ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ.
ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ ವಾತಾವರಣ. ಹಾಗಿದ್ರೆ ಏನಿದು ಸಂಭ್ರಮ ಅಂತೀರಾ? ಹೇಳ್ತೀನಿ ನೋಡಿ. ಇದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬದ ಸಂಭ್ರಮ.
ಶಾಲಾ ಮುಖ್ಯದ್ವಾರದ ಬಳಿ ಕಲಿಕಾ ಹಬ್ಬ ಎಂದು ತಲೆಬರಹದಲ್ಲಿ ಕಂಗೊಳಿಸುವ ರಂಗವಲ್ಲಿ. ಎಲ್ಲ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಿರುವ ಮಕ್ಕಳ ಕಲಿಕಾ ಹಬ್ಬ ನಿಜಕ್ಕೂ ಹಬ್ಬದ ವಾತಾವರಣವನ್ನೇ ಸೃಷ್ಟಿಸಿತ್ತು. ಅರಟಗಲ್ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಂದ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಬಂದಿದ್ದ ಶಿಕ್ಷಕ ವೃಂದ ಅಲ್ಲಿತ್ತು. ಕ್ರಿಯಾಶೀಲ ಸಮೂಹ ಸಂಪನ್ಮೂಲ ವ್ಯಕ್ತಿ ಜಿ ಎಸ್ ಚಿಪ್ಪಲಕಟ್ಟಿಯವರ ವಿವಿಧ ಸ್ಪರ್ಧೆಯಲ್ಲಿ ನಿರ್ಣಯ ನೀಡಲು ಬಂದ ಶಿಕ್ಷಕರು ಅಲ್ಲಿದ್ದರು. ಅನುಭವಿ ಹಾಗೂ ದಕ್ಷ ಮುಖ್ಯೋಪಾಧ್ಯಾಯ ಹಾಗೂ ನನ್ನ ಆತ್ಮೀಯ ಸ್ನೇಹಿತ ಗುರುನಾಥ ಪತ್ತಾರ ಅವರ ಸಂಘಟನೆ ಅಲ್ಲಿ ಎದ್ದು ಕಾಣುತ್ತಿತ್ತು.
ಸರ್ಕಾರಿ ಶಾಲಾ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದು ಕಲಿಕಾ ಹಬ್ಬದ ಉದ್ದೇಶ. ಮಕ್ಕಳು ಚಟುವಟಿಕೆ ಮೂಲಕ ಸಂತೋಷದಾಯಕ ಕಲಿಕೆಯನ್ನು ಹೊಂದಬೇಕು ಎಂಬ ಕಾರಣ , ಜ್ಞಾಪಕ ಶಕ್ತಿ. ಹಾಡು, ,ಕಥೆ ಹೇಳುವ ವಿವಿಧ ಚಟುವಟಿಕೆಗಳನ್ನು ಇಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯ ಅತಿಥಿಗಳಾಗಿ ಡೈಟ್ ಉಪನ್ಯಾಸಕ ಎಂ ಆರ್ ಬೇವಿನಗಿಡದ, ಶಿಕ್ಷಣ ಸಂಯೋಜಕ ಸುಧೀರ್ ವಾಘೇರಿ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ ಬಿ ಕಡಕೋಳ, ಡಿ. ಎಲ್ ಭಜಂತ್ರಿ. ಕ. ರಾ. ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ರವಿ ಸಣಕಲ್, ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪತ್ತಿನ ಸಹಕಾರಿ ಸಂಘದ ಅವಿರೋಧವಾಗಿ ಚುನಾಯಿತ ಪ್ರತಿನಿಧಿಗಳಾದ ಹಣಮಂತಗೌಡ ಪಾಟೀಲ, ಗ್ರಾಮದ ಹಿರಿಯರು ಎಸ್ ಡಿ ಎಂ ಸಿ ಸದಸ್ಯರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
*ನಮಾಮಿ ನಮಾಮಿ ಈಶ್ವರನಾಟ್ಯ ಪೂಜಿತಂ* ಗೀತೆಯ ನೃತ್ಯದೊಂದಿಗೆ ಕಾರ್ಯ ಕ್ರಮ ಪ್ರಾರಂಭಗೊಂಡಿತು. ವಿಶಿಷ್ಟವಾದ ಉದ್ಘಾಟನಾ ಸಮಾರಂಭ ಕಲಿಕಾ ಹಬ್ಬ ಶೀರ್ಷಿಕೆ ಅನಾವರಣದ ಮೂಲಕವಾಯಿತು.
