ಕನ್ನಡ ಜಾನಪದ ಪರಿಷತ್ತು (ರಿ) ಬೆಂಗಳೂರು ನಡೆದು ಬಂದ ದಾರಿ

Must Read

ದಿ.೪-೧೨-೨೦೨೫ರಂದು ಕಜಾಪ ಗದಗ ಜಿಲ್ಲೆಯ ಘಟಕದ ಉದ್ಘಾಟನಾ ಸಮಾರಂಭ ಏರ್ಪಡಿಸಿರುವ, ಪದಗ್ರಹಣ ಸಮಾರಂಭ ನಿಮಿತ್ತ ಲೇಖನ

ಕನ್ನಡ ಜಾನಪದ ಸಾಹಿತ್ಯದ ಮೂಲರೂಪದ ಅಮೂಲ್ಯ ಅನುಪಮ ಕಲೆ ಸಂಸ್ಕೃತಿಯನ್ನು ಉತ್ತೇಜಿಸುವ ಮುಂದಿನ ತಲೆಮಾರಿಗೆ ದಾಖಲಿಸುವ ಸದಾಶಯದಿಂದ  ಸ್ಥಾಪನೆಯಾದ ಸಂಸ್ಥೆ ಕನ್ನಡ ಜಾನಪದ ಪರಿಷತ್ತು (ರಿ).

   ಬೆಂಗಳೂರಿನ  ಸಂಸ್ಥಾಪಕ ಅಧ್ಯಕ್ಷರಾದ ಡಾ.ಎಸ್.ಬಾಲಾಜಿಯವರು ಕಾಲಲ್ಲಿ  ಚಕ್ರ ಕಟ್ಟಿಕೊಂಡು ಗಡಿಯಾರದಂತೆ ನಿರಂತರವಾಗಿ ನಾಡಿನಾದ್ಯಂತವಾಗಿ ಸುತ್ತುತ್ತಾ ೩೧ ಜಿಲ್ಲೆ ಮತ್ತು ೧೮೦ ತಾಲೂಕಿನಲ್ಲಿ  ಅಷ್ಟೇ ಅಲ್ಲ ಹೊರನಾಡಿನಲ್ಲಿಯೂ ಸಹಿತ  ಘಟಕಗಳನ್ನು ಸ್ಥಾಪಿಸಲು ಅಹೋರಾತ್ರಿ ಶ್ರಮಿಸುತ್ತಾ ಜಾನಪದ ಸಾಹಿತ್ಯದ ವಿಕಾಸಕ್ಕಾಗಿ ಮತ್ತು ಕಲೆ ಹಾಗೂ ಕಲಾವಿದರ ಶ್ರೇಯೋಭಿವೃದ್ಧಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿರುವದು ಮನುಕುಲಕ್ಕೆ ಅನುಕರಣೀಯವೇ ಸರಿ !

