spot_img
spot_img

ಪೌರಕಾರ್ಮಿಕರ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಮುದಾಯ ಸಹಕರಿಸಲಿ- ಬಾಲಚಂದ್ರ ಜಾಬಶೆಟ್ಟಿ.

Must Read

spot_img
- Advertisement -

ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಯಲ್ಲಿ ಪರಿಸರ ಸ್ನೇಹಿ ತಂತ್ರಜ್ಞಾನಗಳ ಅಳವಡಿಕೆ ಕುರಿತ ಉಪನ್ಯಾಸ

 

ಧಾರವಾಡ- ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ವಿಶೇಶ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡುವ ಸಂದರ್ಭದಲ್ಲಿ ಖ್ಯಾತ ಪರಿಸರವಾದಿ ಭಾಲಚಂದ್ರ ಜಾಬಶೆಟ್ಟಿ ಮಾತನಾಡುತ್ತಾ ತ್ಯಾಜ್ಯ ನಿರ್ವಹಣೆಯಲ್ಲಿನ ಪ್ರಸಕ್ತ ಸಮಸ್ಯೆಗಳು, ತ್ಯಾಜ್ಯ ನಿರ್ವಹಣೆಯಲ್ಲಿ ಅಳವಡಿಸಬಹುದಾದ ಪರಿಸರ ಸ್ನೇಹಿ ತಂತ್ರಜ್ಞಾನಗಳು, ಶೂನ್ಯ ಬಂಡವಾಳದ ಎರೆಗೊಬ್ಬರ ತಯಾರಿಕೆ, “ಅಮೃತ ಸಿಂಚನ” ಕಾರ್ಪೋರೇಷನ್ ಅಥವಾ ನಗರಸಭೆ ಹಾಗೂ ಗೃಹಮಟ್ಟದಲ್ಲಿ ಪರಿಸರ ಸ್ನೇಹಿ ಸೂಕ್ಷ್ಮಾಣು ಬಳಕೆ ತಂತ್ರಜ್ಞಾನ ಅಳವಡಿಸಿ ಜೈವಿಕ ಗೊಬ್ಬರ ತಯಾರಿಕೆಯಲ್ಲಿ ಬಳಸುವ ಸೂಕ್ಷ್ಮಾಣುಗಳನ್ನು ಸ್ಥಳೀಯವಾಗಿ ಅಭಿವೃದ್ಧಿ ಪಡಿಸುವ ಪ್ರಾತ್ಯಕ್ಷಿಕೆ, ಶಾಲಾ ಕಾಲೇಜುಗಳಲ್ಲಿ ಬ್ಯಾಕ್ಟೀರಿಯಾ ಬ್ಯಾಂಕ ಮತ್ತು ಪ್ಲಾಸ್ಟಿಕ್ ಕೇಜ್ ಸ್ಥಾಪಿಸಿವ ಕುರಿತು, ಗ್ರಾಮೀಣ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ಯೋಜನೆ ಸಿದ್ಧಪಡಿಸಲು ಹಾಗೂ ಸಮುದಾಯದ ಜಾಗೃತಿಗಾಗಿ “ಹಸಿರು ಸ್ವರ್ಣ ಸಮೀಕ್ಷೆ”, ‘Green Gold Mapping, ” ಮದ್ದು ಸುಡದಿರಿ ಮುದ್ದು ಮಕ್ಕಳೆ”- ಮಕ್ಕಳ ಆಂದೋಲನ, ತ್ಯಾಜ್ಯ ಸುಡದಿರಿ- ಸುಡಲು ಬಿಡದಿರಿ ಆಂದೋಲನ, “ಗಟ್ಟಿ ಕಸ ನಿರ್ವಹಣೆಗಾಗಿ ಬುಟ್ಟಿ ಜಾಥಾ”- ತ್ಯಾಜ್ಯ ವಿಂಗಡಣೆಗಾಗಿ ಸಮುದಾಯವನ್ನು ಪ್ರೇರೇಪಿಸುವ ಅಭಿಯಾನ, ಮನೆ ಮನೆಯ ಹಸಿಕಸದಿಂದ ಸುಲಭ ಉಪಾಯಗಳಿಂದ ಎರೆಗೊಬ್ಬರ, ಜೈವಿಕ ಗೊಬ್ಬರ ತಯಾರಿಸಿ ತಾರಸಿ ತೋಟದಿಂದ ತಿಂಗಳಿಗೆ ಸಾಕಾಗುವಷ್ಟು (ಅಂದಾಜು 2 ರಿಂದ 3 ಸಾವಿರ ರೂಪಾಯಿಬೆಲೆಬಾಳುವಷ್ಟು) ವಿವಿಧ ತರಕಾರಿ ಬೆಳೆವ ಅಭಿಯಾನ, ಬ್ಲೀಚಿಂಗ್ ಪಾವಡರ್, ಫಿನೈಲ್, ಹಾರ್ಪಿಕ್, ಕಾಲಿನ್, ಮುಂತಾದ ರಾಸಾಯನಿಕಗಳ ಬದಲಾಗಿ ಮನೆ ಆರೋಗ್ಯಕ್ಕೆ ಕ್ರಯಪರಿಣಾಮಕಾರಿ, ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿ ಪರಿಸರ ಸ್ನೇಹಿ ಜೀವನ ಶೈಲಿ ಅಳವಡಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.

