ಹೆಲಿಕ್ಯಾಪ್ಟರ ಮೂಲಕ ಚಾಲುಕ್ಯರ ವೈಭವ ವೀಕ್ಷಣೆ
ಬಾಗಲಕೋಟೆ: (ಕರ್ನಾಟಕ ವಾರ್ತೆ) : ಚಾಲುಕ್ಯ ಉತ್ಸವ ಅಂಗವಾಗಿ ಬಾದಾಮಿ ಚಾಲುಕ್ಯರ ಪ್ರಮುಖ ಸ್ಥಳಗಳನ್ನು ಹೆಲಿಕ್ಯಾಪ್ಟರ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಹೆಲಿ ಟೂರಿಜಂ ಹೆಸರಿನಲ್ಲಿ ಸೌಲಭ್ಯ ಕಲ್ಪಿಸಲಾಗಿದ್ದು, ಚಾಲುಕ್ಯ ಉತ್ಸವದಲ್ಲಿ ಈ ಬಾರಿ ಕಲ್ಪಿಸಲಾಗಿರುವ ಪ್ರಮುಖ ಆಕರ್ಷಣೆಗಳಲ್ಲಿ ಹೆಲಿಟೂರಿಜಂ ಸಹ ಒಂದಾಗಿದೆ.
ಜನವರಿ 17 ರಿಂದ 20ರ ವರೆಗೆ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಬಾದಾಮಿ ಪಟ್ಟಣದ ವೀರಪುಲಕೇಶಿ ಮಹಾವಿದ್ಯಾಲಯದ ಕ್ರೀಡಾ ಮೈದಾನದಲ್ಲಿ “Badami by Sky” ಹೆಲಿ ಪ್ರವಾಸೋದ್ಯಮ (ಜಾಯ್ ರೈಡ್) ಸೇವೆಯನ್ನು M/s Thumby Aviation Pvt. Ltd. ಐಣಜ. ವತಿಯಿಂದ ಆಯೋಜಿಸಲಾಗುತ್ತಿದೆ. ಹೆಲಿಕ್ಯಾಪ್ಟರ ಏರಿ ಆಕಾಶದಿಂದ ಚಾಲುಕ್ಯರ ವೈಭವ ಕಣ್ತುಂಬಿಕೊಳ್ಳಬಹುದಾಗಿದೆ.
ಬಾದಾಮಿ ಪಟ್ಟಣದ ಪ್ರಸಿದ್ದ ಮರಳು ಶಿಲೆಯ ಬೆಟ್ಟಗಳು, ವಿಶ್ವವಿಖ್ಯಾತ ಗುಹಾಂತರ ದೇವಾಲಯಗಳು, ಅಗಸ್ತ್ಯ ತೀರ್ಥ ಹೊಂಡ, ಚಾಲುಕ್ಯರ ಕಾಲದ ಕೋಟೆ, ಬನಶಂಕರಿ ದೇವಸ್ಥಾನ ಮತ್ತು ಹರಿದ್ರಾನಾಥ ಪುಷ್ಕರಣಿ, ಇತ್ಯಾದಿ ಪ್ರವಾಸಿ ಆಕರ್ಷಣೆಗಳ ಮನಮೋಹಕ ದೃಶ್ಯಗಳನ್ನು ವೈಮಾನಿಕವಾಗಿ ಕಣ್ತುಂಬಿಸಿಕೊಳ್ಳಬಹುದಾಗಿದೆ. ಒಂದು ಟ್ರಿಪ್ ಗೆ ಹೋಗಿ ಬರಲು ತಲಾ 4 ಸಾವಿರ ರೂ. ದರ ನಿಗದಿಮಾಡಲಾಗಿದೆ.
ಬುಕಿಂಗ್ ಹಾಗೂ ಇತರ ಹೆಚ್ಚಿನ ಮಾಹಿತಿಗಾಗಿ ಬಾಹುಬಲಿ (ಮೊ:9740668512) ಗೋಪಾಲ ಎಸ್ ಹಿತ್ತಲಮನಿ (ಮೊ:7829538950) ಇವರನ್ನು ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

