ಗುರ್ಲಾಪೂರದಲ್ಲಿ  ನಾಲ್ಕು ದಿನಗಳಲ್ಲಿ ಏಳು ಮನೆ ಹಾಗೂ ಎರಡು ಅಂಗಡಿ ಕಳ್ಳತನ

Must Read

ಮೂಡಲಗಿ – ಮೂಡಲಗಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮದಲ್ಲಿ ಆ. ೨೩ರಂದು ಒಂದೇ ದಿನದಲ್ಲಿ ೭(ಏಳು)ಮನೆಗಳು ಕಳ್ಳತನ ನಡೆದಿರುವ ಘಟನೆ ಹಸಿರಾಗಿರುವಾಗಲೇ ಎರಡು ದಿನಗಳ ನಂತರ ಮತ್ತೆ ಆ. ೨೬ರ ರಾತ್ರಿ ಗುರ್ಲಾಪೂರ ಕ್ರಾಸ್ ದಲ್ಲಿ ಇರುವ ಮೊಬೈಲ್ ಅಂಗಡಿ ಹಾಗೂ ಪಾನ್  ಅಂಗಡಿಗಳು ಕಳ್ಳತನವಾಗಿವೆ.

ಇಲ್ಲಿನ  ಅಲ್ಲಮ ಪ್ರಭು ಮೊಬೈಲ್ ಅಂಗಡಿಯಲ್ಲಿ ರಿಪೇರಿಗೆ ಬಂದಿದ್ದ ೧೨ ಮೊಬೈಲಗಳು, ರಿಪೇರಿ ಮಾಡುವ ಮಶಿನ್ ಮತ್ತು ಈಯರ್ ಬಡ್ಸ್ ಸೇರಿದಂತೆ ಒಟ್ಟು ಸುಮಾರು ಒಂದುವರೆ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಕಳವಾಗಿವೆ.

ಗುರಪ್ಪ ತೇಲಿ ಎಂಬುವವರ ಪಾನ್ ಶಾಪ್ ಅಂಗಡಿಯಲ್ಲಿ ಗುಟ್ಕಾ, ಸಿಗರೇಟ್ ಮತ್ತು ೫ ಸಾವಿರ ನಗದು ಕಳುವಾಗಿದ್ದು ಮೌಲ್ಯ ಸುಮಾರು ೨೫ ಸಾವಿರದಷ್ಟು ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ ಗುರ್ಲಾಪೂರದಲ್ಲಿ ಶಂಕಿತನೊಬ್ಬನ ಹೆಸರು ಜನರ ಬಾಯಿಂದ ಬಾಯಿಗೆ ಹರಿದಾಡುತ್ತಿರುವುದು. ಒಂದು ವರ್ಷ ಹಿಂದೆ ಶಂಕಿತ ಕಳ್ಳನು ಮೊಬೈಲ್ ಅಂಗಡಿ ಕಳ್ಳತನ ಮಾಡಿ ಸಿಕ್ಕಾಗ ಅವನಿಗೆ ಸ್ಥಳೀಯರು ಥಳಿಸಿ ತಾಕೀತು ಮಾಡಿದ್ದರೆನ್ನಲಾಗಿದೆ.  ಈಗ ಅದೇ ವ್ಯಕ್ತಿಯ ಮೇಲೆ ಮತ್ತೆ ಸಂಶಯ ವ್ಯಕ್ತಪಡಿಸುತ್ತಿದ್ದಾರೆ ಸ್ಥಳೀಯರು. ಆದರೂ ಸ್ಥಳಿಯರಿಂದಲೇ ಕಳ್ಳತನ ಆಗಿರುವುದು ಎಂದೂ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುತ್ತಿದ್ದು ಪೊಲೀಸರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕ್ರಮ ಕೈಗೊಳ್ಳಬೇಕಾಗಿದೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group