ಆರಕ್ಷಕ ಸಾಹಿತಿ ಸಂಗಮೇಶ ಬಸಗೌಡ ನಾಯಿಕ ರವರಿಗೆ ಆಜೂರ ಪ್ರತಿಷ್ಠಾನದ ಪ್ರಶಸ್ತಿ

Must Read

ಬೆಳಗಾವಿ : ಆರಕ್ಷಕ ಸಾಹಿತಿ ಸಂಗಮೇಶ ಬಸನಗೌಡ ನಾಯಿಕ ಅವರು ಬರೆದ  ‘ಮೌನ ಮಧುರ’ ಎಂಬ ಕೃತಿಗೆ ಪ್ರತಿಷ್ಠಿತ ಆಜೂರ ಪ್ರಶಸ್ತಿಯನ್ನು ಜನವರಿ 15, ಗುರುವಾರ ರಂದು ಪ್ರಶಸ್ತಿ ಪತ್ರ, ಶಾಲು, ಹೂಮಾಲೆ, ಪುಸ್ತಕ ಹಾಗೂ ಧನರಾಶಿಯನ್ನು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಂದಿಗುಂದ-ಆಡಿ ಸಿದ್ದೇಶ್ವರಮಠದ ಪ.ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಾದ ನೀಡಿ ಯೋಗ್ಯ ಸಾಹಿತಿಗಳಿಗೆ ಹಾಗೂ ಯೋಗ್ಯ ಸಾಧಕರಿಗೆ ಪ್ರಶಸ್ತಿಯನ್ನು ನೀಡಿದರೆ ಪ್ರಶಸ್ತಿಯ ಮೌಲ್ಯವು ಹೆಚ್ಚಾಗುತ್ತದೆ ಹಾಗೂ ಸಾಧಕರ ಗೌರವೂ ಹೆಚ್ಚಾಗುತ್ತದೆ ಎಂದು ಹೇಳಿದರು.

ಹಾರೂಗೇರಿಯ ಆಜೂರ ತೋಟದ ಮಹಾಮನೆಯಲ್ಲಿ ಆಯೋಜಿಸಿದ ಭವ್ಯವಾದ ಕಾರ್ಯಕ್ರಮದಲ್ಲಿ ವಿರಕ್ತಮಠ ಬೆಲ್ಲದಬಾಗೇವಾಡಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಚಿಮ್ಮಡದ ಶ್ರೀ ಪ್ರಭು ಮಹಾಸ್ವಾಮಿಗಳು, ಶೇಗುಣಸಿಯ ಶ್ರೀ ಮಹಾಂತ ಮಹಾಸ್ವಾಮಿಗಳು, ನಾರಾಯಣ ಶರಣರು, ವಿಠ್ಠಲ ಶರಣರು ದಿವ್ಯ ಸಾನಿಧ್ಯ ವಹಿಸಿದ್ದರು.

ಬಳ್ಳಾರಿಯ ರುದ್ರಪ್ಪ ನಿಷ್ಠಿ ಅವರು ಮಾತನಾಡುತ್ತಾ ಆಜೂರ ಪ್ರಶಸ್ತಿಯು ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗಿಂತ ಕಡಿಮೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಷ್ಠಾನದ ರೂವಾರಿಗಳು ಬಸವರಾಜ ಆರ್. ಆಜೂರ ಅವರು ಎಲ್ಲ ಗಣ್ಯಮಾನರನ್ನು ಸ್ವಾಗತಿಸಿದರು.

ಪ್ರಶಸ್ತಿಯನ್ನು ಸ್ವೀಕರಿಸಿದ ಸಂಗಮೇಶ ಬಸನಗೌಡ ನಾಯಿಕ ಅವರು ಈ ಪ್ರಶಸ್ತಿಯನ್ನು ಪಡೆದು ಅಗಾಧವಾದ ಸಂತೋಷವೂ ಆಗಿದೆ ಹಾಗೂ ಜವಾಬ್ದಾರಿ ಕೂಡ ಹೆಚ್ಚಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನ ಸಾಹಿತ್ಯಾಸಕ್ತರು ಹಾಗೂ ಆಜೂರ ಪ್ರತಿಷ್ಠಾನದ ಅಭಿಮಾನಿಗಳು ಆಗಮಿಸಿ ಸಾಕ್ಷಿಯಾಗಿದ್ದರು. ಬೆಳಗಾವಿಯ ಎಂ. ವೈ. ಮೆಣಸಿನಕಾಯಿ, ಡಾ. ಹೇಮಾ ಸೊನೊಳ್ಳಿ, ಜಾನಪದ ಗಾಯಕ ಶಬ್ಬೀರ್ ಡಾಂಗೆ, ಗಾಯಕಿ ಪ್ರೇಮಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಸಂಗಮೇಶರ ಸ್ವ-ಪರಿಚಯ

