ಮಕ್ಕಳ ಸರ್ವತೋಮುಖ ವಿಕಸನಕ್ಕೆ ಕಲಿಕಾ ಹಬ್ಬ ಸಹಕಾರಿ – ನಿಂಗನಗೌಡ ಬಿರಾದಾರ

Must Read

ಸಿಂದಗಿ : ಕಲಿಕಾ ಹಬ್ಬವು ಮಕ್ಕಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸುವ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಿಂಗನಗೌಡ ಸಾಹೇಬಗೌಡ ಬಿರಾದಾರ ಹೇಳಿದರು.

ತಾಲ್ಲೂಕಿನ ಬಂದಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕನ್ನೊಳ್ಳಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಕಾ ಹಬ್ಬವು ಮಕ್ಕಳನ್ನು ಕಲಿಕೆಯ ಮೂಲಕ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.

ಶಿಕ್ಷಣ ಸಂಯೋಜಕ ಬಿ.ಬಿ.ಪಾಟೀಲ ಮಾತನಾಡಿ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಚಯ, ಚಿತ್ರಕಲೆ, ಮಣ್ಣಿನ ಮಾದರಿ ತಯಾರಿಕೆ, ಕಾಗದದ ಕೆಲಸ, ನಾಟಕಗಳ ಮೂಲಕ ಮಕ್ಕಳ ಸೃಜನಶೀಲ ಶಕ್ತಿಯನ್ನು ಉತ್ತೇಜಿಸಲಾಗುತ್ತದೆ ಎಂದು ತಿಳಿಸಿದರು.

ಕನ್ನೊಳ್ಳಿ ಸಮೂಹ ಸಂಪನ್ಮೂಲ ವ್ಯಕ್ತಿ ಸೋಮೇಶಗೌಡ ಪಾಟೀಲ, ಶಿಕ್ಷಕ ಬಸವರಾಜ ಅಗಸರ ಮಾತನಾಡಿ, ಸ್ಥಳೀಯ ಕಲೆಗಳು, ಜನಪದ ಹಾಡುಗಳು ಮತ್ತು ಕಥೆಗಳಿಗೆ ಈ ಹಬ್ಬದಲ್ಲಿ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಬಿರಗೊಂಡ, ಶ್ರೀಮಂತ ಯಳಸಂಗಿ, ಮಲ್ಲಿಕಾರ್ಜುನ ಬಿರಾದಾರ, ನಬಿರಸೂಲ್ ಬೆಕಿನಳ,  ನಿಂಗಯ್ಯ ಮಠ, ಗೋಲಪ್ಪ ಮಾದರ, ಸಂತೋಷ ದೇವೂರ, ಯಲ್ಲಪ್ಪ ಗಡಗಿ, ಶಾಂತಗೌಡ ಪಾಟೀಲ, ಭಗವಂತ್ರಾಯ ಬಗಲಿ, ಮಾಹಾಂತೇಶ ಯಳಮೇಲಿ, ಸುಧಾರಾಣಿ ಶಂಕರ ಮೋರಟಗಿ, ಕೆಂಚರಾಯ ತಳವಾರ, ಜಟ್ಟಪ್ಪ ಉಕ್ಕಲಿ, ಬಸವರಾಜ ಹೆರಕಲ್,  ಗೊಲ್ಲಾಳಪ್ಪ ದೇವರಮನಿ, ಸೋಮಶೇಖರ ರವಿಪಾಟೀಲ. ಮಲ್ಲಿಕಾರ್ಜುನ ಬೂದಿಹಾಳ. ಮಲ್ಲಪ್ಪ ಬಿರಗೊಂಡ.ಸಿ ಆರ್ ಪಿ ರಾಜುಗೌಡ ಭೂಸನೂರ. ಪ್ರಭುಗೌಡ ಏವೂರ . ಬಸಮ್ಮ ಭಜಂತ್ರಿ. ಗುರುನಾಥ ಯಾತನೂರ. ಎಸ್ ಎಸ್ ಕುಂಬಾರ, ಮುಖ್ಯ ಶಿಕ್ಷಕ ನಿಂಗನಗೌಡ ಪಾಟೀಲ.ಶಿಕ್ಷಕರಾದ ಸಿದ್ದಲಿಂಗಪ್ಪ ಪೊದ್ದಾರ .ಪಿ ವ್ಹಿ ಕುಲಕರ್ಣಿ . ದಯಾನಂದ ಅಂಬಿಗೇರ. ಶಿವಶರಣ ಕಂಟಿಗೊAಡ . ಎಸ್ ಎಸ್ ಕೆಂಬಾವಿ. ಎಂ ವೈ. ಹಿಪ್ಪರಗಿ, ಎ.ಬಿ.ಉಡಕೇರಿ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

ಆಯ್ ಬಿ ಮುತ್ತಿನಕಂತಿಮಠ, ಶ್ರೀಪಾದ ದೀಕ್ಷಿತ, ಎಸ್ ಡಿ ಜೇವರ್ಗಿ, ಎಸ್ ಎಂ ಜಂಗೀನಮಠ . ರೂಪಾ ಚಾಂದಕವಟೆ, ಸುನೀತಾ ಅರಿ, ಕಾಂಚನಾ ಕೆ ಆರ್, ಮಹೇಶ ಹಳೇಮನಿ, ಎಸ್ ಎಂ ಬಾಗೇವಾಡಿ, ಸುಹಾಸಿನಿ ಬಡಿಗೇರ, ಬಿ ಎಸ್ ದ್ಯಾವನಾಳ ಕಲಿಕಾ ಹಬ್ಬದ ಚಟುವಟಿಕೆಯ ನಿರ್ಣಾಯಕರಾಗಿ ಭಾಗವಹಿಸಿದರು. ಎಸ್ ಡಿ ಎಂ ಸಿ ಉಪಾಧ್ಯಕ್ಷ , ಸದಸ್ಯರು, ಕ್ಲಸ್ಟರ್ ಮಟ್ಟದ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷÀಕರು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಹಿರಿಯ ಶಿಕ್ಷಕ ಚಂದ್ರಶೇಖರ ಬುಯ್ಯಾರ ನಿರೂಪಿಸಿದರು. ಶಿಕ್ಷಕ ಭಾಗೇಶ ಗೋಲಗೇರಿ ಸ್ವಾಗತಿಸಿದರು. ಶಿಕ್ಷಕ ಕೃಷÀ್ಣರಾವ್ ಕುಲಕರ್ಣಿ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group