ಭ್ರಷ್ಟ ಅಧಿಕಾರಿ ಅಜಿತ ಹಳಿಂಗಲಿ ಅಮಾನತಿ ಕಾರ್ಯಪ್ರವೃತ್ತರಾಗಿ

Must Read

ಸಿಂದಗಿ; ಸಾರ್ವಜನಿಕರ ಆಸ್ತಿಗಳ ಉತಾರೆ ನೀಡುವಲ್ಲಿ ರೂ ೩೦ ಸಾವಿರ ಬೇಡಿಕೆಯಿಟ್ಟು ಅವರಿಂದ ಪೊನ್ ಪೇ ಮೂಲಕ ತನ್ನ ಖಾತೆಗೆ ಜಮೆ ಮಾಡಿಸಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿದ ಪುರಸಭೆ ಸಿಬ್ಬಂದಿ ಅಜೀತ ಹಳಿಂಗಳಿ ಅವರನ್ನು ಸೇವೆಯಿಂದ ಅಮಾನತ್ತು ಮಾಡುವಂತೆ ಠರಾವು ಪಾಸು ಮಾಡಿದ ಪ್ರತಿಯನ್ನು ಮೇಲಾಧಿಕಾರಿಗಳಿಗೆ ರವಾನೆ ಮಾಡಿ ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಸೂಚಿಸಿದರು.

ಪಟ್ಟಣದ ಪುರಸಭೆ ಸಭಾ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರು ಆಸ್ತಿಗಳ ಮೇಲೆ ಸಾಲ ಪಡೆಯಲು ಬೋಜಾ ದಾಖಲು ಮಾಡಲು ಪರಿತಪಿಸುತ್ತಿರುವದನ್ನು ರೂ ೫೦೦ ತುಂಬಿಸಿಕೊಂಡು ಭೋಜಾ ದಾಖಲು ಮಾಡಿ, ಅಲ್ಲದೆ ಬಾಕಿ ಉಳಿದ ಆಸ್ತಿಯನ್ನು ಬಡ್ಡಿ ರಹಿತ ತುಂಬಲು ೨ ತಿಂಗಳು ಕಾಲಾವಕಾಶವಿದೆ ಕಾರಣ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ತಹಶೀಲ್ದಾರ ಕಾರ್ಯಾಲಯ ಮಿನಿ ವಿಧಾನ ಸೌಧಕ್ಕೆ ಸ್ಥಳಾಂತರವಾಗುತ್ತಿರುವ ಹಿನ್ನೆಲೆಯಲ್ಲಿ ಆ ಕಟ್ಟಡವನ್ನು ಪುರಸಭೆ ಕಾರ್ಯಾಲಯಕ್ಕೆ ಹಸ್ತಾಂತರಿಸುವಂತೆ ಠರಾವು ಪಾಸು ಮಾಡಿ ಮೇಲಧಿಕಾರಿಗಳಿಗೆ ಮನವಿ ರವಾಸಿಸುವಂತೆ ತಿಳಿಸಿದ ಅವರು, ಕೈಗಾರಿಕಾ ವಲಯದಲ್ಲಿರುವ ಮಳಿಗೆಗಳನ್ನು ಹಸ್ತಾಂತರ ಮಾಡಿಕೊಂಡು ಆಸ್ತಿ ತೆರಿಗೆ ಮಾಡಿಕೊಳ್ಳಿ ಎಂದರು.