- Advertisement -

ಮುಂದುವರೆದು, ವಾರ್ಡವೈಜ್, ಸ್ಟ್ರೀಟವೈಜ್ ಚೇಂಜ್ ಎಜಂಟಗಳನ್ನು ಗುರುತಿಸಿ ತರಬೇತಿ ನೀಡಿ ನಗರಸಭೆಯ ಸಹಯೋಗದಿಂದ ಕಾರ್ಯನಿರ್ವಹಿಸಲು ಪ್ರೇರಣಾ ಸಭೆಗಳನ್ನು ಆಯೋಜಿಸುವ ಕುರಿತು ಚರ್ಚಿಸಿದರಲ್ಲದೆ, ಹುಬ್ಬಳ್ಳಿಯ ಕಲಘಟಗಿ ರಸ್ತೆ ಹಾಗೂ ಧಾರವಾಡದ ಹೊಸಯಲ್ಲಾಪುರದ ಸಮೀಪದ ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಭೇಟಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆಯಲ್ಲಿ ಸಮುದಾಯದ ಸಹಭಾಗಿತ್ವಕ್ಕಾಗಿ ಪ್ರೇರೇಪಿಸು ಅಭಿಯಾನ ರೂಪಿಸಲು ಕ್ರಿಯಾಯೋಜನೆ ಸಿದ್ಧಗೊಳ್ಳುತ್ತಿದೆಯೆಂದು ಸಭೆಗೆ ತಿಳಿಸಿದರು.

ನಗರ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರು ಹಾಗೂ ಚಿಂದಿ ಆಯುವವರ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗಾಗಿ ಸಮುದಾಯ ಕೈಜೋಡಿಸಬೇಕೆಂದರು.

ತ್ಯಾಜ್ಯ ನಿರ್ವಹಣಾ ನಿಯಮಗಳು-2024 ನ್ನು ಈಗಾಗಲೇ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, 1 ನೇ ಅಕ್ಟೋಬರ 2025 ರಿಂದ ದೇಶದಾದ್ಯಂತ ಜಾರಿಯಾಗುವ ನಿರೀಕ್ಷೆಯಿದೆ. ತ್ಯಾಜ್ಯವನ್ನು ವಿಂಗಡಿಸಿ ಕೊಡಲಾರದ ಸಾರ್ವಜನಿಕರಿಗೆ ದಂಡ ವಿಧಿಸುವ ಅಧಿಕಾರವನ್ನು ಪೌರಕಾರ್ಮಿಕರಿಗೆ ನೀಡುವದು, ಕೃಷಿ ತ್ಯಾಜ್ಯವನ್ನು ಸಯಡುವುದು ಹೊಸ ಕಾನೂನಿನನ್ವಯ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂಬ ಅಂಶಗಳನ್ನೊಳಗೊಂಡಂತೆ ಅನೇಕ ಬದಲಾವಣೆ ತಂದು ಸೂಕ್ತ ತ್ಯಾಜ್ಯ ನಿರ್ವಹಣೆ ಕ್ರಮಗಳಿಂದ ಪರಿಸರ ಮಾಲಿನ್ಯ ತಡೆಯುವ ಗುರಿ ಹೊಂದಿದೆಯೆಂದರು.

