ಸಂಕ್ರಮಣದ ಕರಿ ದಿನ ಬೆಳಿಗ್ಗೆ ಧಾರವಾಡದ ಕಿಟ್ಟಿಗಟ್ಟಿ ಹತ್ತಿರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಪಟ್ಟವರನ್ನು ಗುರುತಿಸಲಾಗಿದ್ದು ಅವರ ಹೆಸರುಗಳು ಈ ಕೆಳಗಿನಂತಿವೆ:
- ಪೂರ್ಣಿಮಾ
- ಪ್ರವೀಣಾ
- ಆಶಾ ಜಗದೀಶ್
- ಮಾನಸಿ
- ಪರಂಜ್ಯೋತಿ
- ರಾಜೇಶ್ವರಿ ಶಿವಕುಮಾರ
- ಶಕುಂತಲಾ
- ಉಷಾ
- ವೇದಾ
- ನಿರ್ಮಲಾ
- ಮಂಜುಳಾ ನಿಲೇಶ
- ರಜನಿ ಶ್ರೀನಿವಾಸ
- ಪ್ರೀತಿ ರವಿಕುಮಾರ
ಹಳೆಯ ಗೆಳತಿಯರು ಸಾವಿನಲ್ಲಿ ಒಂದಾದರು ಮಕರ ಸಂಕ್ರಾಂತಿ ಸಂದರ್ಭದಲ್ಲಿ ಗೋವಾದಲ್ಲಿ ಸಂತೋಷ ಕೂಟ ಆಚರಿಸಲೆಂದು ಗೆಳತಿಯರನ್ನು ಹೊತ್ತು ಹೊರಟಿದ್ದ ಟೆಂಪೊ ಟ್ರಾವೆಲರ್ತಾ ಲೂಕಿನ ಇಟಿಗಟ್ಟಿ ಬಳಿ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದು ಒಂಬತ್ತು ಮಂದಿ ಮಹಿಳೆಯರು ಸೇರಿದಂತೆ 13 ಜನ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಹುಬ್ಬಳ್ಳಿ– ಧಾರವಾಡ ಬೈಪಾಸ್ ನ ಇಟಿಗಟ್ಟಿ ಗ್ರಾಮದ ಸಮೀಪ ನಡೆದ ಈ ಅಪಘಾತದಲ್ಲಿ ಟೆಂಪೋ ಟ್ರಾವೆಲರ್ ಚಾಲಕ ಮತ್ತು ಟಿಪ್ಪರ್ ಲಾರಿ ಚಾಲಕ ಹಾಗೂ ಇನ್ನುಳಿದಂತೆ 9 ಮಂದಿ ಮಹಿಳೆಯರು ದಾರುಣವಾಗಿ ಸಾವನ್ನಪ್ಪಿದರು ಈ ಪೈಕಿ ಇಬ್ಬರು ವೈದ್ಯರು.
ಮೃತರೆಲ್ಲರೂ ದಾವಣಗೆರೆ ಮೂಲದವರಾಗಿದ್ದು, 16 ಮಹಿಳೆಯರು ಲೇಡಿಸ್ ಕ್ಲಬ್ ನಿಂದ ಸಂತೋಷ ಕೂಟಕ್ಕಾಗಿ ಗೋವಾಕ್ಕೆ ತೆರಳಿದ್ದರು. ಈ ಬಗ್ಗೆ ಗಾಯಗೊಂಡವರ ಪೈಕಿ ಮಹಿಳೆಯೊಬ್ಬರು ಹೇಳಿದ್ದಾರೆ. ದಾವಣಗೆರೆಯಿಂದ ನಸುಕಿನ ವೇಳೆ ಹೊರಟಿದ್ದ ಇವರುಗಳು ಧಾರವಾಡದ ಪರಿಚಯಸ್ಥರ ಮನೆಗೆ ಉಪಹಾರಕ್ಕೆಂದು ತೆರಳುವವರಿದ್ದರು.
9 ಮಹಿಳೆಯರು ಸಾವನ್ನಪ್ಪಿದ್ದು ತೀವ್ರವಾಗಿ ಗಾಯಗೊಂಡವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸಂಕ್ರಮಣದ ದಿನ ನಸುಕಿನಲ್ಲಿ ಜವರಾಯ ಹಳೆಯ ಗೆಳತಿಯರ ಪ್ರಾಣ ಸೆಳೆದಿದ್ದು ಎಲ್ಲರ ಮನಕಲಕಿದೆ.