spot_img
spot_img

ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಗೆ ಬೆಳಗಾವಿ ಜಿಲ್ಲೆಗೆ 836 ಕೋಟಿ ರೂ. – ಈರಣ್ಣ ಕಡಾಡಿ

Must Read

spot_img
- Advertisement -

ಮೂಡಲಗಿ: ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಿಂದ ಅಮೃತ್ 2.0 ಯೋಜನೆಯಡಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಬೆಳಗಾವಿ ವಿಭಾಗದ ಜಿಲ್ಲೆಯ 32 ನಗರ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ಶೇ 50%, ರಾಜ್ಯ ಸರ್ಕಾರದ ಶೇ 40% ಹಾಗೂ ಸಾರ್ವಜನಿಕರ ವಂತಿಗೆ ಶೇ 10% ಈ ಅನುಪಾತದಲ್ಲಿ ಒಟ್ಟು 836.45 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ರವಿವಾರ ಫೆ- 16ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರ ಸಹಭಾಗಿತ್ವದಲ್ಲಿ ಅದರಲ್ಲೂ ವಿಶೇಷವಾಗಿ ಮೂಡಲಗಿ, ನಾಗನೂರು, ಕಲ್ಲೋಳಿ, ಅರಭಾವಿ, ಘಟಪ್ರಭಾ ಈ ಐದು ಅವಳಿ ನಗರಗಳಿಗೆ ನಿರಂತರ ನೀರು ಪೂರೈಸುವ ಉದ್ದೇಶದಿಂದ 165 ಕೋಟಿ ರೂಪಾಯಿಗಳ ಅನುದಾನ ಮಂಜೂರಾಗಿದೆ. ಈಗಾಗಲೇ ಜಿಲ್ಲೆಯ ಹಲವು ಕಡೆ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಅತಿ ಶೀಘ್ರದಲ್ಲಿ ಉಳಿದೆಲ್ಲ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಸದರಿ ಕಾಮಗಾರಿಗಳಿಗೆ ಅನುದಾನ ಮಂಜೂರಿ ಮಾಡಿದ ನೀಡಿದ ಕೇಂದ್ರ ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್ ಹಾಗೂ ಕರ್ನಾಟಕ ರಾಜ್ಯ ನಗರಾಭಿವೃದ್ಧಿ ಸಚಿವರಾದ ಶ್ರೀ ಭೈರತಿ ಸುರೇಶ್ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಸಂಸದ ಈರಣ್ಣ ಕಡಾಡಿ ಹೇಳಿದರು.

- Advertisement -

ಜಿಲ್ಲೆಗೆ ಮಂಜೂರಾದ ಕಾಮಗಾರಿಗಳ ವಿವರಗಳು
ಅ.ನಂ ಕಾಮಗಾರಿಗಳ ವಿವರ ಒಟ್ಟು ಮಂಜೂರಾದ ಅನುದಾನ
1 ಹಾರುಗೇರಿ ಮತ್ತು ಮುಗಳಖೋಡ 51.94 ಕೋ.ರೂ
2 ಚನ್ನಮ್ಮ ಕಿತ್ತೂರ 25.21
3 ಎಂ.ಕೆ.ಹುಬ್ಬಳ್ಳಿ 18.09
4 ಹುಕ್ಕೇರಿ 9.63
5 ಚಿಂಚಲಿ 23.90
6 ರಾಯಬಾಗ 22.83
7 ಖಾನಾಪೂರ 20.52
8 ಐನಾಪುರ 14.13
9 ಯಕ್ಸಂಬಾ 16.36
10 ಅಥಣಿ 47.67
11 ಕಂಕಣವಾಡಿ 14.83
12 ಕುಡಚಿ 18.62
13 ಸಂಕೇಶ್ವರ 11.74
14 ಮುನವಳ್ಳಿ 39.11
15 ಅಂಕಲಗಿ-ಅಕ್ಕತಂಗೇರಹಾಳ 42.26
16 ಬೊರಗಾಂವ 19.98
17 ಘಟಪ್ರಭಾ, ಅರಭಾವಿ, ಕಲ್ಲೋಳಿ, ನಾಗನೂರ ಮತ್ತು ಮೂಡಲಗಿ 165.44
18 ಕಾಗವಾಡ, ಶೇಡಬಾಳ, ಉಗಾರ ಖುರ್ದ 66.74
19 ಕಬ್ಬೂರ 22.25
20 ರಾಮದುರ್ಗ 19.56
21 ಯರಗಟ್ಟಿ 29.14
22 ಕೊಣ್ಣುರ 19.67
23 ನಿಪ್ಪಾಣಿ 32.83
24 ಮಚ್ಛೆ ಮತ್ತು ಪೀರನವಾಡಿ 85.00
ಒಟ್ಟು 836.45 ಕೋಟಿ ರೂ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗರಿಕರು ಸ್ವತ್ತುಗಳಿಗೆ ಇ ಖಾತಾ ಪಡೆದುಕೊಳ್ಳಬೇಕು – ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ - ಪುರಸಭೆ ಮತ್ತು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿನ ಅನಧಿಕೃತ ಸ್ವತ್ತುಗಳಿಗೂ ಸಹ ಇ- ಖಾತಾ ಅಭಿಯಾನವು ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಶಾಸಕ...
- Advertisement -

More Articles Like This

- Advertisement -
close
error: Content is protected !!
Join WhatsApp Group