spot_img
spot_img

ಕವನ : ಸತ್ತ ಹೆಣದ ಬೂದಿ

Must Read

spot_img
- Advertisement -

ಸತ್ತ ಹೆಣದ ಬೂದಿ !

ಸಿದಿಗೆಯ ಮೇಲೆ ಹೆಣ
ಹೆಣದ ಮೇಲೆ ಹಣ
ಹಣದ ಮೇಲೆ ನೊಣ
ಸುತ್ತಲೂ ಹತ್ತಾರು ಜನ
ಗೋಗರೆಯವರು ಯಾರೋ
ಒಳಗೊಳಗೆ ನಗುವವರು ಯಾರೋ ?

ಹೆಗಲು ಸೋತು
ಚಕ್ರವು ಹೆಣವನ್ನು ಸಾಗಿಸುತ್ತಿದೆ ,
ಹೂವಿನ ಹಾರ ಹೆಣದೊಳಗೆ
ಬದುಕಿದೆ ,
ಬದುಕಿ ಒಳಗೊಳಗೆ ನಗುತ್ತಿದೆ
ಸತ್ತಿರುವನು ಸತ್ವದ ಗೊಬ್ಬರವೇ !
ಇಲ್ಲವೇ ಕೊಳೆಯಲಾಗದೆ
ಇಳೆಗೆ ಹೊರೆಯೇ .

- Advertisement -

ಸೂರ್ಯನು ಮುಳುಗುವ ಹೊತ್ತು ‌
ಹೆಣ‌ವ ಕುಣಿಗೆ ಇಳಿಸಿದಾಗ
ಮೆರೆದ ನಾಲಿಗೆ ಕುಣಿಯೊಳಗೆ ಇತ್ತು ,
ಜಾತಿ ಮತ ಧರ್ಮ ಭಾಷೆಯ ದರ್ಪವಿಲ್ಲ
ಹೆಣದ ಮೇಲೆ ಹಾಕಿದ ಮಣ್ಣು ಬೀಳದೆ
ಕೊನೆಗೆ ಸುಟ್ಟರು ಕೊನೆಯಿಲ್ಲದೆ .

ಸುಟ್ಟ ಬೂದಿಯೊಳಗೆ
ಬೆಲೆ ಬಾಳುವ ಹಣವಿದೆ
ಮೇಲ್ಜಾತಿಯಿದೆ ಕೆಳಜಾತಿಯಿದೆ ,
ಆಡಂಬರದ ಐಶ್ವರ್ಯವಿದೆ,
ಎಲ್ಲವೂ ಇದ್ದ ದೇಹ
ಬೂದಿಯಾಗಿದೆ .

ಬೂದಿಯನ್ನು ಕೊಳ್ಳುವರಿಲ್ಲ
ಕೊಂಡು ಜೀವಿಸುವರಿಲ್ಲ
ಹೆಣವಲ್ಲದ ದೇಹಕ್ಕೆ ಮಾತ್ರ ಕಿತ್ತಾಡುವರು
ಕಿತ್ತು ಖಂಡ ಖಂಡ ತಿನ್ನುವರು ,
ಹಸಿದ ಕರುಳಿಗೆ ಅನ್ನ ಹಾಕದವರು
ಉಸಿರಾಡದ ಬಾಯಿಗೆ ಅಕ್ಕಿ ತುರುಕುತ್ತಿರುವರು ,
ಸತ್ತ ಹೆಣದ ಬೂದಿ
ಹನಿ ಹನಿಯೊಳಗೆ ಹರಿಯುತ್ತಿದೆ ,
ಬೂದಿ ಹೊತ್ತ ನದಿ !

- Advertisement -

ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

Previous article
- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನಗಳು

ಮರೆತು ಮನದಲ್ಲಿ ಬಸವನ ------------------------------------ ಮರೆತು ಮನದಲ್ಲಿ ಬಸವನ ವನವ ಸುತ್ತಿದರೇನು ? ಜಡಗೊಂಡ ಕಾಯವು ಕಲ್ಯಾಣಕೆ ಹಾತೊರೆಯೇ ಕುರಿ ಹಿಂಡು ಮೇಯಲು ಕಬ್ಬಿನ ತೋಟ ಹೊಕ್ಕಂತೆ ಅರಿವು ಆಚಾರ ಅನುಭಾವ ಗುರು ಲಿಂಗ ಜಂಗಮವು ಶ್ರಮ ದುಡಿಮೆಕಾಯಕ ಧರ್ಮ ಸಾಧನ...
- Advertisement -

More Articles Like This

- Advertisement -
close
error: Content is protected !!
Join WhatsApp Group