ಸೆ. ೦೩ ಕ್ಕೆ ಮೂಡಲಗಿ ನಗರಕ್ಕೆ ಲೋಕಾಯುಕ್ತರ ಭೇಟಿ

Must Read

ಸೆ,೦೩ಕ್ಕೆ ಮೂಡಲಗಿ ನಗರಕ್ಕೆ ಲೋಕಾಯುಕ್ತರ ಭೇಟ

ಮೂಡಲಗಿ:-ಪಟ್ಟಣದ ತಹಶಿಲ್ದಾರ ಕಛೇರಿ ಹಾಗೂ ಸ್ಥಳೀಯ ಕುರುಹಿನಶೆಟ್ಟಿ ಕೋ ಆಪ್ ಸೊಸಾಯಿಟಿಗೆ  ಸೆಪ್ಟೆಂಬರ್,೦೩-೨೦೨೫ ರಂದು ಲೋಕಾಯುಕ್ತರು ಬೇಟಿ ನೀಡಲಿದ್ದಾರೆ

ಸೆಪ್ಟೆಂಬರ್, ೦೩ ರಂದು ಬೆಳಿಗ್ಗೆ, ೧೧ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯ ವರೆಗೂ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಮುಖದಲ್ಲಿಯೇ ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಲೋಕಾಯುಕ್ತರು ಜನಸಂಪರ್ಕ ಮಾಡುವವರಿದ್ದಾರೆ.

ಸರ್ಕಾರಿ ಅಧಿಕಾರಿಗಳು ಅಧಿಕೃತ ಕೆಲಸ ಸರಿಯಾಗಿ ವಿಳಂಬ ನೀತಿ ತೋರಿದರೆ, ಹಣಕ್ಕೆ ಬೇಡಿಕೆ ಇಟ್ಟಿದರೆ ಮತ್ತು ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಮಾಡಿದರೆ
ಮಾಹಿತಿ ಸಲ್ಲಿಸಬಹುದು.

ಇದೇ ದಿನ ನಗರದ ಕುರುಹಿನಶೆಟ್ಟಿ ಕೋ ಆಪ್ ಸೊಸಾಯಿಟಿಯಲ್ಲಿ ನಡೆದಿರಬಹುದಾದ ಅವ್ಯವಹಾರದ ಕುರಿತು ವಿಚಾರಣೆ ನಡೆಸಲು ಪತ್ರಕರ್ತ ಉಮೇಶ ಬೆಳಕೂಡ ಅವರು ಕಳೆದ ಜುಲೈ ತಿಂಗಳಿನಲ್ಲಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ಅದರ ವಿಚಾರಣೆಯನ್ನು ದಿ. ೩ ರಂದು ಇಟ್ಟುಕೊಳ್ಳಲಾಗಿದೆ ಎಂಬುದಾಗಿ ಅವರಿಗೆ ಬಂದಿರುವ  ಲೋಕಾಯುಕ್ತ ನೋಟೀಸ್ ನಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ದೂರ ವಾಣಿ ಸಂಖ್ಯೆ, ೦೮೩೧-೨೯೫೦೭೫೬,೦೮೩೧-೨೪೨೧೯೨೨ ಕರೆ ಮಾಡಬಹುದು.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group