಕೋರಂ ಸಲುವಾಗಿ ನಿಂಗನಗೌಡ ಎಸ್. ಬಿರಾದಾರ ರವರನ್ನು ನಿರ್ದೇಶಕರೆಂದು ಠರಾವಿನಲ್ಲಿ ಸೇರಿಸಿಕೊಂಡು ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾನೂನು ಬದ್ದವಾಗಿ ಗೆದ್ದಿರುವ ನಿರ್ದೇಶಕರಿಗೆ ಅನ್ಯಾಯ ಮಾಡಿರುವ ಸಂಘದ ಹಾಲಿ ಅಧ್ಯಕ್ಷ ಶರಣಪ್ಪ ಎಸ್ ಗಿಡದಮನಿಯವರನ್ನು ತಕ್ಷಣದಿಂದಲೇ ಸಂಘದಿಂದ ವಜಾಗೊಳಿಸಬೇಕೆಂದು ಸಮಸ್ತ ತಳವಾರ ಸಮಾಜದ ಭಾಂದವರ ಪರವಾಗಿ ಆಗ್ರಹಿಸಿದರು.

ಸಂಬಂಧಪಟ್ಟ ಮೇಲಾಧಿಕಾರಿಗಳು ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳದಿದ್ದರೆ ಓತಿಹಾಳ ಪಿಕೆಪಿಎಸ್ ಬ್ಯಾಂಕಿನ ಕಛೇರಿಗೂ ಹಾಗೂ ಎಆರ್ ಆಫೀಸ ಇಂಡಿರವರ ಕಛೇರಿಗೆ ಬೀಗ ಹಾಕಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.

- Advertisement -

ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ ಹಾಗೂ ಬಾಬು ನಾಟೀಕಾರ, ಈರಣ್ಣ ಕುರಿ, ಯಲ್ಲಪ್ಪ ಬಳುಂಡಗಿ, ಪೀರು ಕೆರೂರ, ಕಂಟೆಪ್ಪ ಡಪ್ಪಿನ, ಜಟ್ಟೆಪ್ಪ ಹರನಾಳ, ಶಾಂತಪ್ಪ ಇಂಗಳಗಿ, sಸಂಗಮೇಶ ಬಿರಾದಾರ, ಸಿಕಿಂದರ ಕೊರಬು, ಹವಳಪ್ಪ ನಾಟೀಕಾರ, ಸುನೀಲ ನಾಟೀಕಾರ, ಯಲ್ಲಪ್ಪ ಗುಡ್ಡಳ್ಳಿ, ಸಾಯಬಣ್ಣ ಗೋಲಗೇರಿ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

- Advertisement -
- Advertisement -

Latest News

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ   ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group