- Advertisement -

ಮುಂದುವರೆದು, ಶೂನ್ಯ ಬಂಡವಾಳದ ಎರೆಗೊಬ್ಬರ ತಯಾರಿಕಾ ತಂತ್ರಜ್ಞಾನವನ್ನು ರೈತರಿಗೆ ಪರಿಚಯಿಸುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದರೊಂದಿಗೆ ರಸಾಯನಿಕ ಮುಕ್ತ ಆಹಾರ ಉತ್ಪಾದನೆಯೆಡೆಗೆ ಧಾಪುಗಾಲು ಹಾಕಬಹುದಾಗಿದೆಯೆಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಕಾರ್ಯದರ್ಶಿ ಶಂಕರ ಕುಂಬಿಯವರು ಮಾತನಾಡಿ ಕಳೆದ ಮೂರು ದಶಕಗಳಿಂದ ಪರಿಸರ ಸಂರಕ್ಷಣೆಯಲ್ಲಿ ನಾವೆಲ್ಲ ತೊಡಗಿದ್ದು ಹೆಚ್ಚು ಹೆಚ್ಚು ಜನರು ಈ ಕಾರ್ಯದಲ್ಲಿ ಜಾಗೃತಿ ಉಂಟು ಮಾಡುವುದು ಇಂದಿನ ಅವಶ್ಯಕತೆಯಾಗಿದೆಯೆಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ವಿಜ್ಞಾನ ಮಂಟಪದ ಸಂಚಾಲಕ ಡಾ. ಜಿನದತ್ತ ಹಡಗಲಿ ಯವರು ಪ್ರಾಸ್ತಾವಿಕ ವಾಗಿ ಮಾತನಾಡುವುದರೊಂದಿಗೆ ಜಾಬಶೆಟ್ಟಿಯವರನ್ನು ಸಭೆಗೆ ಪರಿಚಯಿದರು.

ನವೀನ ಶಾಸ್ತ್ರಿ ಪುರಾಣಿಕ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಶಂಕರ ಗುರವ, ಡಾ.ಶಿವಾನಂದ ಶೆಟ್ಟರ, ಡಾ. ಆನಂದ ಶಿವಪುರ, ಆರ್.ಜಿ.ತಿಮ್ಮಾಪೂರ, ಸರಸ್ವತಿ ಪೂಜಾರ, ಶಾರದಾ ದಾಬಡೆ, ನಿರ್ಮಲಾ ಹಿರೇಗೌಡರ, ಪ್ರಮೀಳಾ ಜಕ್ಕಣ್ಣವರ, ಕೆ.ಎಸ್. ಕೋರಿಶೆಟ್ಟರ, ಚನ್ನು ನೂಲ್ವಿ, ಬಸಲಿಂಗಪಗಪ ಅರವಾಳದ, ಉಲ್ಲಾಸ ಹರಪನಹಳ್ಳಿ, ಡಾ. ಆರ್.ಎಫ್. ಇಂಚಲ, ಕವಿತಾ ಎಲೆದಹಳ್ಳಿ, ಜಿ.ಜಿ.ಗೊಂದಿ ಮುಂತಾದವರು ಭಾಗವಹಿಸಿದ್ದರು.

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group