ಎಲ್ಲರೂ ಮಕ್ಕಳಿಗೆ ತಪ್ಪದೇ ಪೊಲಿಯೋ ಲಸಿಕೆ ಹಾಕಿಸಿ – ತಹಶೀಲ್ದಾರ ಬೆಳ್ಳಿ

Must Read

ಸಿಂದಗಿ; ತಾಲೂಕಿನಾದ್ಯಂತ ಡಿಸೆಂಬರ್ ೨೧ ರಿಂದ ೨೪ ರವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು ೫ ವರ್ಷದೊಳಗಿನ ಎಲ್ಲಾ ಮಕ್ಕಳು ತಪ್ಪದೆ ೨ ಹನಿ ಪೋಲೀಯೊ ಲಸಿಕೆ ಹಾಕಿಸುವಂತೆ ತಹಶೀಲ್ದಾರ ಕರೆಪ್ಪ ಬೆಳ್ಳಿ ಕರೆ ನೀಡಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ, ಕಿಶೋರ ಸ್ವಾಸ್ಥ್ಯ, ಸಾರ್ವತ್ರಿಕಾ ಲಸಿಕಾ ಹಾಗೂ ಸಮನ್ವಯ ಸಮಿತಿ ಚಾಲನಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಿ.೨೨,೨೩,೨೪ ದಿನಗಳಂದು ಮನೆ ಮನೆ ಹಾಗೂ ತೋಟದಮನೆ, ಇಟ್ಟಂಗಿ ಬಟ್ಟಿ, ಕಬ್ಬು ಕಡಿಯುವವರ ತಂಡದ, ಸಕ್ಕರೆ ಪ್ಯಾಕ್ಟರಿ, ಕಾರ್ಮಿಕರ ಮಕ್ಕಳಿಗೆ ಕೂಡಾ ಲಸಿಕೆ ಹಾಕಲಾಗುವದು. ಲಸಿಕಾ ಅಭಿಯಾನದ ಮುಂಚೆ ೨ ದಿನ ಹಾಗೂ ಲಸಿಕಾ ಅಭಿಯಾನದ  ದಿನಗಳಲ್ಲಿ ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು.  ಪುರಸಭೆ ಹಾಗೂ ಗ್ರಾಮ ಪಂಚಾಯತಿಯಲ್ಲಿ ಡಂಗೂರ ಸಾರಬೇಕು ಸ್ವಚ್ಚತಾ ವಾಹನಗಳ ಮುಖಾಂತರ ವ್ಯಾಪಕ ಪ್ರಚಾರ ಹಮ್ಮಿಕೊಳ್ಳಬೇಕು ಸಾರಿಗೆ ಇಲಾಖೆಯ ಅಧಿಕಾರಿಗಳು  ಬಸ್  ಹಾಗೂ ಬಸ್ ಗಳಲ್ಲಿರುವ ೫ ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಅನುವು ಮಾಡಿಕೊಡಬೇಕು. ಶಾಲಾ ಮಕ್ಕಳಿಂದ ಜಾತಾ ಮುಖಾಂತರ ಜಾಗ್ರತಿ ಮೂಡಿಸಬೇಕು ಎಂದು ಹೇಳಿದರು

ಅಂಗನವಾಡಿ ಕಾರ್ಯಕರ್ತೆಯರು ಮೇಲ್ವಿಚಾರಕರು ಕಡ್ಡಾಯವಾಗಿ ಅಭಿಯಾನದಲ್ಲಿ ಪಾಲ್ಗೊಳ್ಳಲು ಸೂಚಿಸಲು  ಸಿ.ಡಿ.ಪಿ.ಓ ರವರಿಗೆ ಹೇಳಿದರು.