ಡೈಟ್ ಉಪನ್ಯಾಸಕ ಎಂ ಆರ್ ಬೇವಿನಗಿಡದ, ಶಿಕ್ಷಕ ಸಾಹಿತಿ ವೈ ಬಿ ಕಡಕೋಳ, ರವಿ ಸಣಕಲ್ಪ, ರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪತ್ತಿನ ಸಹಕಾರಿ ಸಂಘದ ಅವಿರೋಧವಾಗಿ ಚುನಾಯಿತ ಪ್ರತಿನಿಧಿಗಳಾದ ಹಣಮಂತಗೌಡ ಪಾಟೀಲ. ನೌಕರರ ಸಂಘದ ಪ್ರತಿನಿಧಿಗಳಾದ ರವಿ ಸಣಕಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜಿ ಎಸ್ ಚಿಪ್ಪಲಕಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಸುಧೀರ್ ವಾಘೇರಿ ಕಲಿಕಾ ಹಬ್ಬ ಹೇಗಿದೆ ಎಂದು ಹೇಳಿದರೆ. ನೌಕರರ ಸಂಘದ ಪ್ರತಿನಿಧಿಗಳಾದ ಆಯ್ಕೆ ಆಗಲು ತಮ್ಮೆಲ್ಲರ ಸಹಕಾರ ಕಾರಣ ಎಂದು ರವಿ ಸನಕಲ್ ಹೇಳಿದರೆ. ವೈ ಬಿ ಕಡಕೋಳ ಈ ಕ್ಲಸ್ಟರ್ ನ ಒಂದೊಂದು ರತ್ನ ಗಳ ಕುರಿತು ತಿಳಿಸಿದರು. ಡೈಟ್ ಉಪನ್ಯಾಸಕ ಎಂ ಆರ್ ಬೇವಿನಗಿಡದ ಕಲಿಕಾ ಹಬ್ಬದ ಮಹತ್ವದ ಕುರಿತು ಹೇಳಿದರು. ವೇದಿಕೆಯಲ್ಲಿ ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿ ಶಿಕ್ಷಕ ವೃತ್ತಿ ಕೈಗೊಂಡ ಎಸ್ ಬಿ ಬೇವಿನಗಿಡದ, ಮಂಜುನಾಥ ಪಾಟೀಲ ಸೇರಿದಂತೆ ಶಾಬುದ್ದೀನ ಜಿಡ್ಡೀಮನಿ, ಉಮೇಶ ಶೀಲವಂತ, ಫಕ್ಕೀರಪ್ಪ ಕಲಕುಟ್ರಿ, ಸಂಜುನಾಥ ಸಾಲಿ, ಪೂರ್ಣಿಮಾ ನಲವಡೆ ಮಹಾಂತೇಶ ಜೇವೂರ, ಬಿ. ಟಿ. ಭಜಂತ್ರಿ, ಮಹಾದೇವ ಜೋತ್ಕನ್ನವರ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯ ರುಗಳು, ಕ್ರಿಯಾಶೀಲ ಶಿಕ್ಷಕ ವೃಂದ ಭಾಗವಹಿಸಿದ್ದರು.
ನಂತರ ಜರುಗಿದ ವಿವಿಧ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ಕೊಠಡಿಗಳ ಲ್ಲಿ ಆಯೋಜನೆ ಮಾಡಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹನೀಯರು ಅವುಗಳನ್ನು ವೀಕ್ಷಿಸುತ್ತಾ ಸಾಗಿದರು. ಕಥೆ ಹೇಳುವ ಚಟುವಟಿಕೆ, ಸ್ಮರಣ ಶಕ್ತಿ, ಗಟ್ಟಿ ಓದು, ಚಿತ್ರ ನೋಡಿ ಕಥೆ ಹೇಳುವ. ಕ್ವಿಜ್ ಹೀಗೆ ಎಲ್ಲ ಚಟುವಟಿಕೆ ಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ಯಿಂದ ಪಾಲ್ಗೊಂಡಿರುವುದು ಕಂಡು ಬಂದಿತು.
