ಬೀದರ – ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಲಾಗಿದೆ. ಸೂಫಿ-ಸಂತರ ಸಮಾವೇಶದಲ್ಲಿ ನಿವೃತ ನ್ಯಾಯಮೂರ್ತಿಗಳಿಂದ ಹಿಂದೂ ಧರ್ಮಕ್ಕೆ ಅಪಮಾನ ಎಸಗಲಾಗಿದೆ
ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಲ್ಲಿ ಮುಂಬೈ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಜಿ ಕೋಲ್ಸೆ ಪಾಟೀಲ ಮಾತನಾಡುತ್ತ, ಹಿಂದೂ ಅನ್ನುವುದು ಧರ್ಮವೇ ಅಲ್ಲ, ಅದು ಪರ್ಷಿಯನ್ ಪದ. ಅದರ ಅರ್ಥ ಬೈಗುಳ ಇದೆ. ಹಿಂದೂ ಧರ್ಮವೇ ಇಲ್ಲ ಎಂದು ಹೇಳಿದರು.
ಸಮಾವೇಶಕ್ಕೆ ಅಥಿತಿಯಾಗಿ ಆಗಮಿಸಿದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ ಪಾಟೀಲ, ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಅಂತಾ ಸೃಷ್ಟಿಸಿದ್ದಾರೆ. ಆದರೆ ಹಿಂದೂ ಧರ್ಮವೇ ಅಲ್ಲ. ಈ ಇತಿಹಾಸವನ್ನು ಹೇಳುವ ಕಾರ್ಯವನ್ನು ಈಗಿನ ಸಂತರು, ಮೌಲ್ವಿಗಳು ಮಾಡ್ಬೇಕು ಎಂದರು.
ದೇಶದಲ್ಲಿನ ಎಲ್ಲಾ ದಂಗೆಗಳಿಗೆ RSS ಕಾರಣ ಎಂದ ಅವರು, ೧೯೮೪ ರ ಸಿಖ್ಖರ ದಂಗೆಗೂ RSS ನವರೆ ಕಾರಣ ಎಂಬ ವಿವಾದಾತ್ಮಕ ಹೇಳಿಕೆ ನೀಡಿದರು.
ಎಲ್ಲಾ ಸಮಸ್ಯೆಗಳಿಗೂ ಮೂಲ ಕಾರಣ RSS, RSS ವಿರುದ್ಧ ಮಾತನಾಡಲು ಅನೇಕರು ಭಯ ಪಡ್ತಾರೆ. RSS ಹಾಗೂ ಬ್ರಾಹ್ಮಣರ ವಿರುದ್ಧ ಮಾತನಾಡಲು ಭಯಪಡಬೇಡಿ. ಅವರು ದೇಶದಲ್ಲಿ ಕೇವಲ ಒಂದು ಪರ್ಸೆಂಟ್ ಮಾತ್ರ ಇದ್ದಾರೆ. ಬ್ರಾಹ್ಮಣರು ಹೆದರು ಪುಕ್ಕಲರು ಇದಾರೆ ಎಂದೆಲ್ಲ ನಿವೃತ ನ್ಯಾಯಮೂರ್ತಿ ಬಾಯಿ ಹರಿಬಿಟ್ಟರು ಅಷ್ಟರಲ್ಲಿ ಪರಿಸ್ಥಿತಿ ಗಂಭೀರತೆ ಅರಿತ ಆಯೋಜಕರೊಬ್ಬರು ಭಾಷಣ ಮುಗಿಸಲು ಚೀಟಿ ತಂದು ಕೊಟ್ಟ ಕಾರಣ ತಮ್ಮ ಭಾಷಣಕ್ಕೆ ತಿಲಾಂಜಲಿ ಇಟ್ಟರು
ವರದಿ : ನಂದಕುಮಾರ ಕರಂಜೆ, ಬೀದರ

