ಬಾಗಲಕೋಟೆ : ಜಿಲ್ಲೆಯ ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಶಾಖಾ ಮಠವಾದ ರೋಣ ತಾಲೂಕಿನ ಕರಮಡಿಯಲ್ಲಿ ಮಠದ ಪೀಠಾಧಿಪತಿಗಳಾದ ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ”ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನದ ಷಷ್ಠಬ್ದಿ ಪೂರ್ತಿ ಸಮಾರಂಭ, ಶ್ರೀ ಮ.ನಿ.ಪ್ರ. ಅಭಿನವ ಒಪ್ಪತ್ತೇಶ್ವರ ಪೂಜ್ಯರ 50ನೇ ಜನ್ಮ ಸುವರ್ಣ ಮಹೋತ್ಸವ, ಪಟ್ಟಾಧಿಕಾರದ ರಜತ ಮಹೋತ್ಸವ ಹಾಗೂ ತುಲಾಭಾರದ ಅಂಗವಾಗಿ ರಾಜ್ಯಮಟ್ಟದ ಒಪ್ಪತೇಶ್ವರ ಗುರು ಕಾರುಣ್ಯ ಪ್ರಶಸ್ತಿ”ಸಮಾರಂಭವು ದಿನಾಂಕ 24 ಅಗಸ್ಟ್ 2025 ಭಾನುವಾರ ಕರಮುಡಿಯಲ್ಲಿ ಅದ್ದೂರಿಯಾಗಿ ಜರುಗಿತು.
ಹುನಗುಂದದ ಲೇಖಕರಾದ ಪ್ರೊಫೆಸರ್ ಡಾ. ಮುರ್ತುಜಾ ಒಂಟಿ ಅವರ “ರಂಗಸಿರಿ”ಸಂಶೋಧನಾ ಕೃತಿಗೆ” ಒಪ್ಪತ್ತೇಶ್ವರ ಗುರು ಕಾರುಣ್ಯ”ಪ್ರಶಸ್ತಿಯನ್ನು ಪೂಜ್ಯಶ್ರೀ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಶ್ರೀ ಷ .ಬ್ರ. ಗುರುಸಿದ್ಧ ಶಿವಾಚಾರ್ಯ ಸ್ವಾಮಿಗಳು, ಶ್ರೀ ಷ.ಬ್ರ. ಕೈಲಾಸನಾಥ ಸ್ವಾಮಿಗಳು ಪ್ರದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಎ.ಎಂ ಮಡಿವಾಳರ ವಿಶ್ರಾಂತ ಜಂಟಿ ನಿರ್ದೇಶಕರು, ಡಾ . ನಾಗರಾಜ್ ನಾಡಗೌಡ, ಮಹದೇವ್ ಬಸರ ಕೋಡ , ಶಿಕ್ಷಕರಾದ ಎಚ್ .ಟಿ. ರಂಗಾಪುರ ಹಾಗೂ ಎಸ್. ಬಿ. ಮೆಣಸಿನಕಾಯಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬದಾಮಿಯ ಎಸ್ ಬಿ ಎಂ ಪದವಿ ಮಹಾವಿದ್ಯಾಲಯದ, ಸಹಪಾಧ್ಯಾಪಕ ಎಚ್ಎಸ್ ಸಂಕನ ಗೌಡರ, ನಿರೂಪಿಸಿದರು ವಂದಿಸಿದರು