ಮೈಸೂರು -ನಗರದ ವಿಜಯನಗರ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಡಾ.ಪ್ರೊ.ಭಾಷ್ಯಂ ಸ್ವಾಮೀಜಿಯವರು ಶ್ರೀ ಚರಣ ಪ್ರಕಾಶನ ಅರ್ಪಿಸುವ ‘ಅಮೃತಧಾರಾ’ ಗ್ರಂಥ ಲೋಕಾರ್ಪಣೆಯನ್ನು ಬೆಂಗಳೂರಿನ ಮಲ್ಲೇಶ್ವರಂ ಶ್ರೀ ಯದುಗಿರಿ ಯತಿರಾಜ ಮಠದ ಶ್ರೀ ರಾಮಾನುಜ ಸಂಸ್ಕೃತಿ ಭವನದಲ್ಲಿ ಇತ್ತೀಚೆಗೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಯದುಗಿರಿ ಯತಿರಾಜ ಮಠದ ಪೀಠಾಧಿಪತಿ ಶ್ರೀ ಶ್ರೀ ಯತಿರಾಜ ಜೀಯರ್ ಸ್ವಾಮಿಗಳು ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಮಲ್ಲೇಶ್ವರಂ ವಿಧಾನಸಭಾ ಶಾಸಕ ಡಾ.ಸಿ.ಎನ್.ಅಶ್ವತ್ ನಾರಾಯಣ್ ವಹಿಸಿದ್ದರು.
ಗ್ರಂಥದ ಕುರಿತು ‘ಮಂದಾರ’ ಮಾಸಪತ್ರಿಕೆ ಸಂಪಾದಕ ಡಾ.ಬಾಬು ಕೃಷ್ಣಮೂರ್ತಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಮೈಸೂರಿನ ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಆಗಮಿಸಿದ್ದರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ಸರ್ಕಾರದ ನಿವೃತ್ತ ಪೋಲಿಸ್ ನಿರ್ದೇಶಕ ಡಾ.ಕೆ.ಶ್ರೀನಿವಾಸನ್, ಹೆಚ್.ಪಿ.ವಾಸುದೇವರಾವ್, ಡಾ.ಕೇಶವ ಪ್ರಸಾದ್, ಗೋಕುಲ್ ಅಯ್ಯಂಗಾರ್, ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ಕೆ.ಆರ್.ಯೋಗಾನರಸಿಂಹನ್ (ಮುರುಳಿ), ವಿಜಯನಗರ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಎನ್.ಶ್ರೀನಿವಾಸನ್ ಮತ್ತಿತರರು ಭಾಗವಹಿಸಿದ್ದರು.