ಮಕ್ಕಳು ಹೆಚ್ಚಾಗಿ ಸಾಹಿತಿಗಳಾಗಿ ಹೊರಹೊಮ್ಮಲಿ- ಲಕ್ಷ್ಮೀ ಹೆಬ್ಬಾಳಕರ

Must Read

ಬೆಳಗಾವಿ- ಆಧುನಿಕ ಯುಗದಲ್ಲಿ ಮಕ್ಕಳು ಯಂತ್ರಗಳಾಗುತ್ತಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕೇವಲ ಅಂಕಗಳಿಕೆಗೆ ಸೀಮಿತಗೊಳಿಸದೇ ಸಾಹಿತ್ಯಾಸಕ್ತರನ್ನಾಗಿ ಬೆಳೆಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಬೆಳಗಾವಿಯ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಶನಿವಾರ ನಡೆದ ಬೆಳಗಾವಿ ಜಿಲ್ಲಾ ಪ್ರಥಮ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ-2025ರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಈ ಸಮ್ಮೇಳನ ಮಕ್ಕಳಲ್ಲಿ ಮತ್ತು ಮಕ್ಕಳ ಸಾಹಿತಿಗಳಲ್ಲಿ ಹೊಸ ಉತ್ಸಾಹ, ಚೈತನ್ಯ ತುಂಬಲಿ ಎಂದು ಹಾರೈಸಿದರು.

ಮಕ್ಕಳ ಅಭಿವೃದ್ಧಿಗಾಗಿ ನನ್ನ ಇಲಾಖೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಮುಂದಿನ ಸಮ್ಮೇಳನಕ್ಕೆ ನನ್ನ ಇಲಾಖೆಯಿಂದ ಸಂಪೂರ್ಣ ಬೆಂಬಲ ನೀಡುತ್ತೇನೆ. ಇದು ಕೇವಲ ಮಕ್ಕಳ ಸಾಹಿತಿ, ಹಿರಿಯ ಸಾಹಿತಿಗಳಿಗೆ ಸೀಮಿತವಾಗದೇ, ಬೆಳಗಾವಿ ಜಿಲ್ಲೆಯ ಪ್ರತಿಯೊಬ್ಬ ಶಾಲಾ ಮಕ್ಕಳಿಗೂ ತಲುಪುವಂತಾಗಬೇಕು ಎಂದರು.

ಮಕ್ಕಳಲ್ಲಿಯೇ ನಮ್ಮ ಅಚಾರ, ವಿಚಾರಗಳು ಹೆಚ್ಚಾಗಬೇಕು, ಜೊತೆಗೆ ಮತ್ತೊಬ್ಬರಿಗೆ ಮುಟ್ಟಬೇಕು. ನಾಡಿನಲ್ಲಿ ಮಕ್ಕಳ ಪ್ರತಿಭೆಗೆ ಕೊರತೆಯಿಲ್ಲ. ಮಕ್ಕಳು ಸಾಹಿತ್ಯಾಭಿರುಚಿ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ನಾಡಿನ ಹೆಮ್ಮೆಯ ಸಾಹಿತಿಗಳಾಗುವುದರಲ್ಲಿ ಎರಡು ಮಾತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಪ್ರಾಯಪಟ್ಟರು.

ಪಕ್ಕದ ಮನೆಯ ಮಕ್ಕಳಿಗೆ ಹೋಲಿಸಿ ಅಂಕಗಳಿಕೆಗೆ ಸೀಮಿತಗೊಳಿಸದೆ, ಸಾಹಿತ್ಯ ಓದಲು ಪ್ರೇರೇಪಿಸಬೇಕು. ಮಕ್ಕಳಿಗೆ ಸಾಹಿತ್ಯದ ಅಭಿರುಚಿ ತೋರಿಸಲು ಆಯೋಜಿಸಿರುವ ಇಂಥ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದು ಸಚಿವರು ಹೇಳಿದರು

ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದು ಉತ್ತಮ ಆಚಾರ ವಿಚಾರಗಳನ್ನು ಬೆಳೆಸಿಕೊಂಡರೆ ಮಕ್ಕಳು ನಾಡಿನ ಉತ್ತಮ ಪ್ರಜೆಗಳಾಗುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ ಎಂದರು.

