Homeಸುದ್ದಿಗಳುಪುರಸಭೆ ಖಾಲಿ ನಿವೇಶನದಲ್ಲಿ ಉದ್ಯಾನವನ ನಿರ್ಮಿಸಲು ಆಗ್ರಹಿಸಿ ಮನವಿ

ಪುರಸಭೆ ಖಾಲಿ ನಿವೇಶನದಲ್ಲಿ ಉದ್ಯಾನವನ ನಿರ್ಮಿಸಲು ಆಗ್ರಹಿಸಿ ಮನವಿ

ಮೂಡಲಗಿ: ಪಟ್ಟಣದ ಪುರಸಭೆಯ ಲಕ್ಷ್ಮಿ ನಗರದಲ್ಲಿ ಟಿಎಮಸಿ ನಂ.೫೪೦/೧೧ ರಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಖಾಲಿ ನಿವೇಶನದಲ್ಲಿ ಉದ್ಯಾನವನ ನಿರ್ಮಿಸಿ, ಸಾರ್ವಜನಿಕರ ವ್ಯಾಯಾಮಕ್ಕೆ ಸಲಕರಣೆಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿ ಲಕ್ಷ್ಮಿ ನಗರದ ನಿವಾಸಿಗಳು ಗುರುವಾರ ಪುರಸಭೆ ಅಧ್ಯಕ್ಷೆ ಖುರ್ಷಾದ ನದಾಫ, ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ಸಲ್ಲಿಸಿದರು.

ಲಕ್ಷ್ಮಿ ನಗರದಲ್ಲಿ ಪುರಸಭೆ ಮಾಲಿಕತ್ವದ ಖಾಲಿ ನಿವೇಶನದಲ್ಲಿ ಸಾರ್ವಜನಿಕರ ಅನೂಕುಲಕ್ಕಾಗಿ ಮೀಸಲಾಗಿಟ್ಟಿದ್ದು, ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ಖಾಲಿ ನಿವೇಶನವನ್ನು ಬೇರೆ ಯಾವುದೇ ಕಾರ್ಯ ಚಟುವಟಿಕೆಗಳಿಗೆ ಅನುಮತಿ ನೀಡಬಾರದು. ಈ ಖಾಲಿ ನಿವೇಶನದಲ್ಲಿ ಸುಂದರವಾದ ಉದ್ಯಾನವನ ನಿರ್ಮಿಸಬೇಕು. ಈಗಿನ ಯಾಂತ್ರಿಕ ಜೀವನ ಶೈಲಿಯಲ್ಲಿ ವಯೋವೃದ್ದರಿಗೆ ಯೋಗಾಸನ, ಯುವಕರಿಗೆ ವ್ಯಾಯಾಮ ಮಾಡಲು ಸಲಕರಣೆಗಳು ಅವಶ್ಯವಿದ್ದು, ಈ ಕುರಿತು ಪುರಸಭೆಗೆ ಕಳೆದ ಎರಡು ವರ್ಷಗಳ ಹಿಂದೆ ಮನವಿ ನೀಡಲಾಗಿತ್ತು ಸ್ಪಂದನೆ ಮಾಡಿಲ್ಲ ಈಗಲಾದರೂ ಸ್ಪಂದಿಸಿ ಸಾರ್ವಜನಿಕರ ಬೇಡಿಕೆಗಳನ್ನು ಪೂರೈಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಸುರೇಶ ನಿಡಗುಂದಿ, ವಿರುಪಾಕ್ಷ ಗಾಡವಿ, ಸೋಮೇಶ ಹಿರೇಮಠ, ಮಹಾದೇವಿ ಪಾಟಿಲ, ರವಿ ಜಾಧವ, ಮಾಲಾ ಗಾಡವಿ, ಪವಿತ್ರಾ ಮಿರ್ಜಿ, ಕಲ್ಲಪ್ಪ ವಾಣಿ, ಬಿ.ಆರ್.ತರಕಾರ, ಶ್ರೀದೇವಿ ಜಕಾತಿ, ಪ್ರಮೋದ ಯಕ್ಕುಂಡಿ, ಅಶೋಕ ಪತ್ತಾರ ಮತ್ತಿತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group