ಅಗ್ನಿವೀರರಾಗಿ ಆಯ್ಕೆಯಾದ ೫೦ ಯುವಕರಿಗೆ ಸತ್ಕಾರ

Must Read

ಮೂಡಲಗಿ : ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಶ್ರೀ ಮಂಜುನಾಥ ಸೈನಿಕ ತರಬೇತಿ ಕೇಂದ್ರ, ಮೂಡಲಗಿಯು ಕಳೆದ ೨೨ ವರ್ಷದಿಂದ ಸಾಧನೆಗೈಯುತ್ತ ಬಂದಿದ್ದು ಮತ್ತೆ ಈಗೊಂದು ಸಾಧನೆಯ ಗರಿಯನ್ನು ಮೈದುಂಬಿಕೊಂಡಿದೆ.

ಇತ್ತೀಚೆಗೆ ಈ ಸಂಸ್ಥೆಯಲ್ಲಿ ತರಬೇತಿ ಪಡೆದು ಬೆಳಗಾವಿ ಎ.ಆರ್.ಒ. ದಿಂದ ಒಟ್ಟು ೫೦ ಅಭ್ಯರ್ಥಿಗಳು ಅಗ್ನಿವೀರರಾಗಿ ಆಯ್ಕೆಯಾಗಿದ್ದು, ಆಯ್ಕೆಯಾದ ಅಗ್ನಿವೀರರಿಗೆ ಸಂಸ್ಥೆಯ ಸಂಸ್ಥಾಪಕರಾದ ಲಕ್ಷ್ಮಣ ವಾಯ್. ಅಡಿಹುಡಿ ಅವರು ಸತ್ಕಾರ ಸಮಾರಂಭವನ್ನು ಏರ್ಪಡಿಸಿ, ಗೌರವ ಪೂರ್ವಕವಾಗಿ ಸತ್ಕರಿಸಲಾಯಿತು.

ಕಾರ್ಯಕ್ರಮವನ್ನು ಭಾವಿ ಅಗ್ನಿವೀರರನ್ನು ಅದ್ಧೂರಿಯಿಂದ ಸ್ವಾಗತಿಸಿ, ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಾಲಿ ಮತ್ತು ಮಾಜಿ ಸೈನಿಕರಿಗೂ ಸತ್ಕರಿಸಲಾಯಿತು.

ನಿವೃತ್ತ ಯೋಧ ಮಲ್ಲಿಕಾರ್ಜುನ ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೨೨ ವರ್ಷಗಳಿಂದ ಈ ಸಂಸ್ಥೆಯ ಪ್ರತಿಯೊಂದು ಹೆಜ್ಜೆಗಳನ್ನು ಸಮೀಪದಿಂದ ನೋಡುತ್ತಾ ಆಲಿಸುತ್ತಾ ಬಂದಿದ್ದೇವೆ, ಈ ಸಂಸ್ಥೆಯು ಕೇವಲ ಒಂದು ತರಬೇತಿ ಕೇಂದ್ರವಲ್ಲ ಇದು ಸೈನಿಕರನ್ನು ಉತ್ಪಾದನೆ ಮಾಡುವ ಫ್ಯಾಕ್ಟರಿ ಎಂದು ಹೇಳಿದರು.

ಬೆಳಗಾವಿ ಎ.ಆರ್.ಒ ದಿಂದ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಹಾಗೂ ನಾನು ೨೪ ವರ್ಷಗಳ ಕಾಲ ದೇಶಸೇವೆ ಮಾಡಿದ್ದೇನೆ, ನನ್ನ ಮಗನು ಕೂಡ ಇದೆ ಸಂಸ್ಥೆಯಲ್ಲಿ ತರಬೇತಿ ಪಡೆದು ಈಗ ಹೊಸ ಹುರುಪಿನ ಅಗ್ನಿವಿರನಾಗಿ ಸೇವೆ ಸಲ್ಲಿಸುತಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.

ಅತಿಥಿ ಸುಭಾಸ ಗೊಡ್ಯಾಗೋಳ ಮಾತನಾಡುತ್ತ, ದೇಶ ನಮಗೇನು ಮಾಡಿತು ಎನ್ನುವ ಬದಲು ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂದು ನೆನಪಿಸಿಕೊಳ್ಳಬೇಕು, ತಾಯಿ ಭಾರತಾಂಬೆಯ ಸೇವೆಯನ್ನು ಮಾಡುವ ಈ ಒಂದು ಸುವರ್ಣಾವಕಾಶ ಎಲ್ಲರಿಗೂ ಸಿಗುವುದಿಲ್ಲ, ಈ ಒಂದು ಅವಕಾಶ ಸಿಕ್ಕಂಥ ನೀವುಗಳು ಧನ್ಯರು. ನಿಮ್ಮ ಪರಿಶ್ರಮಕ್ಕೆ ಪ್ರತಿಯೊಬ್ಬ ಭಾರತೀಯ ಪ್ರಜೆಯು ತಲೆ ಭಾಗಬೇಕು ಮತ್ತು ಈ ಶಿಕ್ಷಣ ಸಂಸ್ಥೆಯ ನಿಸ್ವಾರ್ಥ ಸೇವೆಯನ್ನು ಗೌರವಿಸೋಣ ಎಂದರು.

ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ವಾಯ್. ಅಡಿಹುಡಿ ಮಾತನಾಡುತ್ತ, ನಮ್ಮ ಅಭ್ಯರ್ಥಿಗಳು ಅಗ್ನಿವೀರರಾಗಲು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ, ಎಲ್ಲರು ನೆಮ್ಮದಿಯಿಂದ ಮಲಗಿರುವಾಗ ನಮ್ಮ ಅಭ್ಯರ್ಥಿಗಳು ತಮ್ಮ ನಿದ್ದೆಯನ್ನು ತ್ಯಾಗ ಮಾಡಿ, ಬೆಳಗಿನ ಜಾವ ೪ ಗಂಟೆಯಿಂದ ರಾತ್ರಿ ೧೨ ಗಂಟೆಯವರೆಗೂ ಕೂಡ ತಮ್ಮ ದೈಹಿಕ ಮತ್ತು ಲಿಖಿತ ಪರೀಕ್ಷೆಗೆ ತಯಾರಿ ಮಾಡುತ್ತಾರೆ ಮತ್ತು ಅವರ ಜೊತೆ ನಮ್ಮ ಸಂಸ್ಥೆಯ ಪ್ರತಿಯೊಬ್ಬ ಸಿಬ್ಬಂದಿಯು ಕೂಡ ಅವರ ಜೊತೆಯೇ ಇದ್ದು, ಅವರ ಕುಂದು ಕೊರತೆಗಳನ್ನು ಆಲಿಸುತ್ತ, ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ಈ ಸಾಧನೆಯ ಗರಿಗೆ ಸಾಕ್ಷಿಯಾಗಿದ್ದಾರೆ, ಎಲ್ಲರಿಗೂ ಕೂಡ ಹೃದಯ ಪೂರ್ವಕ ನಮನಗಳನ್ನು ಸಲ್ಲಿಸಿ, ದೇಶ ಕಾಯಲು ಹೊರಟಿರುವ ಅಗ್ನಿವೀರರಿಗೆ ಕಿವಿ ಮಾತು ಹೇಳಿ ಅಭಿನಂದನೆ ಸಲ್ಲಿಸಿದರು.

ಭೀಮಪ್ಪ ಗಡಾದ ಮಾತನಾಡಿದರು, ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಬಸಪ್ಪ ಹೆಗಡೆ, ಗೀತಾ ಕೊಡಗನೂರ, ರುಕ್ಮಿಣಿ ಶಿವಾಪುರ, ಮಹಾಂತೇಶ ಕೊಟಬಾಗಿ, ರವಿ ಕರಿಗಾರ, ಸಚಿನ ಕಾಂಬಳೆ, ಯಾಕೂಬ ಹಾದಿಮನಿ, ಮಹಾದೇವ ಸಿದ್ನಾಳ, ಅಭಿಷೇಕ ಕಟ್ಟಿಮನಿ, ಹಣಮಂತ ಅಂಗಡಿ, ಅಯೂಬ ಕಲಾರಕೊಪ್ಪ, ಮಲ್ಲು ಬುಜಣ್ಣವರ ಮತ್ತು ಅಗ್ನಿವೀರರು, ಸಂಸ್ಥೆಯ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಮತ್ತಿತರು ಉಪಸ್ಥಿತರಿದ್ದರು, ಕಾರ್ಯಕವನ್ನು ಅಶೋಕ ಬಸಲಿಗುಂದಿ ನಿರೂಪಿಸಿದರು.

Latest News

ಕವನ ರಚನೆ ಬದುಕಿಗೆ ಮರುಸೃಷ್ಟಿ ಆಗಬಲ್ಲುದು – ಸುಮಾ ಕಿತ್ತೂರ

ಲೇಖಕಿಯರ ಸಂಘದಿಂದ ದತ್ತಿನಿಧಿ ಕಾರ್ಯಕ್ರಮ ಹಾಗೂ ಕವಿಗೋಷ್ಠಿಬೆಳಗಾವಿ - ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ ಅದನ್ನು ಆಸಕ್ತಿಯಿಂದ ಕೇಳುವ ಹಾಗೂ ಅದಕ್ಕೆ ಸ್ಪಂದಿಸುವುದು ಎಲ್ಲರ...

More Articles Like This

error: Content is protected !!
Join WhatsApp Group