ಮಾಜಿ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ ಮಾತನಾಡಿ, ೧೫ನೇ ಹಣಕಾಸು ಯೋಜನೆಯಡಿ ಬಂದಿರುವ ರೂ ೧ ಕೋಟಿ ೯೬ ಲಕ್ಷಗಳನ್ನು ಬರೀ ೧೦ ವಾರ್ಡಗಳಿಗೆ ಮಾತ್ರ ಹಂಚಿಕೆ ಮಾಡಿ ಅಧಿಕಾರ ದುರುಪಯೋಗ ಪಡಿಕೊಳ್ಳುತ್ತಿದ್ದೀರಿ ಎಂದು ಆರೋಪಿಸುತ್ತಿದಂತೆ ಅಧ್ಯಕ್ಷ ಡಾ. ಮನಗೂಳಿ ಉತ್ತರಿಸಿ ಈ ಹಣದಲ್ಲಿ ಮಿಸಲಾತಿ ಅನುಗುಣವಾಗಿ ಹಂಚಿಕೆ ಮಾಡಿ ಅದರಲ್ಲಿ ರೂ ೭೮ ಲಕ್ಷ ಹಣದಲ್ಲಿ ೨೩ ವಾರ್ಡುಗಳಿಗೆ ಹಂಚಿಕೆ ಮಾಡಿದ್ದಾದರೆ ತಲಾ ರೂ ೩ ಲಕ್ಷಗಳು ಮಾತ್ರ ಬರುತ್ತಿದ್ದು ಅದಕ್ಕೆ ಇಲ್ಲಿಯವರೆಗೆ ಅಭಿವೃದ್ಧಿವಾಗದ ವಾರ್ಡುಗಳನ್ನು ಗುರುತಿಸಿ ಅಲ್ಲಿ ಕಾಮಗಾರಿಗಳನ್ನು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು. ಅದಕ್ಕೆ ವಿರೋಧ ವ್ಯಕ್ತ ಪಡಿಸಿ ಮಲಘಾಣ ರಸ್ತೆಯಲ್ಲಿರುವ ಸ್ಮಶಾನಕ್ಕೆ ಹೋಗಲು ರಸ್ತೆಯಿಲ್ಲ ಅದಕ್ಕೆ ಎಲ್ಲ ಅನುದಾನ ರಸ್ತೆ ಅಭಿವೃದ್ಧಿಗೆ ಬಳಸಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿಗೆ ೭ ಜನ ಸದಸ್ಯರನ್ನು ಆಯ್ಕೆ ಮಾಡಿ ಅಧ್ಯಕ್ಷರನ್ನಾಗಿ ಶ್ರೀಶೈಲ ಭೀರಗೊಂಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಕಿರಿಯ ಸಿನೆಟರಿ ಅಧಿಕಾರಿ ಇಂದುಮತಿ ಮಣ್ಣೂರ ಮಾತನಾಡಿ, ಜನನ-ಮರಣ ದಾಖಲಾತಿಯಲ್ಲಿ ೨೧ ದಿನಗಳಲ್ಲಿ ಮಾತ್ರ ದಾಖಲಿಸಬೇಕು ನಂತರ ಬಂದ ಅರ್ಜಿಗಳಿಗೆ ನ್ಯಾಯಾಲಯದಿಂದ ನೋಟರಿ ಮಾಡಿಸಬೇಕಾಗುತ್ತದೆ ಕಾರಣ ನಿಗದಿತ ವೇಳೆಗೆ ದಾಖಲಿಸಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಂದೀಪ ಚೌರ, ಮಾಜಿ ಅದ್ಯಕ್ಷರಾದ ಭಾಷಾಸಾಬ ತಾಂಬೋಳಿ, ಹಣಮಂತ ಸುಣಗಾರ, ಸದಸ್ಯರಾದ ಹಾಸೀಂ ಆಳಂದ, ಬಸವರಾಜ ಯರನಾಳ, ಸಾಯಬಣ್ಣ ಪುರದಾಳ ಸೇರಿದಂತೆ ಕೆಲ ಸದಸ್ಯರು ಚರ್ಚೆಯಲ್ಲಿ ಬಾಗಿಯಾದರೆ ಮಹಿಳಾ ಸದಸ್ಯರು ಉತ್ಸವ ಮೂರ್ತಿಗಳಾಗಿ ಕುಳಿತಿದ್ದರು.
ಮುಖ್ಯಾಧಿಕಾರಿ ಎಸ್ ರಾಜಶೇಖರ ಸ್ವಾಗತಿಸಿದರು. ಪುರಸಭೆ ಸಿಬ್ಬಂದಿ ಸಿದ್ದು ಅಂಗಡಿ ಅವರು ಸಭೆಯ ಅಜಂಡಾ ಓದಿದರು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group