ನಾನು ಸಂಗಮೇಶ ಬಸಗೌಡ ನಾಯಿಕ ಸಾ ಅವರಖೋಡ ತಾಲೂಕ ಅಥಣಿ ಜಿಲ್ಲಾ ಬೆಳಗಾವಿ. ನಾನು ನನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನಮ್ಮೂರಿನ ಸ್ವ ಗ್ರಾಮವಾದ ಅವರಖೋಡದಲ್ಲಿ ಪಡೆದುಕೊಂಡಿದ್ದು. ಹಾಗೂ ಉನ್ನತ ಶಿಕ್ಷಣವನ್ನು ಬೆಳಗಾವಿಯ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಇದರಲ್ಲಿ ಪಡೆದುಕೊಂಡಿದ್ದು ಇರುತ್ತದೆ. ಸದ್ಯಕ್ಕೆ ನಾನು ಪೊಲೀಸ್ ಇಲಾಖೆಯ ಅಧಿಕಾರಿಯೂ ಹೌದು ಸಾಹಿತಿಯು ಹೌದು ಈಗ ನಾನು ಆರಕ್ಷಕ ಸಾಹಿತಿಯಾಗಿದ್ದು ಬೆಳಗಾವಿ ಜಿಲ್ಲೆಯ ಪ್ರೇರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನಾಡು ನುಡಿ ಸೇವೆಗಾಗಿ ಸಮಯ ಸಿಕ್ಕಾಗ ಕವಿಗೋಷ್ಠಿ ಚುಟುಕು ಸಾಹಿತ್ಯ ಸಾಹಿತ್ಯಕ್ಕೆ ಸಂಬಂಧಪಟ್ಟ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿ ರಾಜ್ಯ ರಾಷ್ಟ್ರಮಟ್ಟದ ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಸಂದಿವೆ.

ನಾನು ಸುಮಾರು 15 ವರ್ಷದಿಂದ ಪೊಲೀಸ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಇರುತ್ತದೆ. ನನ್ನ ಮೊದಲ ಕವನ ಸಂಕಲನ ಮೌನ ಮಧುರ (ನಾನಾರು ಅಲ್ಲ ನಾನಾಗುವ ದಾರಿ) ಕಾವ್ಯ ಸಂಕಲನ ಬಿಡುಗಡೆಗೊಂಡಿದ್ದು ಅದರಲ್ಲಿ ಸುಮಾರು ಎರಡು ನೂರು ಕವಿತೆಗಳು ಇರುತ್ತವೆ. ನಾನು ರಾಜ್ಯದ ವಿವಿಧ ಮೂಲೆಗೆ ಹೋಗಿ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತೇನೆ. ನನ್ನ ಸಾಹಿತ್ಯ ಕ್ಷೇತ್ರವನ್ನು ಗುರುತಿಸಿ ರಾಜ್ಯದ ವಿವಿಧ ಮೂಲೆಗಳಿಂದ ಈ ಪ್ರಕಾರ ಪ್ರಶಸ್ತಿಗಳು ದೊರೆತಿರುತ್ತವೆ.

1) ಸರಸ್ವತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿ
2) ಮಹಾತ್ಮ ಗಾಂಧೀಜಿ ಸದ್ಬಾವನ ಸೇವಾರತ್ನ ಪ್ರಶಸ್ತಿ
3) ರಾಜ್ಯಮಟ್ಟದ ಕರ್ನಾಟಕ ಶೆವಾರತ್ನ ಪ್ರಶಸ್ತಿ ಪುರಸ್ಕಾರ 2025
4) ಕನ್ನಡ ರಾಜ್ಯೋತ್ಸವ ಪ್ರಶಸ್ತಿ
5) ರಾಜ್ಯಮಟ್ಟದ ಕರ್ನಾಟಕ ಕಲಾಭೂಷಣ ಪ್ರಶಸ್ತಿ
6) ಡಾ!! ದರಾಬೇಂದ್ರೆ ಸದ್ಭಾವನಾ ಸೇವಾರತ್ನ ಪ್ರಶಸ್ತಿ
7) ರಾಜ್ಯಮಟ್ಟದ ಬಸವ ಶ್ರೀ ಪ್ರಶಸ್ತಿ 2025.

ಹೀಗೆ ರಾಜ್ಯದ ವಿವಿಧ ಪ್ರಶಸ್ತಿಗಳ ದೊರೆತಿದ್ದು ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

LEAVE A REPLY

Please enter your comment!
Please enter your name here

Latest News

ಕವನ ರಚನೆ ಬದುಕಿಗೆ ಮರುಸೃಷ್ಟಿ ಆಗಬಲ್ಲುದು – ಸುಮಾ ಕಿತ್ತೂರ

ಲೇಖಕಿಯರ ಸಂಘದಿಂದ ದತ್ತಿನಿಧಿ ಕಾರ್ಯಕ್ರಮ ಹಾಗೂ ಕವಿಗೋಷ್ಠಿಬೆಳಗಾವಿ - ಪ್ರತಿ ಕವಿಯ ಕವಿತೆಗೆ ಒಂದು ಮೌಲ್ಯವಿದೆ ಅದನ್ನು ಆಸಕ್ತಿಯಿಂದ ಕೇಳುವ ಹಾಗೂ ಅದಕ್ಕೆ ಸ್ಪಂದಿಸುವುದು ಎಲ್ಲರ...

More Articles Like This

error: Content is protected !!
Join WhatsApp Group