ಶರಣ ಮಾಸದ ನಿಮಿತ್ತ ವಿಶೇಷ ದತ್ತಿ ಉಪನ್ಯಾಸ

Must Read

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಪ್ರೊ. ಶಾರದಾ ಪಾಟೀಲ್ ಮೇಟಿ ಅವರ ಹೆಸರಿನಲ್ಲಿ ವಿಶೇಷ ದತ್ತಿ ಉಪನ್ಯಾಸ ನಡೆಯಿತು

ಶರಣ ಮಾಸದ ಎರಡನೆಯ ದಿವಸದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಡಾ. ಸದಾಶಿವ ಮರ್ಜಿ ಅವರು ಕರ್ನಾಟಕ ಏಕೀಕರಣಕ್ಕೆ ಧಾರವಾಡ ಜಿಲ್ಲೆಯ ಲಿಂಗಾಯತರ ಕೊಡುಗೆ ಎನ್ನುವ ವಿಷಯದ ಬಗೆಗೆ ಅತ್ಯಂತ ಪ್ರಬುದ್ಧ ತೆಯಿಂದ ಎಳೆ ಎಳೆಯಾಗಿ  ತಿಳಿಸಿಕೊಟ್ಟರು. ಇದೊಂದು ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಿ ಅಖಂಡ ಕರ್ನಾಟಕವನ್ನು ಹುಟ್ಟುಹಾಕಿದ ಚಳವಳಿಯೆಂದು ವರ್ಣಿಸಿದರು.

ಕನ್ನಡವನ್ನು ಬೆಳೆಸುವ ಮತ್ತು ಕಾಪಾಡುವ ಕಾರ್ಯ ಇದರಿಂದ ಸಾಧ್ಯವಾಯಿತು. ಮರಾಠಿ, ಉರ್ದು, ಪರ್ಷಿಯನ್, ಇಂಗ್ಲಿಷ್ ಪ್ರಭಾವದಿಂದ ಕಳಾಹೀನವಾಗಿದ್ದ ಕನ್ನಡದ ಅಸ್ಮಿತೆಯ ಮತ್ತು ಅಸ್ತಿತ್ವದ ಹೋರಾಟವಿದು ಎಂದು ಅಭಿಪ್ರಾಯ ಪಟ್ಟರು.

ಕನ್ನಡ ಕಲಿಯಲು ತೋರುವ ಅನಾದರ,ಅಸಡ್ಡೆ, ಮೂಲಭೂತ ಸೌಕರ್ಯ ಇಲ್ಲದೆ ಕನ್ನಡ ಶಾಲೆ ಮುಚ್ಚುವಿಕೆ, ಬೇರೆ ಭಾಷೆಗಳ ಪ್ರಾಬಲ್ಯ, ಹೀಗೆ ನಾನಾ ವಿಷಯಗಳಿಂದ ನೊಂದು ಕರ್ನಾಟಕ ಏಕೀಕರಣದ ಹೋರಾಟ ಹುಟ್ಟಲು ಕಾರಣ ವಾಯ್ತು ಎನ್ನುವುದನ್ನು ಮನದಟ್ಟು ಮಾಡಿದರು.

ಕನ್ನಡ ಮಾತನಾಡುವವರನ್ನು ಒಗ್ಗೂಡಿಸಿ ಪ್ರತ್ಯೇಕ ರಾಜ್ಯ ರಚನೆ, ಆಡಳಿತಾತ್ಮಕ ಅನುಕೂಲದ ಅಗತ್ಯತೆ, ನಮ್ಮ ನಮ್ಮ ಭಾಗಗಳಲ್ಲಿ ನಮ್ಮ ಭಾಷೆಗೆ ಪ್ರಾಮುಖ್ಯತೆ, ಜನರ ಹಕ್ಕೊತ್ತಾಯ, ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆ ಈ ಎಲ್ಲದರ ಸಲುವಾಗಿ ಕರ್ನಾಟಕ ಏಕೀಕರಣ ಚಳು ವಳಿ ನಡೆಯಿತು ಎನ್ನುವುದನ್ನು ಅರುಹಿದರು.

ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಸಭೆ, ಮೋತಿಲಾಲ್ ನೆಹರು ಸಮಿತಿ, ಮುಂಬೈ ಶಾಸನ ಸಭೆಯಲ್ಲಿ ವಿಷಯ ಮಂಡನೆ, ಕ್ರಿಶ್ಚಿಯನ್ ಮಿಶನರೀಸ್ ಅವರ ಕಾರ್ಯ, ಕಿಟಲ್, ಬಿ. ಎಲ್. ರೈಸ್, ಪ್ಲೀಟ್ ಅವರ ಕೊಡುಗೆ, ಲಿಂಗಾಯತ ಮಠಗಳ ಮಹತ್ತರ ಕಾರ್ಯ ಬಾಹುಳ್ಯ, ಕಾಂಗ್ರೆಸ್ ಅಧಿವೇಶನ, ಜೆ. ವಿ. ಪಿ ತ್ರಿಮೂರ್ತಿ ಸಮಿತಿ, ಅದರ ಗುಂಚಿ ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹದ ಬಗೆಗೆ ಹೇಳುತ್ತಾ, ಡೆಪ್ಯೂಟಿ ಚೆನ್ನಬಸಪ್ಪ, ಅರಟಾಳ ರುದ್ರಗೌಡರು, ಪಾಟೀಲ್ ಪುಟ್ಟಪ್ಪ, ಕೆ.ಎಫ್ ಪಾಟೀಲ್, ಗುದ್ಲೆಪ್ಪ ಹಳ್ಳಿಕೇರಿ, ಅಂದಾನೆಪ್ಪ ದೊಡ್ಡಮೇಟಿ, ಹೊಸಮನಿ ಸಿದ್ದಪ್ಪ, ಮೈಲಾರ ಮಹಾದೇವ, ರಾಜಶೇಖರಯ್ಯನವರು ಮತ್ತು ಮಹಿಳೆಯರ ಕನ್ನಡ ಪರ ಹೋರಾಟವನ್ನು ಶ್ಲಾಘಿಸಿದರು.

ಡಾ. ಶಶಿಕಾಂತ ಪಟ್ಟಣ ಅವರು ಕರ್ನಾಟಕ ಏಕೀಕರಣದ ಹೋರಾಟಕ್ಕೆ ಧಾರವಾಡ ತವರುಮನೆ ಇದ್ದಹಾಗೆ ಎಂದು ಹೇಳುತ್ತಾ, ಸಿದ್ದಪ್ಪ ಕಂಬಳಿ, ಹಂಗರಕಿ ದೇಸಾಯಿ, ಬಸರಿಗಿಡದ, ಶಾಂತವೇರಿ ಗೌಡರು, ಮಹಾದೇವ ಪಟ್ಟಣ, ವಾಲಿ ಚನ್ನಪ್ಪ,ಸಾಣಿಕೊಪ್ಪ, ಚಂಪಾ, ಗಿರೆಡ್ಡಿ ಗೋವಿಂದರಾಜ, ಎಂ ಎಂ ಕಲಬುರ್ಗಿ ಇವರೆಲ್ಲರ ಜೊತೆ ಬಹಳಷ್ಟು ಜನರು ದೊಡ್ಡ ಪ್ರಮಾಣದಲ್ಲಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ನಡೆಸಿದರು ಎಂದು ಸ್ಮರಿಸಿಕೊಂಡರು. ನರಗುಂದ ಬಂಡಾಯ,ಲಂಕೇಶ್ ಪತ್ರಿಕೆ, ಗೋಕಾಕ್ ಚಳವಳಿ ನಾಗಮೋಹನ್ ದಾಸರ ವರದಿಯನ್ನೂ ಸಹ ನೆನಪು ಮಾಡಿಕೊಂಡರು.

ಡಾ. ಸುಗುಣ ಮಲ್ಲೇಶ ಅವರ ವಚನ ಪ್ರಾರ್ಥನೆ, ಶರಣೆ ಪ್ರಭಾವತಿ ಹಿರೇಮಠ ಅವರ ಸ್ವಾಗತ,ಶರಣೆ ಬನಶ್ರೀ ಹತ್ತಿ ಅವರ ಶರಣು ಸಮರ್ಪಣೆ, ಶರಣೆ ವಿಜಯ ಮಹಾಂತಮ್ಮ ಅವರ ವಚನ ಮಂಗಳ, ಶರಣೆ ರತ್ನಕ್ಕ ಕಾದ್ರೊಳ್ಳಿ ಅವರ ನಿರೂಪಣೆ ಮತ್ತು ಸಂವಾದದೊಂದಿಗೆ ಗೂಗಲ್ ಮೀಟ್ ಕಾರ್ಯಕ್ರಮ ಸುಗಮವಾಗಿ ನೆರವೇರಿತು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group