ಅಸ್ತಿತ್ವವಾದ ಜೀವನದ ಅರ್ಥ ಮತ್ತು ಉದ್ದೇಶ ಕೇಳುತ್ತದೆ – ಪ್ರೊ. ಕವಿತಾ ರೈ

Must Read

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸರಣಿ ವಿಶೇಷ ಉಪನ್ಯಾಸ ಮಾಲೆ ಉದ್ಘಾಟನೆಯ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಕವಿತಾ ರೈ ಅವರು ‘ಸಮಕಾಲೀನ ಸಾಹಿತ್ಯ ಸ್ಪಂದನೆ : ಅಸ್ತಿತ್ವವಾದ, ಮಹಿಳಾವಾದದ ಕುರಿತು ಮಾತನಾಡುತ್ತ, ಅಸ್ತಿತ್ವವಾದ ಜೀವನದ ಅರ್ಥ ಮತ್ತು ಉದ್ದೇಶದ ಬಗ್ಗೆ ಪ್ರಶ್ನೆ ಕೇಳುತ್ತದೆ ಮತ್ತು ಮನುಷ್ಯ ಜೀವನವನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ ಮಾರ್ಗದರ್ಶನ ನೀಡುತ್ತದೆ. ಪಾಶ್ಚಿಮಾತ್ಯರಲ್ಲಿ ಹೆಗಲ್, ಪೆಡ್ರಿಕ್ ಕಿರ್ಕ್ಗಾರ್ಡನಂತವರಿಂದ ಬೆಳವಣಿಗೆಯಾಗಿ ಭಾರತದಲ್ಲಿ ವಸಾಹುತಶಾಹಿಯ ಮುಖಾಂತರ ಪ್ರಚುರಗೊಂಡಿತು, ಇಂತಹ ಅಸ್ತಿತ್ವವಾದವನ್ನು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಲೇಖಕರು ಮಹಿಳಾವಾದದ ಜೊತೆಗೆ ವಿವಿಧ ಸಾಹಿತ್ಯದ ಪ್ರಕಾರಗಳಲ್ಲಿ ಈ ಪರಿಕಲ್ಪನೆಯನ್ನು ಒಳಪಡಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ಮಾತನಾಡಿದರು.

ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ ಗಾಜಪ್ಪನವರ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಗುಂಡಣ್ಣ ಕಲಬುರ್ಗಿ, ಡಾ. ಗಜಾನನ ನಾಯ್ಕ, ಡಾ. ಹನುಮಂತಪ್ಪ ಸಂಜೀವಣ್ಣನವರ, ಡಾ. ಶೋಭಾ ನಾಯಕ, ವಿವಿಧ ವಿಭಾಗದ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ಪಿ. ನಾಗರಾಜ ಸ್ವಾಗತಿಸಿದರು, ಕುಮಾರಿ ಪ್ರಿಯಾಂಕ ನಿರೂಪಿಸಿದರು. ಕುಮಾರಿ ಪ್ರಜ್ಞಾ ಕಟಕೋಳ ಅವರು ವಂದಿಸಿದರು

Latest News

ಕವಿಗೋಷ್ಠಿಗೆ ಆಹ್ವಾನ

ಮೂಡಲಗಿ - ಫೆ.೧ ರಂದು ರವಿವಾರ ಮುಂಜಾನೆ ೧೦ ಘಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ,ಮೂಡಲಗಿ ಹಾಗೂ ಎಮ್ ಐ ಕೆ ಪಿ ಯು ಕಾಲೇಜು,...

More Articles Like This

error: Content is protected !!
Join WhatsApp Group