ಕನ್ನಡ ಭಾಷೆ  ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಇದು  ಮೀಸಲಾದ ಸಂಸ್ಥೆಯಾಗಿರುತ್ತದೆ ಅಲ್ಲದೆ ಜನಪದ ಕಲೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಪ್ರಸಾರಕ್ಕೆ ಅವಕಾಶ ಕಲ್ಪಿಸುವುದು, ಜಾನಪದ ಕಲಾವಿದರಿಗೆ ಬೆಂಬಲ ಮತ್ತು ಪ್ರೋತ್ಸಾಹಿಸುವ,ಸಂಶೋಧನೆಗೆ ಪ್ರೋತ್ಸಾಹಿಸುವ ಹಾಗೂ ಪ್ರಕಟಣೆಗಳನ್ನು ದಾಖಲಿಸುವ ಇತರ ಪ್ರಕಟಣೆಗಳನ್ನು ಪ್ರಕಟಿಸುವ ಸದುದ್ದೇಶಗಳನ್ನೊಳಗೊಂಡ ಅಪೂರ್ವ ಸಂಸ್ಥೆಯೆನಿಸಿ ನಾಡಿನಾದ್ಯಂತ ಅತ್ಯಂತ ಚಿರಪರಿಚಿತವಾಗಿರುತ್ತದೆ. ಜಾನಪದ ಕಲೆಗಳ ಉತ್ಸವಗಳು ಮತ್ತು ಪ್ರದರ್ಶನಗಳನ್ನು  ಆಯೋಜಿಸುವುದು ಜಾನಪದ ಕಲಾವಿದರಿಗೆ ತರಬೇತಿ ಕಾರ್ಯಗಾರಗಳನ್ನು ಏರ್ಪಡಿಸುವುದು ಪುಸ್ತಕಗಳನ್ನು ದಾಖಲೆಗಳನ್ನು ಪ್ರಕಟಿಸುವ ಯೋಜನೆಯನ್ನೊಳಗೊಂಡಿರುತ್ತದೆ. ಕನ್ನಡ ನಾಡು ನುಡಿ ಕಲೆ ಸಂಸ್ಕೃತಿ ಸಂಸ್ಕಾರ ಸಂಪ್ರದಾಯ ಪರಂಪರೆಯ  ಸಂರಕ್ಷಣೆಯಲ್ಲಿ ಅತೀವ ಆಸಕ್ತಿಯಿಂದ ಮಹತ್ವದ ಪಾತ್ರ ವಹಿಸುತ್ತಲಿದೆ .ಆಯಾ ಜಾನಪದ ಕಲಾವಿದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವೀಯತ್ತಲಿದೆ.

ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳನ್ನು ದಾಖಲಿಸುವ ಯೋಜನೆಯನ್ನೊಳಗೊಂಡಿರುತ್ತದೆ. ಜಾನಪದ ಕಲಾವಿದರಿಗೆ ಆರ್ಥಿಕ ಮತ್ತು ಇತರೆ ಬೆಂಬಲವೀಯುತ್ತಲಿರುವದು ಔಚಿತ್ಯಪೂರ್ಣವಾದ ಸಂಗತಿ. ಈ ಸಂಸ್ಥೆಯ ಪತ್ರಿಕಾ ಪ್ರಕಟಣೆಗಳು ಸಂಗೀತ ನೃತ್ಯ  ಸಾಹಿತ್ಯ ಮತ್ತು ಇತರ ಸಾಂಸ್ಕೃತಿಕ ವಿಷಯಗಳ ಬಗ್ಗೆ ಅಪೂರ್ವ ಮಾಹಿತಿಯನ್ನೊಳಗೊಂಡಿರುತ್ತವೆಯಲ್ಲದೆ ಸಂಶೋಧಕರಿಗೆ ಆಕರ ಸಾಮಗ್ರಿಯಾಗಿ ಕೈಬೀಸಿ ಕರೆಯುತ್ತಲಿವೆ.

ಜಾನಪದ ನೂರೊಂದು , ಜಲ ಜಾನಪದ ಕನ್ನಡ ಜಾನಪದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಲಲಿತ ಪ್ರಬಂಧಗಳು  ಹಾಗೂ ಸಂಶೋಧನಾ ಲಲಿತ ಪ್ರಬಂಧಗಳನ್ನು ಕವನ ಕಥೆ ವಿಮರ್ಶೆಗಳನ್ನು ಇತರೆ ವಿಷಯಗಳನ್ನೊಳಗೊಂಡಿರುತ್ತದೆ. ಪುರುಷ, ಮಹಿಳಾ, ಯುವ ಬ್ರಿಗೇಡ್ ಘಟಕಗಳನ್ನು, ಪ್ರತ್ಯೇಕವಾಗಿ ಸ್ಥಾಪಿಸುವ ಮುಖೇನ ಉತ್ಕಟ ಕಲಾಪೇಕ್ಷೆಯ ಅಭಿರುಚಿ ಸಂವರ್ಧಿಸುತ್ತಲಿರುವದು ಯಥೋಚಿತವಾಗಿದೆ. ಬೆಂಗಳೂರಿನ ಕೇಂದ್ರ ಕಛೇರಿಯೊಂದಿಗೆ  ಎಲ್ಲಾ ಘಟಕಗಳು ಸತತವಾಗಿ ಸಂಪರ್ಕದಲ್ಲಿದ್ದು ಸರ್ವವಿಧದ ಕಲೆಗಳ ವಿಕಾಸಕ್ಕಾಗಿ ಸಂರಕ್ಷಣೆಗೆ ಆದ್ಯತೆಯಿತ್ತು ಪ್ರೋತ್ಸಾಹಿಸುತ್ತಲಿದೆ.

