ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ– -ಎಸಿಪಿ ನಾರಾಯಣ ಬರಮನಿ

Must Read

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ 

ಜೀವನದ ಆದರ್ಶಗಳ ಜೊತೆಗೆ ಜ್ಞಾನ ಹೆಚ್ಚಿಸುವ ಮಾಹಿತಿಗಳನ್ನು ಮತ್ತು ಎಲ್ಲರೂ ರೂಡಿಸಿಕೊಳ್ಳಲೇ ಬೇಕಾದ ಕೆಲವು ಸರಳವಾದರೂ ಸತ್ಯ ಸಂಗತಿಗಳನ್ನು ಬಿಂಬಿಸಿ ರಚಿಸಿರುವ ಮಲಾಬಾದಿಯವರ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿಯಾಗಿವೆ ಎಂದು ಬೆಳಗಾವಿ ನಗರದ ಪೊಲೀಸ್ ಉಪ ಆಯುಕ್ತ ನಾರಾಯಣ ಬರಮನಿ ಯವರು ಹೇಳಿದರು.

ರವಿವಾರ ದಿ. 30 ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿಯವರ ವತಿಯಿಂದ ಸಾಹಿತಿ ಬಿ ಕೆ ಮಲಾಬಾದಿ ಅವರು ರಚಿಸಿದ ‘ನೀವು ಇದನ್ನು ತಿಳಿದಿರಬೇಕು’ ಮತ್ತು ‘ವಚನ ವೈಖರಿ’ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಲತ್ಕುಮಾರ್ ಪುನಜಗೌಡ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃತಿಗಳನ್ನು ರಚಿಸುವುದು ದುರ್ಲಭವಾಗಿರುವಾಗ ಯಾವುದೇ ಪ್ರಚಾರ ಬಯಸದೆ ಸರಳತೆಯಿಂದ ಸಾಹಿತ್ಯ ಕೃಷಿ ಮಾಡುತ್ತಿರುವ ಮಲಾಬಾದಿಯವರ ಸಾಹಿತ್ಯ ಸೇವೆ ಅನನ್ಯವಾದದು ಅವರ ಈ ಕೃತಿಗಳ ಪ್ರಯೋಜನ ಎಲ್ಲರೂ ಪಡೆಯಲಿ ಎಂದರು.

ಸಾಹಿತಿ ಡಾ. ರಾಜಶೇಖರ್ ಬಿರಾದಾರ ರವರು ‘ನೀವು ಇದನ್ನು ತಿಳಿದಿರಬೇಕು’ ಎಂಬ ಕೃತಿಯನ್ನು ಅದರಲ್ಲಿ ಅಡಗಿರುವ ಸಾಹಿತ್ಯಕ,ಜ್ಞಾನಾತ್ಮಕ ಮತ್ತು ವೈಚಾರಿಕ ಲೇಖನಗಳ ಕುರಿತು ಪರಿಚಯಿಸಿದರು.

ಸಾಹಿತಿ ಡಾ. ಅನ್ನಪೂರ್ಣ ಹಿರೇಮಠ ‘ ವಚನ ವೈಖರಿ’ ಕೃತಿಯನ್ನು ಅದರಲ್ಲಿರುವ ಸರಳವಾದ ವಚನಗಳಲ್ಲಿ ವೈಚಾರಿಕತೆಯನ್ನು ವಿವರಿಸುತ್ತಾ ಪರಿಚಯಿಸಿದರು.

ಕಿರಿಯರಿಂದ ಹಿಡಿದು ಹಿರಿಯರವರೆಗೆ ಓದಲೇಬೇಕಾದ ಕೃತಿ ಇದನ್ನು ನೀವು ತಿಳಿದಿರಬೇಕು ಇದು ಎಲ್ಲರ ಬಳಿ ಇರಬೇಕು ಇಲ್ಲ ಮಾಹಿತಿ ಇರಲಿದೆ ಎಂದು ಎಂ ವೈ ಮೆಣಸಿನಕಾಯಿಯವರು ತಿಳಿಸಿದರು.

ಕೃತಿಕಾರ ಬಿ.ಕೆ ಮಲಾಬಾದಿ ಮಾತನಾಡಿ ಕೃತಿ ರಚನೆ ದುಸ್ತರವಾಗಿರುವ ಈಗಿನ ದಿನಗಳಲ್ಲಿ ಮಕ್ಕಳಿಗೆ ಸೇರಿದಂತೆ ಎಲ್ಲರಿಗೂ ಅನುಕೂಲಕರವಾಗುವ ನಿಟ್ಟಿನಲ್ಲಿ ವಿನೂತನ ಶೈಲಿಯ ಕೃತಿಯ ರಚನೆಗೆ ಸಹಕಾರಿಯಾದ ಸರ್ವರಿಗೂ ಅಭಿನಂದನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕ.ಸಾ.ಪ ಜಿಲ್ಲಾ ಕಾರ್ಯದರ್ಶಿ ಎಂ.ವೈ ಮೆಣಸಿನಕಾಯಿ,ಬೆಳಗಾವಿ ತಾಲೂಕು ಕಸಾಪ ಅಧ್ಯಕ್ಷ ಸುರೇಶ ಹಂಜಿ, ಸ. ರಾ. ಸುಳಕೂಡೆ, ಬಿ ಬಿ ಮಠಪತಿ, ಎಸ್. ಎಂ. ಕಾಮಣ್ಣವರ, ಸಂಗಮೇಶ ಅರಳಿ, ಇಂದಿರಾ ಮೂಟೆಬೆನ್ನೂರು, ಡಾ ಹೇಮಾವತಿ ಸೋನೋಳ್ಳಿಮಹಾನಂದಾ ಮಲಾಬಾದಿ,ಅಕ್ಕಮಹಾದೇವಿ ತೆಗ್ಗಿ,ಮೀನಾಕ್ಷಿ ಮಲಾಬಾದಿ,ಮಹಿಮಾ, ಸುರೇಖಾ ಮಲಾಬಾದಿ, ಚಿದಾನಂದ ಮಲಾಬಾದಿ, ಸದಾನಂದ ಮಲಾಬಾದಿಸಾಹಿಬಾಜ ಶೇಖ ಸೇರಿದಂತೆ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಕಾರ್ಯಕ್ರಮದ ಆರಂಭದಲ್ಲಿ ವೀರಭದ್ರ ಅಂಗಡಿ ಸ್ವಾಗತಿಸಿದರು ಶಿವಾನಂದ ತಲ್ಲೂರ ನಿರೂಪಿಸಿದರು. ನವೀನ ಮಲಾಬಾದಿ ವಂದಿಸಿದರು.

Latest News

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ...

More Articles Like This

error: Content is protected !!
Join WhatsApp Group