ಹಳ್ಳೂರ : ಸಮೀಪದ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ನಡೆದ ಆಜೂರ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ಪ್ರಶಸ್ತಿ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಸಾಹಿತ್ಯ ರತ್ನ ಸಾವಿರಾರು ಹಾಡಿನ ಸರದಾರ ಮಹಾರಾಜ ಸಿದ್ದೂ ಹಳ್ಳೂರ ಅವರ ವಿರಚಿತ ‘ಎಷ್ಟು ಚೆಂದಿತ್ತ ಆವಾಗ’ ಎಂಬ ಕವನ ಸಂಕಲನಕ್ಕೆ ಒಲಿದು ಬಂದ ಹಾರೂಗೇರಿ ಆಜೂರ ಪ್ರತಿಷ್ಠಾನ ನೀಡುವ 2025 ನೇ ಸಾಲಿನ ಅತ್ತ್ಯುತ್ತಮ ಜಿಲ್ಲಾ ಮಟ್ಟದ ಆಜೂರು ಪುಸ್ತಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಸಮಯದಲ್ಲಿ ಹಂದಿಗುಂದ ಶ್ರೀ ಶಿವಾನಂದ ಸ್ವಾಮಿಜಿಗಳು.ಚಿಮ್ಮಡ ಪ್ರಭು ಸ್ವಾಮೀಜಿಗಳು, ಬೆಂಡವಾಡ ಗುರುಸಿದ್ದ ಮಹಾಸ್ವಾಮಿಗಳು, ಹಡಗಿನಾಳ ಶ್ರೀ ಮುತ್ತೆಶ್ವರ ಸ್ವಾಮೀಜಿಗಳು, ಆಜೂರ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಆಜೂರ ಸೇರಿದಂತೆ ಅನೇಕರಿದ್ದರು. ಸಾಹಿತಿಗಳು, ಊರಿನ ಗಣ್ಯ ಮಾನ್ಯರು ಮುಂತಾದವರು ಸೇರಿ ಹರ್ಷ ವ್ಯಕಪಡಿಸಿದರು.

