- Advertisement -
ಬೀದರ – ಬೈಕ್ ನಲ್ಲಿ ಬಂದ ಕಳ್ಳರು ಒಂದೇ ರಾತ್ರಿಯಲ್ಲಿ ೮ ಕ್ಕೂ ಹೆಚ್ಚು ಮನೆಗಳ ಬೀಗ ಮುರಿದು ಮನೆಗಳಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ನಗ ನಾಣ್ಯ ಲೂಟಿ ಮಾಡಿರುವ ಪ್ರಕರಣ ಬಸವಕಲ್ಯಾಣ ತಾಲೂಕಿನ ಉಮ್ಮಾಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಚಾಲಾಕಿ ಕಳ್ಳರು ಮನೆ ಲೂಟಿ ಮಾಡಿದ ನಂತರ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾರೆ. ಈ ಸರಣಿ ಕಳ್ಳತನದಿಂದ ಗ್ರಾಮಸ್ಥರು ಬೆಚ್ಚಿಬೀಳುವಂತಾಗಿದೆ.
ನಸುಕಿನ ಜಾವ ಮೂರು ಗಂಟೆಗೆ ಮುಖಕ್ಕೆ ಮಾಸ್ಕ್ ಹಾಕಿದ್ಧ ಕಳ್ಳರ ಚಲನವಲನ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಉಮ್ಮಾಪುರ ಗ್ರಾಮದಲ್ಲಿ ೬ ಮನೆಗಳು ಹಾಗೂ ಕೊಂಗೆವಾಡಿ ತಾಂಡಾ, ಚಂಡಿಕಾಪುರ ಗ್ರಾಮದಲ್ಲಿ ತಲಾ ಒಂದೊಂದು ಮನೆಯಲ್ಲಿ ಕಳ್ಳತನವಾಗಿದೆ.
ಉಮ್ಮಾಪುರ ಗ್ರಾಮದಲ್ಲಿ ರೂ. ೨.೭೭ ಲಕ್ಷ ಹಾಗೂ ಇತರೆ ಎರಡು ಕಡೆ ರೂ. ೧.೧೦ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ದು ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -
ವರದಿ : ನಂದಕುಮಾರ ಕರಂಜೆ, ಬೀದರ