ಶಿರಾ : ಕ್ರೀಡಾ ಚಟುವಟಿಕೆಗಳು ಯುವಕರು ಒಗ್ಗೂಡಲು ಸಹಕಾರಿಯಾಗುತ್ತವೆ, ಕ್ರೀಡೆಯಲ್ಲಿ ಸೋಲು, ಗೆಲುವು ಸರ್ವೇ ಸಾಮಾನ್ಯ, ಕ್ರೀಡಾಸಕ್ತಿ, ಶ್ರದ್ದೆ, ಪರಿಶ್ರಮ, ಒಗ್ಗಟ್ಟಿನಿಂದ ಆಟವಾಡಿದರೆ ಗೆಲುವು ಸುಲಭವಾಗಿ ಲಭಿಸಲಿದೆ ಎಂದು ವಿಧಾನಪರಿಷತ್ ಶಾಸಕ ಚಿದಾನಂದ ಎಂ. ಗೌಡ ಹೇಳಿದರು.
ಅವರು ತಾಲೂಕಿನ ಹೆಂದೊರೆ ಗ್ರಾಮದ ಶ್ರೀರಾಮ ಕ್ರಿಕೆಟರ್ಸ್ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ ಪಂದ್ಯಾವಳಿಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯನಾಗಿ 5 ಹೈಟೆಕ್ ಸರ್ಕಾರಿ ಶಾಲೆಗಳನ್ನು ಕಟ್ಟಿ ಸಾರ್ಥಕತೆ ಕಂಡಿದ್ದೇನೆ. ಮುಂದಿನ ದಿನಗಳಲ್ಲಿ ಶಿರಾ ಕ್ಷೇತ್ರದ ಶಾಸಕನಾಗಲು ಜನ ಆಶೀರ್ವಾದ ಮಾಡಿದರೆ ಗ್ರಾಮೀಣ ಪ್ರದೇಶದ ಯುವಕರಲ್ಲಿ ಕ್ರೀಡಾಸಕ್ತಿ ಹೆಚ್ಚಿಸಿ, ಕ್ರೀಡೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸುಸರ್ಜಿತ ಕ್ರೀಡಾಂಗಣ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದೇನೆ ಎಂದರು.
ಮುಖಂಡರಾದ ಸಣ್ಣ ಮಂಜುನಾಥ, ಮದಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ಭಾಸ್ಕರ, ರಂಗನಾಥಪ್ಪ, ಬಪ್ಪರಾಯಪ್ಪ, ಹರೀಶ ,ರಂಗನಾಥ, ತಿಪ್ಪೇಸ್ವಾಮಿ, ಕ ವಿತಾ, ನಾಗರಾಜ ಗೌಡ, ಶಾಂತಮ್ಮ, ನಿವೃತ್ತ ಶಿಕ್ಷಕ ಕುಮಾರ್, ಶ್ರೀರಾಮ ಕ್ರಿಕೆಟರ್ಸ್ ನ ಯುವಕರಾದ ಮಧು,ಹರ್ಷ, ಪ್ರವೀಣ, ರಾಕೇಶ, ಮಂಜು, ಚೇತನ, ಸುರೇಶ, ಭರತ, ಅಕ್ಷಯ, ನವೀನ ಸೇರಿದಂತೆ ಹಲವಾರು ಯುವಕರು ಉಪಸ್ಥಿತರಿದ್ದರು.

