ವೈಭವದಿoದ ಜರುಗಿದ ಲಿo.ರುದ್ರ ಶಿವಯೋಗಿಗಳ ಮೆರವಣಿಗೆ, ಕುಂಭಮೇಳ.

Must Read

ಬಾಗಲಕೋಟೆ – ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ನಿರಂತರ ನಡೆದ ಮಹಾತ್ಮರ ಜೀವನ ದರ್ಶನ ಕಾರ್ಯಕ್ರಮ ಲಿo. ರುದ್ರ ಶಿವಯೋಗಿಗಳ ಭವ್ಯ ಮೂರ್ತಿಯು ಸಕಲ ವಾದ್ಯ ವೈಭವದೊಂದಿಗೆ, ಕುಂಭಮೇಳ ಮತ್ತು ಕಳಸದಾರತಿಯೊಂದಿಗೆ ಮೆರವಣಿಗೆಯು ಗ್ರಾಮದಲ್ಲಿ ತುಂಬಾ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ ಆಳಂದ್ -ನಂದವಾಡಗಿ ಪೂಜ್ಯರಾದ ಷ ಬ್ರ ಅಭಿನವ ಚನ್ನಬಸವ ಶಿವಾಚಾರ್ಯ ಶ್ರೀಗಳಿಂದ ಅಯ್ಯಾಚಾರ ಹಾಗೂ ಲಿಂಗಧೀಕ್ಷೆ ನಡೆಯಿತು.
ಸಾಯಂಕಾಲ ಜರುಗಿದ ಮಹಾತ್ಮರ ಜೀವನ ದರ್ಶನ ಪುರಾಣ ಮಹಾ ಮಂಗಳ ಕಾರ್ಯಕ್ರಮ ಅತ್ಯಂತ ವೈಭವಯುತವಾಗಿ ಜರುಗಿತು

ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಮ ನಿ ಪ್ರ ಗುರುಲಿಂಗ ಸ್ವಾಮಿಗಳು ಯಲಗೋಡ ಕಲಬುರ್ಗಿ ಜಿಲ್ಲೆಯವರು ಕಂದಗಲ್ಲ ಗ್ರಾಮವು ಅತ್ಯಂತ ಪ್ರಾಚೀನ ಇತಿಹಾಸ ಹೊಂದಿದ್ದು ಇಲ್ಲಿ ಭಕ್ತಿ, ಶ್ರದ್ದೆ,ಕಲೆ,ಸಾಹಿತ್ಯ, ಧರ್ಮ, ಒಳಗೊಂಡ ಶರಣರ ನಾಡು ಕಂದಗಲ್ಲ ಗ್ರಾಮದಲ್ಲಿ ಸಾಕಷ್ಟು ಶರಣರು ಸುಳಿದಾಡಿದ ಪುಣ್ಯಭೂಮಿ ಶರಣ ಶಂಕರ ದಾಶಿಮಯ್ಯನವರು ಜನಿಸಿದ ತಪೋಭೂಮಿ, ಸಮಾಜಕ್ಕೆ ಶ್ರೀಗಳನ್ನು ಕೊಟ್ಟಂತ ಧರ್ಮಭೂಮಿ, ಈ ಸ್ಥಳದಲ್ಲಿ ಇರುವ ನೀವೆಲ್ಲಾ ಭಾಗ್ಯವಂತರು,ಲಿo ರುದ್ರಶಿವಯೋಗಿಗಳ ಸ್ಥಳದಲ್ಲಿ ನಡೆದ ಮಹಾತ್ಮರ, ಶರಣರ, ಶ್ರವಣದಿಂದ ನಿಮ್ಮ್ ಜೀವನ ಪಾವನವಾಗಲಿ ಎಂದರು.

