ಧಾರವಾಡ : ಬದುಕಿನ ಎಲ್ಲಾ ಕ್ಷೇತ್ರಗಳಲ್ಲಿಯ ಜನರು ವಿಕಾಸ ಹೊಂದಲು ಪೂರಕ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಸಂಘಗಳು ಅತೀ ಅಗತ್ಯವಾಗಿವೆ ಎಂದು ಹು.ಧಾ. ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಅವರು ನಗರದ ಗ್ರಾಮೀಣ ತಾಲೂಕು ಬಿಇಓ ಕಚೇರಿ ಆವರಣದ ಶಿಕ್ಷಣ ಭವನದಲ್ಲಿ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸೌಹಾರ್ದ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಂಘವು ಕೇವಲ ಆರ್ಥಿಕ ಸಹಾಯಕ್ಕೆ ಮಾತ್ರ ಸೀಮಿತವಾಗದೇ ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಆಯೋಜನೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿ, ನಿವೃತ್ತರ ಕುಟುಂಬಕ್ಕೆ ಆರ್ಥಿಕ ಅನುಕೂಲ ಕಲ್ಪಿಸಿ ಅವರ ಹಿತಕ್ಕಾಗಿ ವಿಭಿನ್ನ ಯೋಜನೆಗಳನ್ನು ರೂಪಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಮಾಜಿ ಶಾಸಕಿ ಸೀಮಾ ಮಸೂತಿ, ಸಹಕಾರಂ ಗೆಲ್ಗೆ ತತ್ವದಡಿಯಲ್ಲಿ ಎಲ್ಲಾ ನಿವೃತ್ತ ನೌಕರರ ಹಿತಕ್ಕಾಗಿ ಹುಟ್ಟಿಕೊಂಡಿರುವ ಈ ಸಹಕಾರಿ ಸಂಘವು ಮುಂದಿನ ದಿನಗಳಲ್ಲಿ ಬ್ಯಾಂಕ್ ಆಗಿ ಪರಿವರ್ತನೆಯಾಗಲಿ ಎಂದರು. ಕಾಂಗ್ರಸ್ ಮುಖಂಡ ತವನಪ್ಪ ಅಷ್ಟಗಿ, ಧಾರವಾಡ ಗ್ರಾಮೀಣ ಬಿಇಓ ರಾಮಕೃಷ್ಣ ಸದಲಗಿ ಮತ್ತು ಟೀಚರ್ ಸೊಸಾಯಿಟಿ ಅಧ್ಯಕ್ಷ ಶಂಕರ ಘಟ್ಟಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಗುರು ತಿಗಡಿ, ಸಹಕಾರಿ ಸಂಘದ ಅಭಿವೃದ್ಧಿಗಾಗಿ ಸದಸ್ಯರು ತಾವು ಪಡೆದ ಸಾಲವನ್ನು ನಿಯಮಿತವಾಗಿ ಮರುಪಾವತಿ ಮಾಡಿ ಸಹಕರಿಸಬೇಕೆಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಆರ್.ಡಿ. ಉಳಿತಾಯ ಯೋಜನೆಯ ಮಾಹಿತಿ ಪತ್ರ ಹಾಗೂ ಸದಸ್ಯರ ಗುರುತಿಸಿ ಪತ್ರಗಳನ್ನು ಬಿಡುಗಡೆ ಮಾಡಲಾಯಿತು. ಸಂಘಕ್ಕೆ ದೇಣಿಗೆ ನೀಡಿರುವ ಶ್ರೀಕಾಂತ ಸಾಧನಿ, ಯಮುನಾ ಮುರಗೋಡ, ಮಹಾದೇವಿ ದೊಡಮನಿ, ಎಂ.ವಾಯ್.ದಾಟನಾಳ ಅವರನ್ನು ಗೌರವಿಸಲಾಯಿತು.
ಎಚ್.ಎಸ್.ಬಡಿಗೇರ ಸ್ವಾಗತಿಸಿದರು. ಎಂ.ಟಿ.ಸುಂಕದ ವಾರ್ಷಿಕ ವರದಿ ಮಂಡಿಸಿದರು. ಗುರು ಪೋಳ ವಂದಿಸಿದರು. ಮಹಾಂತೇಶ ನರೇಗಲ್ ನಿರೂಪಿಸಿದರು. ಆಡಳಿತ ಮಂಡಳಿಯ ಸಿ.ಎಂ.ಕಿತ್ತೂರ, ಪ್ರಮಿಳಾ ಜಕ್ಕಣ್ಣವರ, ವಿ.ಎಚ್.ದುಮ್ಮೇರ, ಎಂ.ಕೆ.ನದಾಫ, ಕೆ.ಕೆ.ತಳವಾರ, ಎಸ್. ಡಿ. ಪವಾರ, ಜಿ.ಎನ್.ಹೊಸಮನಿ ಇದ್ದರು.
ವರದಿ :ಗುರುಮೂರ್ತಿ ಯರಗಂಬಳಿಮಠ (ಕನ್ನಡ ಪತ್ರಿಕಾರಂಗದ ಹಿರಿಯ ನಿಯತಕಾಲಿಕೆ ಜೀವನ ಶಿಕ್ಷಣ ಮಾಸಪತ್ರಿಕೆಯ ವಿಶ್ರಾಂತ ಸಂಪಾದಕ), ಶ್ರೀಶಾಂತೇಶ್ವರನಗರ, ಅಮ್ಮಿನಬಾವಿ(ತಾ.ಧಾರವಾಡ) ಮೊ. ೯೯೪೫೮೦೧೪೨೨