ತಮಿಳುನಾಡು,ಆಂಧ್ರ,ಕೇರಳ,ಮಹಾರಾಷ್ಟ್ರ ಗಳಲ್ಲಿಯೂ ,ಗಡಿನಾಡು ಹೊರ ರಾಜ್ಯಗಳಲ್ಲಿಯೂ ತನ್ನ ಘಟಕಗಳನ್ನು ಸ್ಥಾಪಿಸುವಲ್ಲಿ ಜಯಭೇರಿ ಬಾರಿಸಿರುತ್ತಲಿದೆಯಲ್ಲದೇ ಹೊರದೇಶಗಳಲ್ಲಿಯೂ ಸಹ ಘಟಕಗಳನ್ನು ಸ್ಥಾಪಿಸುವ ಉದ್ದೇಶಗಳನ್ನುಳ್ಳದ್ದಾಗಿರುತ್ತದೆ.ಹಲವಾರು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯ ಯೋಜನೆಗಳನ್ನು ಸಫಲಗೊಳಿಸಲು ಡಾ.ಬಾಲಾಜಿಯವರ ಮಾರ್ಗದರ್ಶನದಲ್ಲಿ ಜಾನಪದ ಸಾಹಿತ್ಯ ಸಂಶೋಧನಾಸಕ್ತರು ನಿರಂತರವಾಗಿ ಶ್ರಮಿಸುತ್ತಿರುವದು ಸ್ತುತ್ಯರ್ಹವಾದದು.

