ಮುಧೋಳ- ಶರಣರ ಸಂತ ಮಹಾಂತರ ಸಂಗದಿಂದ ಬದುಕು ಸುಂದರವಾಗುತ್ತದೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಅವರು ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮಕ್ಕೆ ಆಗಮಿಸಿ ಭಕ್ತರಿಗೆ ದರ್ಶನ ನೀಡಿ ಮಾತನಾಡಿ, ನಮ್ಮ ಲೌಕಿಕ ಜೀವನ ಹಸನಾಗಿರಲು ಅರಿತವರ ಸಂಗವಿರಬೇಕೆಂದರು.
ಗ್ರಾಮದಲ್ಲಿ ಶ್ರೀಗಳ ಸದ್ಭಾವನಾ ಪಾದಯಾತ್ರೆ ಜನರಲ್ಲಿ ಸಮಾಧಾನ ಮೂಡಿಸಿತು. ಡಿ.ವಾಯ್.ಎಸ್.ಪಿ.ಮುತ್ತಣ್ಣ ಸರವಗೋಳ ಕುಟುಂಬದವರು ಶ್ರೀಗಳ ಪಾದಪೂಜೆ ಹಾಗೂ ಗೌರವ ಸಮರ್ಪಣೆ ಮಾಡಿದರು.ಈ ಸಂದರ್ಭದಲ್ಲಿ ರಾಮಯ್ಯ ಸ್ವಾಮಿಗಳು ಹಿರೇಮಠ, ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವಶಾಸ್ತ್ರಿಗಳು, ಗ್ರಾಮದ ಗಣ್ಯರಾದ ಆರ್.ಎಸ್.ಸುಣಗಾರ, ಗುರುಬಸು ಶಿವಾಪೂರ, ಎಂ.ಆರ್.ಮಂಟೂರ, ಗುರುಪಾದಪ್ಪ ಜನವಾಡ, ಪಿ.ಎಲ್.ಜನವಾಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು

