ಬೀದರ – ವಿವಿಧ ರಾಜ್ಯಕ್ಕೆ ಅಕ್ರಮವಾಗಿ ಗುಟ್ಕಾ, ಪಾನಮಸಾಲಾ, ತಂಬಾಕು ತಯಾರಿಸಿ ಸಾಗಿಸುತ್ತಿರುವ ಅಡ್ಡೆಯ ಮೇಲೆ ಪೋಲಿಸರು ದಾಳಿ ಮಾಡಿದ್ದು ೨.೪೫ ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಬೀದರ ಕೈಗಾರಿಕಾ ಪ್ರದೇಶ ದಕ್ಷಿಣ ಭಾರತದ ಗುಟ್ಕಾ ಹಬ್ ಆಗಿದೆಯೇನೋ ಎಂಬಂತೆ ಅಪಾರ ಪ್ರಮಾಣದ ನಕಲಿ ಗುಟ್ಕಾ ಪಾಕೀಟಗಳನ್ನು ಬೀದರ್ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿಕೊಂಡಿದ್ದಾರೆ
ಸರ್ಕಾರದ ಪರವಾನಿಗೆ ಇಲ್ಲದೇ ಗುಟ್ಕಾ ತಯಾರಿಸುವ ಘಟಕದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ ಅಪಾರ ಪ್ರಮಾಣದ ಗುಟ್ಕಾ ತಯಾರಿಕೆಯ ಕಚ್ಚಾ ಮಟೇರಿಯಲ್ ವಶಪಡಿಸಿಕೊಳ್ಳಲಾಗಿದೆ
ಬೀದರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಈ ಅಕ್ರಮದಲ್ಲಿ ಲಾರಿ ಚಾಲಕ ಸೇರಿ ಭಾಗಿಯಾದ 8 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಕ್ಕೆ ಕಳಪೆ ಗುಟ್ಕಾ, ಪಾನಮಸಲಾ ತಂಬಾಕು ತಯಾರಿಸಿ ವಿವಿಧ ರಾಜ್ಯಕ್ಕೆ ಸಾಗಿಸುತ್ತಿದ್ದರೆನ್ನಲಾಗಿದೆ
ಅಗಸ್ಟ ೩೦ ರಿಂದ ರಾತ್ರಿಯಿಂದ ಪೋಲಿಸರು ಕಾರ್ಯಾಚರಣೆ ಸ್ಥಳದಲ್ಲಿ ಬೀಡು ಬಿಟ್ಟು ಪರಿಶೀಲನೆ ನಡೆಸಿದ್ದಾರೆ. ತಂಬಾಕು ಅಡಿಕೆ, ಅಡಿಕೆ ಪೌಡರ್, ಮೆಂಥಾಲ ಪೌಡರ್ ಸೇರಿದಂತೆ ವಿವಿಧ ಹೆಸರಿನಲ್ಲಿ ಬರೆದ ಪ್ಯಾಕಿಂಗ್ ಪೌಚ್ ಪತ್ತೆಹಚ್ಚಿ ಜಪ್ತಿ ಮಾಡಿದರು. ಇವುಗಳ ಮೌಲ್ಯ ಸುಮಾರು 2 ಕೋಟಿ 44 ಲಕ್ಷ 99 ಸಾವಿರ 520 ಆಗುತ್ತದೆಯೆನ್ನಲಾಗಿದ್ದು ಬೀದರ ನಗರದ ಹೊರವಲಯದ ಚಿದ್ರಿ ಬುತ್ತಿ ಬಸವಣ್ಣ ದೇವಸ್ಥಾನ ಹತ್ತಿರ ಮನೆಯಲ್ಲಿ ಇಡಲಾಗಿತ್ತು
ಸ್ಥಳಕ್ಕೆ ಆಹಾರ ಸುರಕ್ಷತಾಧಿಕಾರಿ,ನ್ಯೂಟೌನ್ ಠಾಣೆ ಸಿಪಿಐ ವಿಜಯಕುಮಾರ್ ಹಾಗೂ ಗಾಂಧಿಗಂಜ ಪೋಲಿಸರು ಠಾಣೆ ಸಿಪಿಐ ಆನಂದರಾವ ಶಿವಾನಂದ ಗಾಣಿಗೇರ ವಾಣಿಜ್ಯ ತೆರಿಗೆ ಅಧಿಕಾರಿಗಳ ತಂಡ ಗೋದಾಮಿನಲ್ಲಿ ಪರಿಶೀಲನೆ ನಡೆಸಿದರು. ಬೀದರ ನಗರದ ನ್ಯೂಟೌನ್ ಠಾಣೆ ಹಾಗೂ ಗಾಂಧಿ ಗಂಜ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