ಕಲಾವಿದ ಕುರಣೆ ಅವರಿಗೆ ರಾಜ್ಯ ಪ್ರಶಸ್ತಿ

0
144

ಮೂಡಲಗಿ– ಅಕ್ಷರ ಚಿತ್ರ ಕಲಾವಿದರಾಗಿ ಹಾಗೂ ಚಿತ್ರಕಲಾ ಶಿಕ್ಷಕರಾಗಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಸುಭಾಸ ಕುರಣೆ ಅವರಿಗೆ ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ‘ ಕಲಾರತ್ನ ರಾಜ್ಯ ಪ್ರಶಸ್ತಿ ‘ ಘೋಷಣೆಯಾಗಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅಕಾಡೆಮಿ ಅಧ್ಯಕ್ಷ ಭದ್ರಾವತಿ ರಾಮಾಚಾರಿಯವರು, ಕುರಣೆಯವರು ರಾಜ್ಯ, ರಾಷ್ಡ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಲಿ ಎಂದು ಹಾರೈಸಿದ್ದಾರೆ.

ಸುಭಾಸ ಕುರಣೆಯವರಿಗೆ ಈ ಪ್ರಶಸ್ತಿಯನ್ನು ದಿ. ೨.೩.೨೫ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.