ಬೆಳಗಾವಿ: ನಿವೃತ್ತ ಮುಖ್ಯೋಪಾಧ್ಯಾಯಿನಿ ಶರಣೆ ಶಾಂತಾ ಪಾಟೀಲ (ಮೆಣಸಿನಕಾಯಿ)ರಿಗೆ ಸಂತಾಪ ಸಭೆ ರವಿವಾರ ಕನ್ನಡ ಭವನದಲ್ಲಿ ಆಯೋಜಿಸಲಾಗಿತ್ತು.
ಶ್ರೀಯುತರು ಫೆಬ್ರುವರಿ 21 ರಂದು ಅಕಾಲಿಕ ನಿಧನರಾಗಿದ್ದು ಅವರ ಕುಟುಂಬಕ್ಕೂ ಬಂಧುಬಳಗಕ್ಕೆ ನೋವು ಉಂಟಾಗಿದ್ದು ಆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ
ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟ್ಟಗುಡ್ಡ ಪ್ರಾರ್ಥಿಸಿದರು.
ಈ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಲಾಯಿತು. ಶ್ರೀಯುತ ಶಾಂತಾ ಅವರು ಶಿಕ್ಷಕಿ ಯಾಗಿ ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದರು. ಉಣಕಲ್ ಗ್ರಾಮದ ಸುಸಂಸ್ಕೃತ ಪಾಟೀಲ ಮನೆತನದಲ್ಲಿ ಜನಿಸಿ ಶರಣ ಸಂಪ್ರದಾಯದ ಸಭ್ಯತೆ, ಕಾಯಕಜೀವಿಯಾಗಿ ಗುರುತಿಸಿಕೊಂಡಿದರು ಎಂದು ಸ್ಮರಿಸಲಾಯಿತು.
ಈ ಸಭೆಯಲ್ಲಿ ತಾಲ್ಲೂಕ ಅಧ್ಯಕ್ಷ ಸುರೇಶ ಹಂಜಿ, ವೀರಭದ್ರ ಅಂಗಡಿ, ಹಿರಿಯ ಸಾಹಿತಿ ಶಿ.ಗು.ಕುಸಗಲ್ ದಂಪತಿ, ಸಿ.ವೈ. ಮೆಣಸಿನಕಾಯಿ, ಪ್ರೊ ಬಿ.ಬಿ. ಮಠಪತಿ, ರಮೇಶ ಬಾಗೇವಾಡಿ ಸೇರಿದ್ದಂತೆ ಇತರರು ಸಂತಾಪ ಸೂಚಿಸಿ ನಮನ ಸಲ್ಲಿಸಿದರು.
ಪತಿ ಕಸಾಪ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ, ಇಬ್ಬರು ಪುತ್ರರು, ಅಪಾರ ಬಂಧು ಬಳಗ ಹೊಂದಿದ್ದಾರೆ.