ಪಲ್ಸ ಪೋಲೀಯೋ ಆಂದೋಲನದ ಕುರಿತು ಡಾ. ಶಶಿಕಾಂತ ಬಾಗೇವಾಡಿ ತಾಲೂಕಾ ಆರೋಗ್ಯಾಧಿಕಾರಿ ಮಾತನಾಡಿ, ತಾಲೂಕಾನಾದ್ಯಾಂತ ೫ ವರ್ಷದೊಳಗಿನ ಒಟ್ಟು ೫೪೦೫೫ ಮಕ್ಕಳು ಲಸಿಕೆ ಪಡೆಯಲಿದ್ದು, ಒಟ್ಟು ೨೩೩ ಬೂತ್ ಗಳನ್ನು ಸ್ಥಾಪಿಸಿದ್ದು, ೨೪೩ ತಂಡಗಳು ಕಾರ್ಯನಿರ್ವಹಿಸುತ್ತಿದ್ದು ೪೮೪ ಲಸಿಕೆ ನಿಡುವವರು,೪೮ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಆಲಮೇಲ ತಹಶೀಲದಾರ ಮಲ್ಲಿಕಾರ್ಜುನ ಅರಕೇರಿ ಮಾತನಾಡಿ, ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಲ್ಲಿ ಶಾಲೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ಇರುವ ಮಕ್ಕಳ ಆರೋಗ್ಯ ತಪಾಸಣೆ ಮಾಡುತ್ತಿದ್ದು ಶಾಲೆಯ ಮುಖ್ಯೋಪಾಧ್ಯಾಯರು ಸಹಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸಹಕಾರ ನೀಡಿ ಕಾರ್ಯಕ್ರಮ ಅನುಷ್ಠಾನಗೊಳಿಸಲು ಕೈ ಜೋಡಿಸಬೇಕು ಅಲ್ಲದೆ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಅಂಗವಾಗಿ ಸಮುದಾಯ ಆರೋಗ್ಯ ಕೇಂದ್ರ ಆಲಮೇಲ, ಕಲಕೇರಿ, ಮೋರಟಗಿ ಹಾಗೂ ಸಿಂದಗಿ ಆಸ್ಪತ್ರೆಯಲ್ಲಿ ಆಪ್ತ ಸಮಾಲೋಚಕರು, ಶಿಕ್ಷಣ ಇಲಾಖೆಯಲ್ಲಿ ಶಾಲೆಗಳಲ್ಲಿ ಹದಿಹರೆಯದವರ ಆರೋಗ್ಯದ ಕುರಿತು, ವಿಪ್ಸ ಕಾರ್ಯಕ್ರಮದಲ್ಲಿ ಪ್ರತಿ ಸೋಮವಾರ ಮಕ್ಕಳಿಗೆ ಐರನ್ ಪೋಲಿಕ್ ಆಸಿಡ್ ಮಾತ್ರೆ ಕೊಡಬೇಕು. ಶಾಲೆಯಲ್ಲಿರುವ ೧೦ ಮತ್ತು ೧೬ ವರ್ಷದ ಮಕ್ಕಳಿಗೆ ಆರೋಗ್ಯ ಇಲಾಖೆಯವರು ನೀಡುವ ಲಸಿಕೆ ಹಾಕಿಸಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕಿನ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿಗಳು ಆರ್.ಬಿ.ಎಸ್.ಕೆ ವೈದ್ಯಾಧಿಕಾರಿಗಳು ಆರ್.ಕೆ.ಎಸ್.ಕೆ ಸಿಬ್ಬಂದಿಯವರು ಹಾಗೂ ವಿವಿದ ಪ್ರಾ.ಆ ಕೇಂದ್ರದ ಅಧಿಕಾರಿ ಸಿಬ್ಬಂದಿಯವರು ತಾಲೂಕಾ ಆರೋಗ್ಯಾಧಿಕಾರಿ ಕಾರ್ಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು. ತಾಲೂಕಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಿ.ವಾಯ್.ಚೌಡಕಿ ಸ್ವಾಗತಿಸಿದರು. ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು.

LEAVE A REPLY

Please enter your comment!
Please enter your name here

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group