ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸುವದು ಅನಿವಾರ್ಯವಾಗಿದೆ. ಅಂಕಗಳ ಆಧಾರದ ಮೇಲೆಯೇ ಉನ್ನತ ವ್ಯಾಸಂಗ ನಿರ್ಧಾರವಾಗುವದರಿಂದಲೇ ಎಸ್ಸೆಸಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಮತ್ತು ಪಾಲಕರು ಒತ್ತಡವನ್ನು ಎದುರಿಸಬೇಕಾದ ಸಂದರ್ಭ ನಿರ್ಮಾಣವಾಗಿದೆ.
ಇನ್ನೇನು ಎರಡು ಮೂರು ತಿಂಗಳಲ್ಲಿ ಅಂದರೆ ಮಾರ್ಚ ತಿಂಗಳಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಜ್ವರವೂ ಆರಂಭವಾಗುತ್ತವೆ. ಪರೀಕ್ಷೆ ಎನ್ನುವ ಶಬ್ದ ಕೇಳಿದ ತಕ್ಷಣ ಬಹುತೇಕ ವಿದ್ಯಾರ್ಥಿಗಳಿಗೆ ಭಯವುಂಟಾಗುತ್ತದೆ. ಕೆಲವು ವಿದ್ಯಾರ್ಥಿಗಳು ಶೈಕ್ಚಣಿಕ ವರ್ಷದಾರಂಭದಿಂದಲೇ ಅಭ್ಯಾಸ ಮಾಡುತ್ತಿದ್ದರೂ ಪರೀಕ್ಷೆಯ ತಯಾರಿ ಹೇಗೆ ಮಾಡಬೇಕು ಎನ್ನುವ ಮಾರ್ಗದರ್ಶನ sಸೂತ್ರಗಳು ಸಿಗದೆ ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಿರುತ್ತಾರೆ. ಪರೀಕ್ಷೆಯ ಭಯವನ್ನೋಡಿಸಲು ಹಾಗೂ ಅತ್ಯಧಿಕ ಅಂಕಗಳನ್ನು ಗಳಿಸಲು ಈ ಕೆಳಗೆ ನೀಡಿದ ವಿಧಾನಗಳನ್ನು ಪಾಲಿಸಿ.
ಪಾಠದ ಹಿಂದಿನ ಪ್ರಶ್ನೆಗಳನ್ನಷ್ಟೇ ಓದದೇ ಪಠ್ಯಪುಸ್ತಕವನ್ನು ಸಂಪೂರ್ಣವಾಗಿ ಓದಿ ಅರ್ಥವಾಗದ ವಿಷಯಗಳನ್ನು ಶಿಕ್ಷಕರನ್ನು ಕೇಳಿ ತಿಳಿದುಕೊಳ್ಳಿ.
ಓದುವಾಗ ಯಾರು, ಎಲ್ಲಿ, ಏನು ಏಕೆ, ಹೇಗೆ ಯಾವುದು ಎಂಬ ಪ್ರಶ್ನೆಗಳನ್ನು ಹಾಕಿಕೊಂಡು ಓದಿ..
ಪ್ರಮುಖಾಂಶಗಳಿಗೆ ಸ್ಕೆಚ್ ಪೆನ್ನಿನಿಂದ ಅಂಡರಲೈನನ್ನು ಮಾಡಿಕೊಳ್ಳಿ.
ಇಸ್ವಿಗಳ ಸೂತ್ರಗಳ ಡೈಗ್ರಾಮಗಳ ಚಾರ್ಟಗಳನ್ನು ಮಾಡಿ ಓದುವ ಕೋಣೆಯಲ್ಲಿ ಗೋಡೆಗೆ ಅಂಟಿಸಿ ವಿರಾಮದ ಸಮಯದಲ್ಲಿ ಅವುಗಳೆಡೆಗೆ ಕಣ್ಣು ಹಾಯಿಸಿ.
ನಿಮಗೆ ಇಷ್ಟವಿರುವ ವಿಷಯಗಳನ್ನು ಓದಿ ಉಳಿದ ವಿಷಯಗಳನ್ನು ನಾಳೆ ಓದಿದರಾಯಿತು ಬಿಡು ಎಂದು ಮುಂದೂಡಬೇಡಿ.
