ಸಿಂದಗಿ — ಪಟ್ಟಣದಲ್ಲಿನ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯು ಶಿಕ್ಷಣವನ್ನು ನೀಡುವುದರ ಜೊತೆಗೆ ಇಂದು ವ್ಯವಹಾರಿಕ ಕ್ಷೇತ್ರದಲ್ಲಿ ಕಾಲಿಟ್ಟಿರುವುದು ಸಂತಸ ತಂದಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಅಶೋಕ ಮನಗೂಳಿ ಹೇಳಿದರು.
ಅವರು ಬಸ್ ನಿಲ್ದಾಣದ ಹತ್ತಿರ ಇರುವ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಗೆ ಸಂಬಂಧಿಸಿದ ಜಾಗದಲ್ಲಿ ವಾಣಿಜ್ಯ ಸಂಕೀರ್ಣದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಈ ಸಂಸ್ಥೆ ಒಂದು ಪದವಿ ಕಾಲೇಜು, ಒಂದು ಪದವಿ ಪೂರ್ವ, ಒಂದು ಆಯುರ್ವೇದಿಕ್ ಮೆಡಿಕಲ್ ಕಾಲೇಜು, ಎರಡು ಪ್ರೌಢಶಾಲೆ, ಒಂದು ಪ್ರಾಥಮಿಕ ಶಾಲೆ, ಒಂದು ಮಹಿಳಾ ಪದವಿ ಪೂರ್ವ ಮಹಾವಿದ್ಯಾಲಯವನ್ನು, ಒಂದು ಬೋರ್ಡಿಂಗ್ ಒಳಗೊಂಡಿರುವ ಸಾವಿರಾರು ಸಂಖ್ಯೆಯಲ್ಲಿ ಈ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಹೆಚ್ಚು ಗ್ರಾಮೀಣ ಪ್ರದೇಶದ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ಸ್ಥಾಪಿಸುವ ಮತ್ತು ಬೇರೆ ಬೇರೆ ವಿಭಾಗದ ಶಿಕ್ಷಣ ಸಂಸ್ಥೆ ಗಳನ್ನ ಸ್ಥಾಪಿಸುವ ಯೋಜನೆಯನ್ನು ಒಳಗೊಂಡಿದ್ದೇವೆ ಎಂದ ಅವರು ಸಂಸ್ಥೆಯ ಅಭಿವೃದ್ಧಿಗಾಗಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಾಣ ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಈ ವೇಳೆ ಸಂಸ್ಥೆಯ ನಿರ್ದೇಶಕರಾದ ಶಿವಪ್ಪಗೌಡ ಬಿರಾದಾರ, ಶಂಕರಗೌಡ ಪಾಟೀಲ್ ಯಂಕಂಚಿ, ವಿ. ಬಿ. ಕುರುಡೆ, ವಿ. ಎಸ್. ಪಾಟೀಲ್ ಕನ್ನೊಳ್ಳಿ, ಬಿ.ಜಿ ನೆಲ್ಲಗಿ ಮತ್ತು ಪ್ರಾಧ್ಯಾಪಕರಾದ ಡಾ. ಅರವಿಂದ ಮನಗೂಳಿ, ಗುರನಗೌಡ ಪಾಟೀಲ್ ನಾಗಾವಿ, ಪ್ರಾಚಾರ್ಯರಾದ ಡಾ. ಬಿ.ಜಿ ಪಾಟೀಲ, ಎ ಆರ್ ಹೆಗ್ಗಣದೊಡ್ಡಿ, ಬಿ. ಸಿ. ಕುಲಕರ್ಣಿ ಸೇರಿದಂತೆ ವಿವಿಧ ಅಂಗ ಸಂಸ್ಥೆಗಳ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.