3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ: ಚನ್ನರಾಜ ಹಟ್ಟಿಹೊಳಿ ಚಾಲನೆ

Must Read

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾವಿನಕಟ್ಟಿ ಗ್ರಾಮದಲ್ಲಿ ಜರುಗಲಿರುವ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಗ್ರಾಮದೊಳಗೆ ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಡೆಸಲಿರುವ ಅಭಿವೃದ್ದಿ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಪ್ರಯತ್ನದಿಂದ ಮಂಜೂರಾಗಿರುವ ಅನುದಾನದಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ, ಚರಂಡಿ ದುರಸ್ತಿ ಹಾಗೂ ಇನ್ನಿತರ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಜಾತ್ರೆ ಸುಗಮವಾಗಿ ನಡೆಯಬೇಕು. ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗಬಾರದು. ಸಕಲ ವ್ಯವಸ್ಥೆಗೆ ಎಲ್ಲ ಇಲಾಖೆಗಳಿಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ನಿರ್ದೇಶನ ನೀಡಿದ್ದಾರೆ ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.

ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೂಳಿ, ನಾಗರಾಜ ಹಿರೇಹೊಳಿ, ಈರಯ್ಯ ಹಿರೇಮಠ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಬಸವಣ್ಣಿ ಮಲ್ಲಣ್ಣವರ, ಶಂಕರ ಮಲ್ಲಣ್ಣವರ, ಅಡಿವೆಪ್ಪ ಪಾಟೀಲ, ಚಂದ್ರಪ್ಪ ಮಲ್ಲಣ್ಣವರ, ನಾಗಪ್ಪ ಇಟಗಿ, ಬಸನಗೌಡ ಪಾಟೀಲ, ಉಳವಪ್ಪ ಮಲ್ಲಣ್ಣವರ, ಚನ್ನಪ್ಪ ಹಿರೇಹೂಳಿ, ಈರಯ್ಯ ಹಿರೇಮಠ, ಶಂಕರ್ ಮಲ್ಲಣ್ಣವರ್, ಅಡಿವೆಪ್ಪ ಪಾಟೀಲ್, ಚಂದ್ರಪ್ಪ ಮಲ್ಲಣ್ಣವರ, ನಾಗಪ್ಪ ಇಟಗಿ, ಬಸನಗೌಡ ಪಾಟೀಲ್, ನಾಗೇಶ್ ದೇಸಾಯಿ, ಸಿದ್ದನಗೌಡ ಪಾಟೀಲ, ನಿಲೇಶ ಚಂದಗಡ್ಕರ್ ಮುಂತಾದವರು ಉಪಸ್ಥಿತರಿದ್ದರು.

Latest News

ಅಕ್ರಮ ಸಾರಾಯಿ ನಿಷೇಧಿಸಲು ಬಾಲಚಂದ್ರ ಜಾರಕಿಹೊಳಿ ಸೂಚನೆ

ಮೂಡಲಗಿ-ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿಯನ್ನು ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ...

More Articles Like This

error: Content is protected !!
Join WhatsApp Group