ಕರ್ನಾಟಕ ರಾಜ್ಯ ಮ ಸಾ ಪ ರಾಜ್ಯಾಧ್ಯಕ್ಷ ಚ ನಂ ಅಶೋಕ ಮಾತನಾಡಿ, ಮಕ್ಕಳ ಸಾಹಿತ್ಯ ಪರಿಷತ್ತು ಸಮ್ಮೇಳನದಿಂದ ಗಡಿನಾಡು ಬೆಳಗಾವಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದಂತಾಗಿದೆ ಮಕ್ಕಳ ಸಾಹಿತ್ಯ ಪರಿಷತ್ ಎಲ್ಲರೂ ಉಳಿಸಿ ಬೆಳೆಸೋಣ ಎಂದು ಹೇಳಿದರು.

ಕಿರಿಯ ಸರ್ವಾದ್ಯಕ್ಷರಾದ ಲಾವಣ್ಯ ಅಂಗಡಿ ಮಾತನಾಡಿ, ನಾನು ಬಡ ಕುಟುಂಬದಲ್ಲಿ ಜನಿಸಿದರೂ ಸಾಧನೆ ಗುರಿ ಇಟ್ಟು ಮುಂದೆ ಸಾಗಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ನನ್ನ ಪ್ರತಿಭೆ ಸಾಕ್ಷಿ ಚಿನ್ನ ಕೊಟ್ಟರು ಕೆಟ್ಟವರ ಸಂಘ ಮಾಡದೆ ಸಜ್ಜನರ ಸಂಗ ಮಾಡಿ ತಾಯಿ ತಂದೆಗೆ ಕೀರ್ತಿ ತರುವಂಥವರಾಗಬೇಕೆಂದರು.

ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಕಾರಂಜಿಮಠದ ಪರಮಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು., ಪ್ರಾರಂಭದಲ್ಲಿ ರಾಷ್ಟ್ರಧ್ವಜವನ್ನು ಎಂ ಎಂ ಸಂಗಣ್ಣವರ.ಚ ನ ಅಶೋಕ, ನಾಡದ್ವಜವನ್ನು ದೀಪಕ ಗುಡಗನಟ್ಟಿ, ಪರಿಷತ್ ದ್ವಜವನ್ನು ಸಿದ್ರಾಮ ನೀಲಜಗಿ ನೆರವೇರಿಸಿದರು. ನಂತರ ಲೀಲಾವತಿ ಹಿರೇಮಠ. ಹು ವಿ ಸಿದ್ದೇಶ.ರವಿ ಬಜೆಂತ್ರಿ ಅವರು ಮೆರವಣಿಗೆಗೆ ಚಾಲನೆ ನೀಡಿದರು.ಈ ಸಮಯದಲ್ಲಿ ಎಸ್ ಎಂ ಶಿರೂರ, ಗೌರಾದೇವಿ ತಾಳಿಕೋಟಿ ಮಠ, ಎಂ.ವಾಯ್.ಮೆನಸಿನಕಾಯಿ, ಅಮೂಲ್ಯ ಪಾಟೀಲ, ಬಸವರಾಜ ಗಾರ್ಗಿ, ಲಕ್ಷ್ಮೀ ಪಾಟೀಲ, ಮಹಾದೇವ , ಸಚಿನ,ಪ್ರಕಾಶ ಹೊಸಮನಿ.ಮಿಥುನ ಅಂಕಲಿ.ಮುರಿಗೆಪ್ಪ ಮಾಲಗಾರ, ರಮೇಶ ಬಿರಾದಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವರದಿ: ಮುರಿಗೆಪ್ಪ ಮಾಲಗಾರ

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group