ಎಂಈಎಸ್ ಪುಂಡಾಟಿಕೆ ಖಂಡಿಸಿ ಕರ್ನಾಟಕ ರಣಧೀರ ಪಡೆಯಿಂದ ಪ್ರತಿಭಟನೆ

Must Read

ಸಿಂದಗಿ; ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆಯನ್ನು ಖಂಡಿಸಿ ಕರ್ನಾಟಕ ರಣಧೀರ ಪಡೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಡಾ ಅಂಬೇಡ್ಕರ ವೃತ್ತದಲ್ಲಿ ಜಮಾಯಿಸಿ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉತ್ತರ ವಲಯ ಅಧ್ಯಕ್ಷ ಸಂತೋಷ ಮಣಿಗೇರಿ ಮಾತನಾಡಿ, ಬೆಳಗಾವಿಯಲ್ಲಿ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ ಮಹಾದೇವ ಹುಕ್ಕೇರಿ ಎಂಬುವವರು ಮರಾಠಿ ಮಾತನಾಡಿಲ್ಲ ಎನ್ನುವ ಕಾರಣಕ್ಕೆ ಎಂಇಎಸ್ ಪುಂಡರು ಕಂಡಕ್ಟರ ಅವರ ಮೇಲೆ ಬಣ್ಣ ಎರಚಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಅದನ್ನು ಅವಲೋಕನ ಮಾಡಬೇಕಾದ ಕರ್ನಾಟಕ ಪೊಲೀಸ ಇಲಾಖೆ ಕಂಡಕ್ಟರರ ಮೇಲೆ ಪೋಕ್ಸೋ ಪ್ರಕರಣವನ್ನು ದಾಖಲಿಸಿ ಕನ್ನಡ ಮಾತೆಗೆ ಅವಮಾನ ಮಾಡಿದ್ದಾರೆ. ರಾಜ್ಯ ಸರಕಾರಕ್ಕೆ ಕನ್ನಡದ ಸ್ವಾಭಿಮಾನ, ನೈತಿಕತೆ ಇದ್ದರೆ ಕಂಡಕ್ಟರ ಮೇಲಾದ ಪ್ರಕರಣವನ್ನು ಹಿಂಪಡೆದು ಪ್ರಕರಣವನ್ನು ದಾಖಲಿಸಿಕೊಂಡು ಸಿಪಿಐ ಕಲ್ಯಾಣಕುಮಾರ ಶೆಟ್ಟಿ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕಾನೂನಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕನ್ನಡಿಗರ ತಂಟೆಗೆ ಬಂದರೆ ಎಂಇಎಸ್ ಪುಂಡರನ್ನು ಬಿಡುವುದಿಲ್ಲ. ಬೆಳಗಾವಿ ನಮ್ಮದು ಅವರ ಪುಂಡಾಟಿಕೆ ನಮ್ಮ ಮುಂದೆ ನಡೆಯೋದಿಲ್ಲ ಸಿಂದಗಿ-ಪುಣೆ ಹಾಗೂ ಕಲ್ಯಾಣ ಕರ್ನಾಟಕ ಬಸ್ಸುಗಳ ಡ್ರೈವರ ಕಂಡಕ್ಟರ ಮೇಲೆ ಹಲ್ಲೆ ಮಾಡಿದಲ್ಲದೆ ಬಸ್ಸುಗಳಿಗೆ ಹಾನಿ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಹ ಸಚಿವ ಜಿ ಪರಮೇಶ್ವರ ಅವರ ಓಲೈಕೆ ರಾಜಕಾರಣದಿಂದ ಹೊರ ಬಂದು ಇಂತಹವರ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಬಿಜೆಪಿಗೆ ಆಗಿರುವ ಪರಿಸ್ಥಿತಿಯಂತೆ ೨೦೨೮ರ ಚುನಾವಣೆಯಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಹರ್ಷವರ್ಧನ ಪೂಜಾರಿ, ರಹಿಮ ಕೊಕಟನೂರ ಮಾತನಾಡಿ, ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ ಮಹಾದೇವ ಹುಕ್ಕೇರಿ ಎಂಬುವವರ ಮೇಲೆ ಬಣ್ಣ ಎರಚಿ ಮಾರಣಾಂತಿಕ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಮಾತನಾಡಿದ್ದಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಕರ್ನಾಟಕದ ಎಲ್ಲ ಕನ್ನಡಪರ ಸಂಘಟನೆಗಳು ಒಕ್ಕೂರಲಿನಿಂದ ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂ ಕಾರ್ಯದರ್ಶಿ ಮಹಿಬೂಬ ಆಳಂದ, ರವಿ ಶಿರವಾಳ, ತಿರುಪತಿ ಬಂಡ್ಡಿವಡ್ಡರ, ರಾಮು ಗುತ್ತೇದಾರ, ಆನಂದ ಕುರಡಿ, ಸಿದ್ದು ತಮದಡ್ಡಿ, ಬಸನಗೌಡ ಇಟಗಿ, ಅಪ್ಪು ದೊಡಮನಿ, ಸಲೀಂ ಕನ್ನೋಳ್ಳಿ, ಅಜೀಜ ಆಳಂದ, ಹಣಮಂತ ಕುಂಬಾರ, ಮಲ್ಲು ಡಂಬಳ, ದೇವೇಂದ್ರ ಗೌಂಡಿ, ಮುತ್ತು ಗೌಂಡಿ, ಸೇರಿದಂತೆ ಅನೇಕರಿದ್ದರು.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group