ಕವನ: ಯಾರು ಇವ !

Must Read

ಯಾರು ಇವ !

ತಿಲಕವಿಟ್ಟಿರುವವ
ಜುಟ್ಟು ಬಿಟ್ಟವ
ಹೊಟ್ಟೆ ಉಬ್ಬಿಸುವವ
ಮಂತ್ರಗಳ ಕಲಿತವ
ಕಲಿತು ಪೂಜಿಸುವ ಮಾನವ
ಕಾಣದ ದೇವರನ್ನು !
ಎಲ್ಲದರಲ್ಲೂ ಕಾಣಿಸುವ ಭಕ್ತನಿವ
ಅಂಗಾರದ ಜಾತಕ ನೀಡಿ
ದಕ್ಷಿಣೆ ಪಡೆಯುವ ಗುಣದವ,
ಯಾರು ಇವ ?

ತಿನ್ನಲೊಲ್ಲದ ಮೂರ್ತಿಗೆ
ಅನ್ನವಿಟ್ಟು ತಾನೇ ಉದರ ತುಂಬಿಸಿಕೊಳ್ಳುವ ವ್ಯಕ್ತಿ ಇವ
ವಾಸನೆಯೇ ಅರಿಯದ
ಮೌನಮೂರ್ತಿಗೆ !
ಗಂಧ ಧೂಪ ದೀಪ ನೈವೇದ್ಯ ಅರ್ಪಿಸುವ ಕಾಯಕದವ
ನನಗೇನು ಗೊತ್ತು ಯಾರು ಇವ ?

ನನ್ನದೇ ಅಲ್ಲದ ದೇಹದ ಮೇಲೆ
ಕಾಲಿಟ್ಟು ನಾಮಜಪ ಮಾಡಿ ಮುಕ್ತಿ ನೀಡುವ ಚಾತುರ್ವರ್ಣ ಅರಿತವ
ಹೊನ್ನ ಕುಡಿಕೆ ಕೇಳಿ ಹೊಯ್ಯುವ ಧರ್ಮಸ್ಥನಿವ
ಯಜ್ಞ ಯಾಗ ತಜ್ಞನಿವ
ಹೊತ್ತಿಗೆಯಲ್ಲಿ ವರ್ಣಿಸುವ ಭಾವ
ಯಾರು ಇವ ?

ಮೌನಮುಖಿಯ ಕಂಡುಕೊಂಡವ
ದೇಹದಲ್ಲೇ ಹೊತ್ತು ಮುಳುಗಿಸುವವ
ಮೈಯೆಲ್ಲಾ ಕಣ್ಣಾಗಿ ಪೂಜಿಸುವ ಅಸ್ತ್ರನಿವ
ಕಣ್ಣಿಗೆ ಕಾಣದ ದೇವರನ್ನು
ಮಸ್ತಕದಲ್ಲಿ ಕಾಣಿಸುವ ತಿಲಕ ಕಾಯದ ಶಾಸ್ತ್ರಜ್ಞನಿವ
ಯಾರು ಇವ ?

ಭೋವಿ ರಾಮಚಂದ್ರ
ಹರಪನಹಳ್ಳಿ
8861588118.

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group