ಬಾದಾಮಿಯ ಶ್ರೀ ಎಸ್.ಬಿ. ಮಮದಾಪೂರ ಆರ್ಟ್ಸ್, ಕಾಮರ್ಸ ಮತ್ತು ವಿಜ್ಞಾನ ಪದವಿ ಕಾಲೇಜಿನ ಆಯ್.ಕ್ಯೂ.ಎ.ಸಿ. ಇನಿಷಿಯೇಟಿವ್ಹ ಮತ್ತು ಪ್ಲೇಸಮೆಂಟ್ ಸೆಲ್ ಹಾಗೂ ರಾಮದುರ್ಗದ ದಾಕ್ಷಾಯಿಣಿ ಬಾಲಚಂದ್ರ ಜಾಬಶೆಟ್ಟಿ ಫೌಂಡೇಶನ್ ಸಹಯೋಗ ಹಾಗೂ ಗ್ರೀನಲ್ಯಾಂಡ ಬಯೋಟೆಕ್ ನ ತಾಂತ್ರಿಕ ಬೆಂಬಲದೊಂದಿಗೆ ಸ್ಪರ್ಧಾಶಕ್ತಿ ಕೇಂದ್ರದಲ್ಲಿ ಸೋಲಾರ ವಿದ್ಯುಚ್ಛಕ್ತಿ ಉತ್ಪಾದನಾ ಅವಕಾಶಗಳು ಹಾಗೂ ಸರಕಾರದ ಸಬ್ಸಿಡಿಗಳ ಕುರಿತು ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಬಾಲಚಂದ್ರ ಜಾಬಶೆಟ್ಟಿ ವಿಷಯ ಮಂಡಿಸಿದರು.
ಓದಿನ ಪ್ರಥಮ ಆದ್ಯತೆ ಜ್ಞಾನಾರ್ಜನೆಗಾಗಿ ಇರಬೇಕೆ ವಿನಃ ಕೇವಲ ಪರಿಕ್ಷೆಗಾಗಿ ಅಲ್ಲ, ಎಂಬ ಸೂತ್ರವನ್ನು ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಹಾಗಾದಲ್ಲಿ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವೆಂದು ನುಡಿದರು.
ಪಳಿಯುಳಿಕೆ ಇಂಧನಗಳಿಗೆ ಪರ್ಯಾಯವಾಗಿ ಹಸಿರು ಇಂಧನಗಳಾದ ಸೌರ ವಿದ್ಯುಚ್ಛಕ್ತಿಯ ಬಳಕೆಯನ್ನು ಹೆಚ್ಚಿಸಿ ಇಂಗಾಲದ ಹೆಜ್ಜೆಗಳನ್ನು ಕಡಿತಗೊಳಿಸಿ ಮುಂದಿನ ಪೀಳಿಗೆ ನೆಮ್ಮದಿಯಿಂದ ಬಾಳಲು ಹಾಗೂ ಇಡೀ ಪ್ರಾಣಿ ಸಂಕುಲವನ್ನು ಅಳವಿನಂಚಿನಿಂದ ಉಳಿಸುವ ಜವಾಬ್ದಾರಿ ಇಂದಿನ ಪೀಳಿಗೆಯ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆಯೆಂದರು.ಸೌರ ವಿದ್ಯುಚ್ಛಕ್ತಿಯನ್ನು ಬಳಸಿ ಹಸಿರು ಜಲಜನಕ, ಹಸಿರು ಅಮೋನಿಯಾ ತದನಂತರ ಹಸಿರು ಯುರಿಯಾ ಉತ್ಪಾದಿಸಲು ಕ್ರಿಯಾಯೋಜನೆ ಸಿದ್ಧಗೊಳ್ಳುತ್ತಿದೆಯೆಂದರು.
ಸೌರ ವಿದ್ಯುಚ್ಛಕ್ತಿ ಉತ್ಪಾದನೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಕೈಗೊಂಡ ಸಂಶೋಧನೆಗಳು ಮತ್ತು ಅವುಗಳನ್ನು ಕ್ಷೇತ್ರಮಟ್ಟದಲ್ಲಿ ಅಳವಡಿಸಿ ಹೆಚ್ಚು ವಿದ್ಯುಚ್ಛಕ್ತಿ ಉತ್ಪಾದನೆಯ ತಾಂತ್ರಿಕ ವಿವರಗಳನ್ನು ಎಳೆ ಎಳೆಯಾಗಿ ಮಂಡಿಸಿ, ಸೌರ ವಿದ್ಯುಚ್ಛಕ್ತಿ ಉತ್ಪಾದನಾ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳ ಕುರಿತು ವಿವರಿಸಿದರು.
ಮನೆ ಮೇಲ್ಛಾವಣೆಯ ಮೇಲೆ ಅಳವಡಿಸಲಾಗುವ ಘಟಕಗಳ ಖರ್ಚು ವೆಚ್ಚಗಳು, ಸಬ್ಸಿಡಿ ಲಭ್ಯತೆ ಹಾಗೂ ರಿಟರ್ನ ಆನ್ ಇನ್ವೆಷ್ಟಮೆಂಟ್ ಕುರಿತು ವಿವರಣೆ ನೀಡಿದರು.
ಪ್ರಾಚಾರ್ಯ ಡಾ. ಅಮರೇಶ ತೋಪಲಕಟ್ಟಿಯವರು ಜಾಬಶೆಟ್ಟಿಯವರನ್ನು ಸಭೆಗೆ ಪರಿಚಯಿಸಿದರು.
ಹಿರಿಯ ಉಪನ್ಯಾಸಕ ಡಾ. ಎಸ್.ಎನ್.ಬೆನಾಳ ಹಾಗೂ ಇನ್ನಿತರ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು. 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.



