Homeಸುದ್ದಿಗಳುಅಜಿತ್ ಕೆಳಗಡೆ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಅಜಿತ್ ಕೆಳಗಡೆ ಇವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಮೂಡಲಗಿ -ತಾಲೂಕಿನ ಶಿವಾಪೂರ(ಹ) ಗ್ರಾಮದ ಯುವ ಮುಖಂಡ, ಸಮಾಜ ಸೇವಕ ಅಜಿತ್ ಕೆಳಗಡೆ ಇವರಿಗೆ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆ ಹಾಗೂ ಎಮ್. ಎಮ್. ಭಾರತ ಟಿವಿ ಪ್ರಾಯೋಜತ್ವದಲ್ಲಿ ಕೊಡಲಾಗುವ ಹೆಮ್ಮೆಯ “ಕರ್ನಾಟಕ ರತ್ನ” ಪ್ರಶಸ್ತಿಯನ್ನು  ಇತ್ತೀಚೆಗೆ ಬೆಂಗಳೂರಿನಲ್ಲಿ ಪ್ರದಾನ ಮಾಡಲಾಯಿತು.

ಪ್ರತಿ ವರ್ಷ ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆಯಿಂದ ಸಮಾಜ ಸೇವೆಯಲ್ಲಿ ತೊಡಗಿ ಕೊಂಡವರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ, ಅದರಂತೆ ಶಿವಾಪೂರ ಗ್ರಾಮದ ಅಜಿತ್ ಕೆಳಗಡೆ ಬಹಳ ದಿನಗಳಿಂದ ಸಮಾಜ ಸೇವೆಯಲ್ಲಿ ತೊಡಗಿದ್ದು ಸರಕಾರಿ ಮತ್ತು ವಿವಿದ ಸಂಘ ಸಂಸ್ಥೆಗಳಿಂದ ವಿಧವಾ ವೇತನ, ವಿದ್ಯಾರ್ಥಿ ವೇತನ ಹಾಗೂ ನೂರಾರು ಜನ ವೃದ್ಧರಿಗೆ ವೃದ್ಧಾಪ್ಯ ವೇತನ ಸೇರಿದಂತೆ, ಇನ್ನೂ ಅನೇಕ ಸಹಾಯಗಳನ್ನು ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿರುವ ಇವರನ್ನು ಗುರುತಿಸಿ ಇತ್ತೀಚೆಗೆ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ ಆಡಿಟೊರೀಯಮ ಮಹಾರಾಣಿ ಕಾಲೇಜ ಹತ್ತಿರ ಬೆಂಗಳೂರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

RELATED ARTICLES

Most Popular

error: Content is protected !!
Join WhatsApp Group