ಎಲ್ಲ ವಿಷಯಗಳಿಗೂ ಸರಿಯಾದ ಪ್ರಾಧಾನ್ಯತೆ ಕೊಟ್ಟು ಓದಿ.
ಓದಲು ನಿಮ್ಮದೇ ಆದ ಒಂದು ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದನ್ನು ತಪ್ಪದೇ ಪರಿಪಾಲಿಸುವದು. ವೇಳಾಪಟ್ಟಿಯಲ್ಲಿ ಓದುವದನ್ನು ಹೊರತು ಪಡಿಸಿ ಇತರ ಕೆಲಸಗಳಿಗೂ, ಮನರಂಜನೆಗೂ ಸಮಯವಿರಲಿ. ಓದು ನಿಮ್ಮ ಮೇಲೆ ಒತ್ತಡವನ್ನು ಹೇರಬಾರದು ಕೂಲಾಗಿ ಓದಿರಿ.
ಪ್ರತಿ ಒಂಧು ತಾಸಿನ ಓದಿನ ನಂತರ ಸ್ವಲ್ಪ ವಿರಾಮವಿರಲಿ. ದಿನಕ್ಕೆ ಐದಾರು ಗಂಟೆಗಳ ಓದು ಉತ್ತಮ.
ಓದುವ ಕೊಠಡಿ ಬೆಳಕು ಮತ್ತು ಗಾಳಿಯಿಂದ ಕೂಡಿರಲಿ. ಬೇರೆಯವರಿಂದ ನಿಮಗೆ ತೊಂದರೆಯಾಗದAಥ ಜಾಗವನ್ನು ಆರಿಸಿಕೊಳ್ಳಿ.
ದೀರ್ಘ ಉತ್ತರಗಳನ್ನು ಮೇಲಿಂದ ಮೇಲೆ ಬರೆದು ತೆಗೆಯಿರಿ. ಒಂದು,ಎರಡು ಅಂಕದ ಉತ್ತರಗಳನ್ನು ನಿಮ್ಮ ಗೆಳೆಯರೊಂದಿಗೆ ಚರ್ಚಿಸುತ್ತಿರಿ.
ಓದುವಾಗಲೇ ಶಾರ್ಟ ನೋಟ್ಸುಗಳನ್ನು ತಯಾರಿಸಿಕೊಳ್ಳಿ ಇದು ಪರೀಕ್ಷೆಯ ಹಿಂದಿನ ಕೆಲ ದಿನಗಳ ಓದಿಗೆ ನೆರವಾಗುವದು.
ಓದಿದ ವಿಷಯಗಳನ್ನು ಸಮಯ ಸಿಕ್ಕಾಗಲೆಲ್ಲ ಮತ್ತು ಪ್ರತಿ ರಾತ್ರಿ ಮಲಗುವ ಮುನ್ನ ತಪ್ಪದೇ ಪುನರವಲೋಕನ ಮಾಡಿಕೊಳ್ಳುವದು ಉತ್ತಮ
ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯ ರೂಢಿಯ ಸಲುವಾಗಿ ಮತ್ತು ನೀವು ಯಾವ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ಅಸಮರ್ಥರಾಗಿದ್ದೀರಿ ಎನ್ನುವ ಸಲುವಾಗಿ ಹಿಂದಿನ ಸಾಲಿನ ಪ್ರಶ್ನೆ ಪತ್ರಿಕೆಗಳನ್ನು ಮೂರು ಗಂಟೆಗಳ ಸಮಯ ಹಚ್ಚಿ ಬರೆಯಿರಿ. ಈ ತೆರನಾದ ಪ್ರಯತ್ನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವದು.
ಈ ಹಿಂದಿನ ವರ್ಷದಲ್ಲಿ ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿ ಸೂಕ್ತವೆನಿಸುವ ಅಂಶಗಳನ್ನು ನಿಮ್ಮ ಓದಿಗೆ ಅಳವಡಿಸಿಕೊಳ್ಳಿ.