ಶಾಲಾ ಶಿಕ್ಷಕರ ಸಿಬ್ಬಂದಿ ಯವರಾದ ಸಿ ಟಿ ಕುಲಮೂರ, ಎಸ್ ವಿ ಯಲಿಗಾರ, ಜ್ಯೋತಿ ಹಳ್ಳೂರ, ಎಸ್ ಜಿ ಕರೋಶಿ, ಎ.ಜಿ.ನಡುಗೇರಿ, ಎಸ್ ಪಿ ಸಂಪಗಾವಿ ಸೇರಿದಂತೆ ಮಂಜುನಾಥ ತ್ಯಾಪಿ.ಬಾರಿಗಿಡದ, ಪ್ರಭು ಹನಸಿ, ಬೀರಪ್ಪ ಜೋಗೇರ, ಕೋಟಗಿ, ಗುರುಮಾತೆಯರಾದ ಎಸ್ ಎಂ ಪಾಟೀಲ, ರೂಪಾ ಸೂರ್ಯವಂಶಿ, ದೀಪಾ ಬೋಸಲೆ, ತೋಟಗಿ, ದೇವಲ್ಲಿ.ಹೂಗಾರ, ಅಲ್ಲೈನವರ ಮೊದಲಾದವರು ಬಹಳ ಉತ್ಸಾಹದಿಂದ ಪಾಲ್ಗೊಂಡಿದ್ದ ರು.
ಗುರುನಾಥ ಪತ್ತಾರ ವಿಶಿಷ್ಟವಾಗಿ ಕಾರ್ಯ ಕ್ರಮ ಆಯೋಜಿಸಿದ ರೀತಿ ಅದ್ಭುತ.
ಕಾರ್ಯ ಕ್ರಮ ದ ಸ್ವಾಗತವನ್ನು ಗುರುನಾಥ ಪತ್ತಾರ ನಡೆಸಿದರೆ, ಗುರುಮಾತೆಯರಾದ ಎಸ್ ಜಿ ಕರೋಶಿ ಕಾರ್ಯ ಕ್ರಮ ನಿರ್ವಹಿಸುವ ರೀತಿ ವೈಶಿಷ್ಟ್ಯವನ್ನು ಹೊಂದಿತ್ತು.
1)ಗಟ್ಟಿ ಓದು
2)ಕಥೆ ಹೇಳುವುದು
3) ಕೈಬರಹ
4)ಸಂತೋಷದಾಯಕ ಗಣಿತ
5)ಟ್ರೇಷರ ಹಂತ 6)ರಸಪ್ರಶ್ನೆ
7)ಪೋಷಕರು ಮಕ್ಕಳ ಸಹಸಂಬಂಧ
8)ಸಂತೆ ಮೇಳ
9)ಪ್ಯಾಶನ್ ಷೋ ಈ ಎಲ್ಲಾ ಚಟುವಟಿಕೆ ಗಳಲ್ಲಿ ವಿಜೇತರಿಗೆ ಹಾಗೂ ಭಾಗವಹಿಸಿದವರೆಲ್ಲರಿಗೂ ಬಹುಮಾನ ಹಾಗೂ ಪ್ರೋತ್ಸಾಹ ದಾಯಕ ಬಹುಮಾನ ನೀಡಲಾಯಿತು.
ಕಲಿಕೆ ಎನ್ನುವುದು ನಿರಂತರತೆಯ ಗುಣ ಹೊಂದಿದೆ. ಇದು ವೃತ್ತಿ, ಜ್ಞಾನ, ಸೇರಿದಂತೆ ಮಾನವ ಸರ್ವೋತ್ತಮ ಬೆಳವಣಿಗೆಗೆ ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಕ್ಷಣದ ಜತೆಗೆ ಇನ್ನಿತ್ತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರವಾಗಿ ಕಲಿಯುವ ಪ್ರವೃತ್ತಿ ಬೆಳೆಸಿಕೊಳ್ಳಲು ಕಲಿಕಾ ಹಬ್ಬ ನಿಜಕ್ಕೂ ಉತ್ತಮ ಕಾರ್ಯಕ್ರಮವಾಗಿತ್ತು