ಮಂಗಳೂರು ವಿಶ್ವ ವಿದ್ಯಾಲಯ ದಲ್ಲಿ ಹಿರಿಯ ಸಾಹಿತಿ, ಪ್ರೊ. ಕೆ. ಈ. ರಾಧಾಕೃಷ್ಣ ಕನ್ನಡಕ್ಕೆ ಅನುವಾದಿಸಿ ಬರೆದ 1.” ಓರ್ವ ಭಾರತೀಯ ಯಾತ್ರಿಕ -ಒಂದು ಅಪೂರ್ಣ ಆತ್ಮ ಕಥೆ ” 2. ಭಾರತೀಯ ಹೋರಾಟ “3. ಅಸಾಮಾನ್ಯ ದಿನಚರಿ ” ಲೋಕಾರ್ಪಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕರ್ನಾಟಕ ಸರಕಾರದ ಅರೋಗ್ಯ ಮಂತ್ರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಮಾತನಾಡಿದರು.
ಕಾರ್ಯಕ್ರಮ ಮಂಗಳೂರು ವಿಶ್ವ ವಿದ್ಯಾಲಯ ಕುಲಪತಿ ಪ್ರೊ. ಪಿ ಎಲ್ ಧರ್ಮ ಅದ್ಯಕ್ಷತೆಯಲ್ಲಿ ನಡೆಯಿತು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಅಣ್ಣ ಶರತ್ ಚಂದ್ರ ಬೋಸ್ ಇವರ ಮೊಮ್ಮಗ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಟ್ರಸ್ಟ್ ಕೊಲ್ಕೋತಾ, ನಿರ್ದೇಶಕರಾದ ಪ್ರೊ. ಸುಮಂತ್ರ ಬೋಸ್ ಕಾರ್ಯಕ್ರಮ ದ ಪ್ರಧಾನ ಕೇಂದ್ರ ಬಿಂದುವಾಗಿ ಬೋಸ್ ಬಗ್ಗೆ ಸುದೀರ್ಘ ಭಾಷಣ ಮಾಡಿದರು.
ಮೂರು ಬೃಹತ್ ಪುಸ್ತಕಗಳ ಲೇಖಕ ಪ್ರೊ. ಕೆ. ಈ. ರಾಧಾಕೃಷ್ಣ ಪುಸ್ತಕದಲ್ಲಿ ಬರುವ ಹೊಸ ವಿವರ, ವಿಚಾರಗಳ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಗಳಾಗಿ ಕ್ಯಾ. ಗಣೇಶ್ ಕಾರ್ಣಿಕ್, ನಾರಾಯಣ ಯಾಜಿ, ನೇತಾಜಿ ಬೋಸ್ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಎಂ. ರಾಜಕುಮಾರ್, ಪ್ರಕಾಶಕರಾದ ಸನ್ ಸ್ಟಾರ್ ಡಿ. ಎನ್. ಶೇಖರ್ ರೆಡ್ಡಿ, ಮುಂತಾದ ಹಲವು ಗಣ್ಯರು ವೇದಿಕೆ ಹಂಚಿಕೊಂಡರು.
ಈ ಕಾರ್ಯಕ್ರಮ ದಲ್ಲಿ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯದ ಸಿಬ್ಬಂದಿ ಉಪಸ್ಥಿತರಿದ್ದರು.