ಅಮೀನಗಡದ ಶಂಕರರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಸುವರ್ಣಗಿರಿ ರುದ್ರುಸ್ವಾಮಿ ಮಠದ ಡಾ. ಚನ್ನಮಲ್ಲ ಮಹಾಸ್ವಾಮಿಗಳು ಪಂಡಿತರು, ಕವಿಗಳು, ಖ್ಯಾತ ವ್ಯಾಗ್ಮಿಗಳು, ಸಾಹಿತಿಗಳು ಭಕ್ತರ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ಶ್ರೀಗಳನ್ನು ಪಡೆದ ನೀವೇ ಧನ್ಯವಂತರು ಶ್ರೀಗಳ ಪುಣ್ಯ ಕಾರ್ಯಗಳು ಸದಾ ನಿಮ್ಮನ್ನು ಕಾಪಾಡುತ್ತವೆ ಎಂದರು.

ಅಭಿನವ ಕೈಲಾಸಲಿಂಗ ಶಿವಾಚಾರ್ಯರು ಪುರ್ತಗೇರಿ, ಮ ನಿ ಪ್ರ ಶಿವಾನಂದ ಮಹಾಸ್ವಾಮಿಗಳು ನಾಗರಗಡ್ಡಿ, ಪ ಪೂ ದೊಡ್ಡಬಸಾವಾರ್ಯ ತಾತನವರು ಸಜ್ಜಲಗುಡ್ಡ, ಅಂಕಲಿಮಠದ ಶ್ರೀಗಳು, ಕಾರ್ಯಕ್ರಮ ನೇತೃತ್ವ ವಹಿಸಿದ್ದರು.

ಕಂದಗಲ್ಲ ಸುವರ್ಣಗಿರಿ ಶ್ರೀ ರುದ್ರುಸ್ವಾಮಿ ಮಠದ ಡಾ ಚನ್ನಮಲ್ಲ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ ನಾಡಗೌಡ್ರ, ರಾಹುಲಧಣಿಗಳು, ಶ್ರೀ ಮತಿ ಅನುಷಾ ನಾಡಗೌಡ್ರ, ಉಪಸ್ಥಿತರಿದ್ದರು.

ಪುಟ್ಟರಾಜ್ ಶಾಸ್ತ್ರೀಗಳು ಚುರ್ಚಿಹಾಳ ಇವರ ಪ್ರವಚನ ಎಲ್ಲರ ಮೆಚ್ಚುಗೆಗೆ ಪಾತ್ರವಾಹಿತು. ಸಂಗೀತಗಾರರಾದ ಸಂಗಮೇಶ ನೀಲಮಠ ಸ್ವಂತ್ ಹಾಗೂ ಪ್ರತಾಪಕುಮಾರ ಹಿರೇಮಠ ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದಲ್ಲಿ ಹಲವಾರು ಮಹನೀಯರನ್ನು ಸನ್ಮಾನಿಸಲಾಯಿತು.

ಪಂಪಯ್ಯ ಗುರುವಿನಮಠ ವಂದಿಸಿದರು. ಗುರುಗಳಾದ ದೊಡ್ಡಬಸು ಮಲ್ಲಾಪುರ ಕಾರ್ಯಕ್ರಮ ನಿರೂಪಿಸಿದರು
ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.

Latest News

ಬಸವಕಲ್ಯಾಣ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಹೈಡ್ರಾಮಾ

ಕಾಂಗ್ರೆಸ್ ಕೌನ್ಸಿಲರ್‌ಗಳ ಮಧ್ಯೆ ಗಲಾಟೆಬೀದರ - ಬಸವಕಲ್ಯಾಣ ನಗರದಲ್ಲಿ ಟಿಪ್ಪು ಸುಲ್ತಾನ್ ಚೌಕ ನಾಮಕರಣ ವಿಚಾರದಲ್ಲಿ ಕಾಂಗ್ರೆಸ್ ಸದಸ್ಯರ ನಡುವೆ ಗಲಾಟೆ ಉಂಟಾಗಿ ಕೈ ಕೈ...

More Articles Like This

error: Content is protected !!
Join WhatsApp Group