   ಕಲಾವಿದರ ಸಮೀಕ್ಷೆಯನ್ನು ಹಾಗೂ ರಾಜ್ಯದ ೧೫ ಜಿಲ್ಲೆಗಳಲ್ಲಿ ಜಾನಪದ ಕಲಾವಿದರನ್ನು ಗುರುತಿಸಿ ಅವರ ಸಮೀಕ್ಷೆಯನ್ನು ನಡೆಸಲಾಗಿದೆ .೨೦೨೭ ರೊಳಗೆ ಇನ್ನುಳಿದ ೧೬ ಜಿಲ್ಲೆಗಳಲ್ಲೂ ಸಮೀಕ್ಷೆಯನ್ನು ನಡೆಸಲು ನಿರ್ಧರಿಸಲಾಗಿದೆ. ಈ ಕ್ಷೇತ್ರದಲ್ಲಿ ಗಣನೀಯ ಕೊಡುಗೆ ನೀಡಿದ ಕಲಾವಿದರಿಗೆ “ಜಾನಪದ ಪ್ರಪಂಚ” ಪ್ರಶಸ್ತಿಯಿತ್ತು ಸತ್ಕರಿಸಲಾಗಿದೆ.ಇಲ್ಲಿಯವರೆಗೂ ೨೩ ಪುರುಷ ಮತ್ತು ಮಹಿಳಾ ಜಾನಪದ ಸಮ್ಮೇಳನ ಭರ್ಜರಿಯಾಗಿ ಯಶಸ್ವಿಯಾಗಿ ಜರುಗಿರುತ್ತವೆ.ಯುವ ಪೀಳಿಗೆಯನ್ನು ಒಗ್ಗೂಡಿಸಿ ಕಲೆಗಳ ವಿಕಾಸಕ್ಕಾಗಿ ಸಂರಕ್ಷಣೆಗೆ ಆದ್ಯತೆಯಿತ್ತು ಅಭಿರುಚಿ ಸಂವರ್ಧಿಸುತ್ತಲಿರುವದು ಶ್ಲ್ಯಾಘನೀಯವಾದುದು. ಕನ್ನಡ ಜಾನಪದ ರಾಜ್ಯೋತ್ಸವವು ಈ ಸಂಘಟನೆಯ ವಾರ್ಷಿಕ ವಿಶೇಷ ಕಾರ್ಯಕ್ರಮವಿದಾಗಿರುತ್ತದೆ.ಜನಾದರಣೀಯವಾದ ಚಿರಪರಿಚಿತ ಸಂಸ್ಥೆಯೆಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಾಲಾಜಿಯವರು ವೈಶಿಷ್ಟ್ಯ ಪೂರ್ಣ ಅನುಪಮ ಕೊಡುಗೆ ಮತ್ತು ಸಾಧನೆ  ಮನಗಂಡು ಡಾ. ಬಾಬಾ ಸಾಹೇಬ್ ಅಂಬೇಡ್ಕರ್  ರಾಜ್ಯ ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ನಾಟಕ ರಾಜ್ಯ ಯುವ ಸಂಘಟನಾ ಒಕ್ಕೂಟ ಬೆಂಗಳೂರು ಮತ್ತು ಕೊಪ್ಪಳ ಜಿಲ್ಲೆಗಳ ಸಂಯುಕ್ತ ಆಶ್ರಯದಲ್ಲಿ  ಆಯೋಜಿಸಿ ಗೌರವಿಸಿರುತ್ತಾರೆ.. ಡಾ.ಬಾಲಾಜಿಯವರು ಸಿಲಿಕಾನ್ ಸಿಟಿಯಲ್ಲಿ  ನೆಲೆಸುತ್ತಾ ಜಾನಪದ ಸಾಹಿತ್ಯದಲ್ಲಿ ೨೫೦ ಕ್ಕೂ ಅಧಿಕ ಕಲಾಪ್ರತಿಭೆಗಳ ಆಶ್ರಯದಾತರೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಕನ್ನಡ ಜಾನಪದ ಪರಿಷತ್ತಿಗೆ ತುಂಬಿದೆ ದಶವರುಷ
ಅದುವೆ ನಮಗೆ ಅತೀವ ಹರುಷ.”

ರಾಜಧಾನಿ ಬೆಂಗಳೂರಿನಲ್ಲಿ ಡಾ.ಬಾಲಾಜಿಯವರು ಹುಟ್ಟು ಹಾಕಿದ ಕಟ್ಟಿ ಬೆಳೆಸಿದ ಅಪೂರ್ವ ಸಂಸ್ಥೆಯೆನಿಸಿ ನಾಡಿನಾದ್ಯಂತ ಸಡಗರ ಸಂಭ್ರಮದ ವಾತಾವರಣ ಪಸರಿಸುತ್ತಲಿರುವ ನಮ್ಮ ಹೆಮ್ಮೆಯ ಪರಿಷತ್ತು ಅದುವೇ  “ಕನ್ನಡ ಜಾನಪದ ಪರಿಷತ್ತು “ಎಂಬುದೇ ಅಭಿಮಾನಿಗಳ ಒಕ್ಕೊರಲಿನ ಘೋಷಣೆಯಾಗಿರುವದು  ಹಿಗ್ಗಿನ ಸಂಗತಿ ತಾನೆ!!.
——–
ಪ್ರೊ ಶಕುಂತಲಾ.ಚನ್ನಪ್ಪ. ಸಿಂಧೂರ.
ಜಾನಪದ ಸಾಹಿತ್ಯ ಸಂಶೋಧಕರು,
ಗದಗ . 

LEAVE A REPLY

Please enter your comment!
Please enter your name here

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group