ನಗರದ ಕೇಂದ್ರ ಗ್ರಂಥಾಲಯದಲ್ಲಿ ಬಸವ ಜಯಂತಿ ಆಚರಣೆ
ಬೆಳಗಾವಿ: ಹನ್ನೆರಡನೆಯ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಮಹಾನ್ ವ್ಯಕ್ತಿಗಳಲ್ಲಿ ಜಗಜ್ಯೊತಿ ಬಸವಣ್ಣನವರು ಒಬ್ಬರು.ಬಸವಣ್ಣನವರು ಕಾಯಕದಲ್ಲಿ ಕೈಲಾಸ ಕಾಣುವುದು,ಸಮಾನತೆ, ಮಹಿಳಾ ಸಬಲೀಕರಣ ಮುಂತಾದ ಅವರ ಕೊಡುಗೆಗಳನ್ನು ಸಮಾಜ ಯಾವತ್ತೂ ಸ್ಮರಿಸಿಕೊಳ್ಳುತ್ತದೆ ಎಂದು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿಯ ಉಪನಿರ್ದೇಶಕರಾದ ರಾಮಯ್ಯ ಅವರು ಹೇಳಿದರು.
ಅವರು ದಿನಾಂಕ 30 ರಂದು ನಡೆದ “ಬಸವ ಜಯಂತಿ” ಕಾರ್ಯಕ್ರಮದಲ್ಲಿ ಪೂಜೆ ನೇರವೇರಿಸಿ ಮಾತನಾಡಿದರು. ಅವರ ವಚನಗಳ ಸಾರ ಮತ್ತು ಅಲ್ಲಿಯ ಮೌಲ್ಯಗಳ ಬಗ್ಗೆ ತಿಳಿಸಿದರು.
ಅನುಭವ ಮಂಟಪ: ಬಸವಣ್ಣನವರು ಸಾಮಾಜಿಕವಾಗಿ ಕ್ರಾಂತಿಕಾರಕ ಬದಲಾವಣೆ ತಂದು ‘ಅನುಭವ ಮಂಟಪ’ ವನ್ನು ಸ್ಥಾಪಿಸಿದರು. ಅನುಭವ ಮಂಟಪ 12ನೇ ಶತಮಾನದಲ್ಲಿ ಎಲ್ಲಾ ಧರ್ಮದ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಸೇರುತ್ತಿದ್ದ ಒಂದು ಸಾಮಾಜಿಕ-ಧಾರ್ಮಿಕ ಸಂಸತ್ತು. ಇದರಲ್ಲಿ ಎಲ್ಲಾ ಜಾತಿಯ ಎಲ್ಲಾ ವೃತ್ತಿಯ ಸಾಮಾನ್ಯ ಜನರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಚರ್ಚಿಸುತ್ತಿದ್ದರು ಹಾಗೂ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದರು
ಪ್ರಕಾಶ ಇಚಲಕರಂಜಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ,ಬಸವಣ್ಣನವರ ಕಾಯಕ ಮಂತ್ರ ಮತ್ತು ಅವರ ವಚನಗಳಲ್ಲಿ ಇರುವ ಸಂದೇಶಗಳ ಬಗ್ಗೆ, ಮತ್ತು ಈಗ ವಚನಗಳು ಎಲ್ಲ ಭಾಷೆಗಳಲ್ಲಿ ಲಭ್ಯತೆಯ ಬಗ್ಗೆ ಮಾತನಾಡಿದರು.
ಓದುಗರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಇದೆ ಜಯಂತಿಯ ಅಂಗವಾಗಿ ಬಸವಣ್ಣನವರ ಜೀವನ, ಸಂದೇಶ,ವಚನಗಳು ಮತ್ತು ಇತರ ಶರಣರ ಕುರಿತು ಇರುವ ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ರಾಜು ಕಟ್ಟಿಮನಿ, ಸರಸ್ವತಿ, ಲಕ್ಷ್ಮಿ, ಪೂರ್ಣಿಮಾ ಮತ್ತಿತರು ಮತ್ತು ಹಿರಿಯ ವಕೀಲರಾದ ರವಿ ಶಾಸ್ತ್ರಿ ಮತ್ತು ಓದುಗರು, ವಿದ್ಯಾರ್ಥಿಗಳು ಹಾಜರಿದ್ದರು.