ಹಳ್ಳೂರ- ಶಿವಾಪೂರ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಸರ್ವೋತ್ತಮ ಜಾರಕಿಹೊಳಿ

Must Read

ಹಳ್ಳೂರ – ಸಾರ್ವಜನಿಕರಿಗೆ ಸಂಚರಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅರಬಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಸತತ ಪ್ರಯತ್ನದಿಂದ ರಸ್ತೆಯನ್ನು ಮರು ಡಾಂಬರೀಕರಣಕ್ಕೆ ಚಾಲನೆ ನೀಡಲಾಯಿತೆಂದು ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಅವರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಲೆಕ್ಕ ಶೀರ್ಷಿಕೆ 5054 ಜಿಲ್ಲಾ ಮುಖ್ಯ ನವೀಕರಣ ಅನುದಾನದಡಿಯಲ್ಲಿ 1 ಒಂದು ಕೋಟಿ ಹಣದಲ್ಲಿ 2. 3 ಕಿ. ಮೀ ರಸ್ತೆ ಕಾಮಗಾರಿ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ರೈತರಿಗೆ ಸಾರ್ವಜನಿಕರಿಗೆ  ಹಾಗೂ ಸಕ್ಕರೆ ಕಾರ್ಖಾನೆ ಕಬ್ಬು ನುರಿಸುವ ಹಂಗಾಮು ಪ್ರಾರಂಭವಾಗಿದ್ದರಿಂದ ರಸ್ತೆ ಸಂಚರಿಸಲು ಅನುಕೂಲವಾಗಲು ರಸ್ತೆ ಅಭಿವೃದ್ದಿ ಕಾರ್ಯ ಮಾಡಲಾಗಿದೆ. ರಸ್ತೆಯನ್ನು ಕಳಪೆ ಕಾಮಗಾರಿಯಾಗದೆ ಗುಣಮಟ್ಟದ ರಸ್ತೆ ನಿರ್ಮಿಸಬೇಕು .ಗ್ರಾಮದ ಅಭಿವೃದ್ಧಿಗೆ ನಾವು ನೀವೂ ಆದ್ಯತೆ ನೀಡಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಕಾರ್ಯ ಮಾಡಿ ಗ್ರಾಮದ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉನ್ನತೀಕರಿಸಿದ ಪ್ರೌಡ ಶಾಲೆಗೆ ಭೆಟ್ಟಿ ನೀಡಿ ವೀಕ್ಷಣೆ ಮಾಡಿದರು. ನಂತರ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್ ಶೂ ವಿತರಣೆ ಮಾಡಿದರು.

ಈ ಸಮಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ನೀಲವ್ವ ಹೊಸಟ್ಟಿ. ಶಾಸಕರ ಆಪ್ತ ಸಹಾಯಕರಾದ ಮಲ್ಲಿಕಾರ್ಜುನ ಯಕ್ಸಂಬಿ, ಅಬ್ದುಲ ಮಿರ್ಜಾನಾಯ್ಕ, ಹನಮಂತ ತೆರದಾಳ ಮಾದೇವ ಹೊಸಟ್ಟಿ, ಲಕ್ಷ್ಮಣ ಕತ್ತಿ, ಕುಮಾರ ಲೋಕನ್ನವರ, ಗಜಾನನ ಮಿರ್ಜಿ, ಬಸವರಾಜ ಲೋಕನ್ನವರ, ಮುರಿಗೆಪ್ಪ ಮಾಲಗಾರ, ಬಸಪ್ಪ ಸಂತಿ,  ಸಿದ್ದು ದುರದುಂಡಿ, ಶಿವಪ್ಪ ಅಟ್ಟಮಟ್ಟಿ, ಶಂಕರ ಬೋಳನ್ನವರ, ಕೆಂಪಣ್ಣ ಅಂಗಡಿ, ಪರಮಾನಂದ ಶೇಡಬಾಳಕರ, ಎಂಜಿನಿಯರ್ ಅವತಾಡೆ, ಗುತ್ತಿಗೆದಾರ ವಿಶ್ವನಾಥ ನೇಮಗೌಡರ, ಶಿವಾನಂದ ಸಂಪಗಾರ, ಎಸ್ ಬಿ ಹಳಿಗೌಡರ, ಎಸ್ ಎಂ ಬೆಳ್ಳಕ್ಕಿ, ಅಸ್ಲಾಂ ಮಕಾಂದಾರ, ಎಸ್ ಡಿ ನಾವಿ, ಲಕ್ಷ್ಮಣ ಮರಿಚಂಡಿ ಸೇರಿದಂತೆ ಅನೇಕರಿದ್ದರು.

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group