ಲಿಖಿತ ಪರೀಕ್ಷೆಯಾಗಿರುವದರಿಂದ ನೀವು ಬರವಣಿಗೆಯ ಬಗೆಗೆ ಲಕ್ಷ್ಯ ಹರಿಸಲೇಬೇಕು.ದಿನ ನಿತ್ಯ ಸುಮಾರು ಐದರಿಂದ ಆರು ಪುಟಗಳನ್ನು ಬರೆದು ತೆಗೆಯಿರಿ.ಬರವಣಿಗೆ ಸ್ಪಷ್ಟವಾಗಿರಲಿ ಮತ್ತು ಯಾವುದೇ ತಪ್ಪಿಲ್ಲದಂತೆ ಆಕರ್ಷಕವಾಗಿರಲಿ.
ಬರವಣಿಗೆ ರೂಢಿ ಇರದಿದ್ದರೆ ಪರೀಕ್ಷೆಯಲ್ಲಿ ಉತ್ತರಗಳು ನಿಮಗೆ ಗೊತ್ತಿದ್ದರೂ ಬರೆಯಲು ಸಮಯ ಸಿಗದೆ ಕಷ್ಟ ಅನುಭವಿಸುತ್ತೀರಿ. ಸರಿಯಾದ ಸಮಯಕ್ಕೆ ಊಟ, ನಿದ್ದೆ ಮಾಡಬೇಕು. ನಿದ್ದೆಗೆಟ್ಟು ಓದಿದರೆ ಪರೀಕ್ಷೆ ಬರುವ ವೇಳೆಗೆ ನಿಮ್ಮ ಆರೋಗ್ಯ ಹದಗೆಡುತ್ತದೆ.ಇದರಿಂದ ನೀವು ಪಟ್ಟ ಪರಿಶ್ರಮ ವ್ಯರ್ಥವಾಗುವದು.
ಪರೀಕ್ಷೆಯ ಕೋಣೆಯಲ್ಲಿ ಕೂಲಾಗಿರಿ. ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಸಾವಕಾಶವಾಗಿ ಓದಿ. ನಿಮಗೆ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ. ಉತ್ತರ ಹೊಳೆಯದ ಪ್ರಶ್ನೆಗಳ ಬಗ್ಗೆ ಯೋಚಿಸುತ್ತಾ ಕುಳಿತುಕೊಳ್ಳಬೇಡಿ. ಮುಂದಿನ ಪ್ರಶ್ನೆಗೆ ಉತ್ತರಿಸಿ.
ಅಂಕಗಳ ಆಧಾರದ ಮೇಲೆ ನಿಮ್ಮ ಉತ್ತರವಿರಲಿ ಧೀರ್ಘ ಉತ್ತರಗಳನ್ನು ಬರೆಯುವಾಗ ಪ್ಯಾರಾಗ್ರಾಫುಗಳಲ್ಲಿ ಬರೆಯಿರಿ. ಪ್ರಮುಖ ಅಂಶಗಳ ಕೆಳಗೆ ಅಡಿಗೆರೆಯನ್ನು ತಪ್ಪದೇ ಹಾಕಿ. ಪೀಠಿಕೆ, ಮುಖ್ಯಾಂಶಗಳ ವಿವರಣೆ ಮತ್ತು ಉಪಸಂಹಾರವಿರಲಿ.
ಅಸಮರ್ಪಕ ಉತ್ತರ ಬರೆಯಬೇಡಿ ಒಂದು ಅಂಕದ ಮತ್ತು ಬಹು ಆಯ್ಕೆಯ ಪ್ರಶ್ನೆಗಳಿಗೆ ಒಂದೇ ಸಾರಿ ಉತ್ತರಿಸಿ.
ಪ್ರಶ್ನೆಗಳ ಸಂಖ್ಯೆಯನ್ನು ಸರಿಯಾಗಿ ನಮೂದು ಮಾಡಿ. ಎಡಿಶನಲ್ ಸೀಟುಗಳ ಮೇಲೆ ನಿಮ್ಮ ರಜಿಸ್ಟರ ಸಂಖ್ಯೆ ಮರೆಯದೇ ಬರೆಯಿರಿ.
ಪರೀಕ್ಷೆ ಸಮಯದ ಮುನ್ನವೇ ಪರೀಕ್ಷಾ ಕೊಠಡಿ ಬಿಟ್ಟು ಹೋಗ ಬೇಡಿ. ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ.
ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ತುಂಬಾ ಮುಖ್ಯ. ಪರೀಕ್ಷೆ ಸಮಯ ಮುಗಿಯುವ ಹತ್ತು ನಿಮಿಷ ಮೊದಲೇ ನಿಮ್ಮ ಉತ್ತರ ಪತ್ರಿಕೆ ಸಿದ್ದವಾಗಿರಲಿ.ಈ ಹತ್ತು ನಿಮಿಷದಲ್ಲಿ ಅಡಿಷನಲ್ ಸೀಟುಗಳನ್ನು ಸಿರಿಯಲ್ಲಾಗಿ ಕಟ್ಟಿಕೊಳ್ಳುವದು,ರಜಿಸ್ಟರ ಸಂಖ್ಯೆ ಪರೀಕ್ಷಿಸಿಕೊಳ್ಳುವದು ಬರವಣಿಗೆಯಲ್ಲಾದ ತಪ್ಪುಗಳನ್ನು ತಿದ್ದಲು ನೆರವಾಗುವದು..
ಪಾಲಕರು/ಪೋಷಕರು ಈ ಕ್ರಮಗಳನ್ನು ಪಾಲಿಸಿ.
*ಮಕ್ಕಳಿಗೆ ಓದುವದರ ಮಹತ್ವ ತಿಳಿಸಿ.
*ಶಾಲೆ/ಕಾಲೇಜಿಗೆ ಭೇಟಿ ನೀಡಿ ಮಕ್ಕಳ ಪ್ರಗತಿಯ ಬಗ್ಗೆ ವಿಚಾರಿಸಿ.
* ಕಡಿಮೆ ಅಂಕಗಳನ್ನು ತೆಗೆದಿದ್ದಾರೆ ಎಂಬ ವಿಷಯಕ್ಕೆ ಬಯ್ಯುವದು ಶಿಕ್ಷಿಸುವದು ಮಾಡÀಬೇಡಿ..ಇಂದಿನ ದಿನಮಾನಗಳಲ್ಲಿ ಅತ್ಯಧಿಕ ಅಂಕ ಗಳಿಸುವದರ ಅನಿವಾರ್ಯತೆಯ ಬಗ್ಗೆ ತಿಳಿಹೇಳಿ.
* ಮಕ್ಕಳ ಆರೋಗ್ಯ ಅಭ್ಯಾಸದ ಬಗ್ಗೆ ಕಾಳಜಿ ವಹಿಸಿ.
* ಓದಿಗೆ ಪೂರಕವಾದ ಸಾಮಗ್ರಿಗಳನ್ನು ಸಕಾಲಕ್ಕೆ ಕೊಡಿಸಿ.
* ವಿರಾಮದ,ಮನರಂಜನೆಯ ಸಮಯದಲ್ಲಿ ಓದುವಂತೆ ಒತ್ತಾಯಿಸಬೇಡಿ.ಕನಿಷ್ಟ ಆರು ಗಂಟೆಗಳ ಕಾಲ ಮಲಗಲು ಬಿಡಿ.
* ಮಕ್ಕಳೊಂದಿಗೆ ಬರೀ ಅಭ್ಯಾಸದ ಕುರಿತಾಗಿ ಮಾತನಾಡದೆ ಇತರ ವಿಷಯಗಳ ಬಗೆಗೂ ಪ್ರೀತಿಯಿಂದ ಮಾತನಾಡಿ.
*ಸಹಪಾಠಿಗಳೊಂದಿಗೆ ಆಡಲು ಬಿಡಿ. ಗುಂಪು ಅಧ್ಯಯನಕ್ಕೂ ಪ್ರೋತ್ಸಾಹ ನೀಡಿ.
ಈ ವಿಧಾನಗಳನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲಿಸಿದರೆ ಪರೀಕ್ಷೆಯಲ್ಲಿ ಯಶಸ್ಸು ಖಚಿತ.

ಶ್ರೀಮತಿ ಜಯಶ್ರೀ ಅಬ್ಬಿಗೇರಿ
೯೪೪೯೨೩೪೧೪೨

