spot_img
spot_img

ಜನವರಿ 29 ರಂದು ಚಂದನ ಟಿವಿಯಲ್ಲಿ ಡಾ. ಶಶಿಕಾಂತ ಪಟ್ಟಣ ವಿಶೇಷ ಸಂದರ್ಶನ

Must Read

spot_img
- Advertisement -

ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಸಂಸ್ಥೆಯ ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ಅವರ ಸಂದರ್ಶನವು ಇದೇ ಜನವರಿ 29 ರಂದು ಬೆಳಿಗ್ಗೆ 8 ಘಂಟೆಗೆ ಚಂದನವಾಹಿ‍ನಿಯಲ್ಲಿ ಮೂಡಿಬರಲಿದೆ.

ಐದು ವರ್ಷದ ಹಿಂದೆ ಬಸವ ತತ್ವ ಪ್ರಚಾರದ ಸಲುವಾಗಿ ಸಂಸ್ಥೆಯು ಹುಟ್ಟಿಕೊಂಡಿದ್ದರಿಂದ ಹಿಡಿದು ಇಲ್ಲಿಯವರೆಗೆ ನಡೆದು ಬಂದ ದಾರಿಯನ್ನು, ಸಂಸ್ಥೆಯ ಅಡಿಯಲ್ಲಿರುವ ಅಕ್ಕನ ಅರಿವು, ವಚನ ಅಧ್ಯಯನ ವೇದಿಕೆಯಿಂದ ಪ್ರತಿ ಶನಿವಾರ, ರವಿವಾರ ನಡೆಯುವ ಗೂಗಲ್ ಮೀಟ್ ಗಳಲ್ಲಿ ಪ್ರಸಿದ್ದ ಉಪನ್ಯಾಸಕರಿಂದ ನಡೆಯುವ ಉಪನ್ಯಾಸಗಳು, ವೇದಿಕೆಯಿಂದ ಪ್ರಕಟಣೆಗೊಳ್ಳುವ ವಿವಿಧ ಪುಸ್ತಕಮಾಲೆಗಳು , ಸಮಾಜದಲ್ಲಿ ಲಿಂಗಾಯತ ಧರ್ಮ ಅಥವಾ ಬಸವ ತತ್ವಕ್ಕೆ ಏನಾದರೂ ವ್ಯತ್ಯಯ ಉಂಟಾದರೆ ಮಾಡಿದ ಪ್ರತಿಭಟನೆಗಳು, ಶರಣರ ಚಿಂತನೆಯ ಕಾರ್ಯಾಗಾರಗಳು, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಜೊತೆಗೆ ನಡೆಯುತ್ತಿರುವ ಕಾರ್ಯಕ್ರಮಗಳು ಹೀಗೆ ಹತ್ತು ಹಲವಾರು ವಿಷಯಗಳ ಬಗೆಗೆ ಮತ್ತು ಜಗತ್ತಿನಾದ್ಯoತ ಈಗಾಗಲೇ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರವು ಬಸವ ತತ್ವ ಪ್ರಚಾರದಲ್ಲಿ, ವಚನಗಳ ಸಾರವನ್ನು ಯಥಾವತ್ತಾಗಿ ತಿಳಿಸುವಲ್ಲಿ ಹೇಗೆ ಮುಂಚೂಣಿಯಲ್ಲಿದೆ ಎನ್ನುವುದನ್ನು ಡಾ. ಶಶಿಕಾಂತ ಪಟ್ಟಣ ಅವರು ತಮ್ಮ ಸಂದರ್ಶನದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

ಇದೊಂದು ಬಸವತತ್ವ ವಿಚಾರದಲ್ಲಿ ಅಪರೂಪದ ಸಂದರ್ಶನವಾಗಲಿದೆ ಎಂದು ಬಸವ ತಿಳಿವಳಿಕೆ ಮತ್ತು ಸಂಶೊಧನಾ ಕೇಂದ್ರ ಪುಣೆ ಇದರ ವಿಶ್ವಸ್ಥರಾದ ಸುಧಾ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group