ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ,ಪಾಲಕರ ಜೊತೆಯಲ್ಲಿ ಸಂಪರ್ಕ ಮಾಡಿ ವಿಷಯ ಮುಟ್ಟಿಸುವುದು ಮತ್ತು ಮಕ್ಕಳಿಗೆ ಧೈರ್ಯ, ಮತ್ತಷ್ಟು ಉತ್ಸುಕತೆ ಹೆಚ್ಚಿಸುವ ಕಾರ್ಯ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ನಡೆದಿದೆ.
ಕೆ.ಎಚ್. ಸೋಲವಾಲ್ಕರ ಸರಕಾರಿ ಪ್ರೌಢಶಾಲೆ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸ್ನೇಹ ಪಾಟೀಲ ಮನೆಗೆ ತಾಲೂಕಾ ದಂಡಾಧಿಕಾರಿಗಳಾದ ಶಿವಾನಂದ ಬಬಲಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಫ್. ಜಿ. ಚಿನ್ನನ್ನವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಾದ ವಾಯ್. ಕೆ. ಗದಾಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ ಮನ್ನಿಕೇರಿ ಮತ್ತು ಮೂಡಲಗಿ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಬಿ. ಎಂ. ಕುಂಬಾರ ಇವರು ಶಿಕ್ಷಕರೊಡನೆ ಬೇಟಿ ನೀಡಿ ವಿದ್ಯಾರ್ಥಿನಿಯ ಅಭ್ಯಾಸದ ಕುರಿತು ಚರ್ಚೆ ಮಾಡಿದರು.
ಉತ್ತಮ ಫಲಿತಾಂಶ ಪಡೆಯುವಂತೆ ಸಲಹೆ ಸೂಚನೆಗಳನ್ನು ನೀಡಿದರಲ್ಲದೆ ಮಕ್ಕಳಿಗೆ ಅಭ್ಯಾಸಕ್ಕೆ ಎಲ್ಲ ರೀತಿಯ ಸಹಕಾರ ಅನುಕೂಲತೆ ಒದಗಿಸಿಕೊಡಬೇಕು ಎಂದು ಪಾಲಕರಿಗೆ ಸೂಚನೆ ನೀಡಿದರು.