spot_img
spot_img

ಪಿಕೆಪಿಎಸ್ ಚುನಾವಣೆಯಲ್ಲಿ ಆಯ್ಕೆಯಾದ   ಅಭ್ಯರ್ಥಿಗಳಿಗೆ, ಪ್ರಮುಖರಿಗೆ ಸನ್ಮಾನ

Must Read

spot_img
- Advertisement -

ಮೂಡಲಗಿ -ತಾಲೂಕಿನ ಹಳ್ಳೂರ ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ  ಏಳು ಅಭ್ಯರ್ಥಿಗಳಾದ ಯಾದಪ್ಪ  ನಿಡೋಣಿ. ಮಹಾವೀರ ಛಬ್ಬಿ. ಗುರುನಾಥ ಬೋಳನ್ನವರ. ಬಾಳೇಶ  ನೇಸುರ. ತುಕಾರಾಮ ಸನದಿ, ರಾಜು ತಳವಾರ.ರೇವಪ್ಪ ಸಿಂಪಿಗೇರ ಅವರಿಗೆ ಹಾಗೂ ಗ್ರಾಮದ ಪ್ರಮುಖರಿಗೆ   ಬಾಳೆಶ ನೇಸುರ  ಅವರ ತೋಟದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ  ಶ್ರೀಶೈಲ ಬಾಗೋಡಿ ಮಾತನಾಡಿ ನಮ್ಮ ಪೆನಲದಲ್ಲಿ 7 ಜನ ಗೆಲ್ಲಲು ಜನರ ಸಹಕಾರದಿಂದ ಗೆಲುವು ಸಾಧಿಸಿದ್ದೇವೆ ಒಗ್ಗಟ್ಟಿನಿಂದ ಕೆಲಸ ಕಾರ್ಯ ಮಾಡಿ ಗ್ರಾಮದ ಸುಧಾರಣೆಗೆ ಕೈ ಜೋಡಿಸೋಣ ಎಂದು ಹೇಳಿದರು.

ಮಾಜಿ ಸೈನಿಕ  ಬಾಳಪ್ಪ ಶಿವಾಪುರ ಮಾತನಾಡಿ, ವಿವಿಧೋದ್ದೇಶ ಸಹಕಾರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಅಧಿಕಾರ ಆಸೆ ಬಿಟ್ಟು ಪ್ರಾಮಾಣಿಕ ಕೆಲಸ ಮಾಡಿ ರೈತರ ಹಿತ ಕಾಪಾಡಲು ಪ್ರಯತ್ನ ಪಡಬೇಕು ಎಂದು ಹೇಳಿದರು.

- Advertisement -

ಸಮಾಜ ಸೇವಕ ಮುರಿಗೆಪ್ಪ ಮಾಲಗಾರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಈ ಸಮಯದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಭೀಮಶಿ ಮಗದುಮ. ಮುಖಂಡರಾದ ಅಡಿವೆಪ್ಪ ಪಾಲಬಾಂವಿ. ಮುಪ್ಪಯ್ಯ ಹಿಪ್ಪರಗಿ. ಮಲ್ಲಪ್ಪ ಛಬ್ಬಿ, ಯಮನಪ್ಪ ನಿಡೋಣಿ,  ರಮೇಶ ಲೋಕನ್ನವರ, ಭಿಮಪ್ಪ ಹೊಸಟ್ಟಿ, ಅಯ್ಯಪ್ಪ ಹೀರೆಮಠ, ಗೋಪಾಲ ಅಟ್ಟಮಟ್ಟಿ , ಹನಮಂತ ಹಳ್ಳೂರ, ಶ್ರೀಕಾಂತ್ ಕೌಜಲಗಿ, ಭೀಮಶೆಪ್ಪ ತೇರದಾಳ, ಈಶ್ವರ ಪಾಲಬಾಂವಿ, ಸಿದ್ಧಪ್ಪ ಕುಲಿಗೋಡ, ಲಕ್ಷ್ಮಣ ಕೌಜಲಗಿ, ಪುಂಡಲೀಕ ಸಿದ್ದಾಪೂರ, ಅಲ್ಪು ಗೌರವ್ವಗೊಳ, ವಿಠ್ಠಲ ತೋಟಗಿ, ಮಂಜು ಗುಡದನ್ನವರ, ಸಿದ್ದು ಬಡಿಗೇರ, ಪ್ರಕಾಶ ನುಚ್ಚುಂಡಿ, ಶಂಕರ ಬೋಳನ್ನವರ, ಪ್ರಕಾಶ  ರಾಮದುರ್ಗ ಸೇರಿದಂತೆ ಅನೇಕರಿದ್ದರು.

- Advertisement -
- Advertisement -

Latest News

ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ...
- Advertisement -

More Articles Like This

- Advertisement -
close
error: Content is protected !!
Join WhatsApp Group