ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಜ್ಞಾನ ಸ್ಪೂರ್ತಿ ತುಂಬುತ್ತದೆ- ಡಾ. ಸುಬ್ರಾವ ಎಂಟೆತ್ತಿನವರ.

Must Read

ಮೂಡಲಗಿ : ಉತ್ತಮ ಶಿಕ್ಷಣ ನಮ್ಮ ಬದುಕಿಗೆ ಸ್ಪೂರ್ತಿ ಆಶ್ರಯ ಹಾಗೂ ಖ್ಯಾತಿಯನ್ನು ತಂದುಕೊಡುತ್ತದೆ ಶಿಕ್ಷಣದ ಮೌಲ್ಯವನ್ನು ಅರಿತವನು ಸಾದಕನಾಗಿ ಸಾಮಾಜಿಕವಾಗಿ ಬೆಳೆದು ತೋರಿಸಬಲ್ಲ ವಿದ್ಯಾರ್ಥಿ ಓದಿನ ಜೊತೆಗೆ ಸಂಸ್ಕಾರ ಚಾರಿತ್ರ್ಯ ಉತ್ತಮ ನಡವಳಿಕೆ ರೂಢಿಸಿಕೊಂಡು ತನ್ನ ಅಭಿವೃದ್ಧಿಯ ಜೊತೆಗೆ ತನ್ನ ಕುಟುಂಬ ತನ್ನ ದೇಶ ನಾಡನ್ನು ಸುಧಾರಿಸಲು ಸಾಧ್ಯವಿದೆ ವಿದ್ಯಾರ್ಥಿ ಶ್ರದ್ಧೆ ನಿಷ್ಠೆ ಮತ್ತು ಜೀವನದ ಪ್ರಾಮುಖ್ಯತೆಯನ್ನು ಅರಿತು ತನ್ನ ಯಶಸ್ಸನ್ನು ಸಾಧಿಸುವ ಛಲ ಇಟ್ಟುಕೊಳ್ಳುವುದು ಅಗತ್ಯವಿದೆ ಎಂದು ಅಂಕಲಿಯ ಕೆಎಲ್‌ಇ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕರು ಮತ್ತು ಪ್ರಖ್ಯಾತ ಸಾಹಿತಿಗಳಾದ ಡಾ. ಸುಬ್ರಾವ ಎಂಟೆತ್ತಿನವರ ಅಭಿಪ್ರಾಯಪಟ್ಟರು.

ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಗುರುವಿನ ಯೋಗ್ಯ ಮಾರ್ಗದರ್ಶನವನ್ನು ಪಡೆದು ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸಲು ಪ್ರಯತ್ನಿಸಬೇಕು ಪ್ರಯತ್ನ ಹೇಗಿರಬೇಕೆಂದರೆ ಜಗತ್ತು ನಮ್ಮನ್ನು ನೋಡುತ್ತಾ ನಮ್ಮ ಸಾವಿನಲ್ಲೂ ದುಃಖಿಸುವಂತಿರಬೇಕು ಸಾಹಿತ್ಯ ಕಲೆ ವಿಜ್ಞಾನ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ನಿರಂತರ ಸಾಧನೆಗೆ ತಮ್ಮನ್ನು ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

ಇನ್ನೋರ್ವ ಅತಿಥಿ ಯಮಕನಮರಡಿಯ ಸಿಇಎಸ್ ಪಿಯು ಕಾಲೇಜಿನ ಹಿರಿಯ ಉಪನ್ಯಾಸಕರಾದ ಬಸವರಾಜ ಎ ಮಾನಗಾಂವಿ ಮಾತನಾಡಿ ಸಾಧನೆ ಮಾಡಲು ವಯಸ್ಸು ಮುಖ್ಯವಲ್ಲ ಕೈಯಲ್ಲಿ ಇರುವ ಹಸ್ತರೇಖೆ ಮುಖ್ಯವಲ್ಲ ಹಣೆಬರಹವು ಕಾರಣವಲ್ಲ ಪ್ರಯತ್ನ ಮತ್ತು ಉತ್ತಮ ಹವ್ಯಾಸಗಳು ಮುಖ್ಯವಾಗಿವೆ ವಿದ್ಯಾರ್ಥಿಗಳು ಓದಿನ ಜೊತೆಗೆ ಬದುಕಿನ ಬಂಡಿಯನ್ನು ಸಾಗಿಸುವ ವೈಚಾರಿಕತೆಯನ್ನು ರೂಢಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಉತ್ತಮ ಫಲಿತಾಂಶದ ಜೊತೆ ಜಗತ್ತನ್ನು ಅರ್ಥೈಸಿಕೊಂಡವನು ಜೀವನವನ್ನು ಸರಿಯಾಗಿ ನಿಭಾಯಿಸಬಲ್ಲ ಉತ್ತಮ ಯೋಗ್ಯ ಜ್ಞಾನವನ್ನು ಹೊಂದಿ ತಂದೆತಾಯಿ ಹಾಗೂ ಕಲಿಸಿದ ಗುರುಗಳಿಗೆ ವಿದ್ಯಾಸಂಸ್ಥೆಗೆ ಒಳ್ಳೆಯ ಹೆಸರು ತರಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದರು.

ಆರ್.ಡಿ.ಎಸ್. ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ಮಾತನಾಡಿ ಉತ್ತಮ ಓದುಗಾರನಿಗೆ ಬಡತನ ಅಡ್ಡಿ ಆಗಲಾರದು ಪ್ರತಿಯೊಬ್ಬ ವ್ಯಕ್ತಿಗೆ ಒಂದೊಂದು ಚಿಂತೆ ಸಹಜವಾಗಿದ್ದು ಉತ್ತಮ ಯಶಸ್ವಿ ವ್ಯಕ್ತಿಗೆ ಯಾವುದೇ ಚಿಂತೆ ಇರಲಾರದು ಯಶಸ್ವಿ ವ್ಯಕ್ತಿಯಾಗಲು ಉತ್ತಮ ಪ್ರತಿಭೆ ಜ್ಞಾನ ಮುಖ್ಯವಾಗಿ ಪ್ರತಿಯೊಬ್ಬ ವಿದ್ಯಾರ್ಥಿ ರೂಢಿಸಿಕೊಳ್ಳುವುದು ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ರೀಡಾ ಸಾಂಸ್ಕೃತಿಕ ಸಾಧಕರಿಗೆ ಸತ್ಕರಿಸಿ ಗೌರವಿಸಲಾಯಿತು ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮದಲ್ಲಿ ಮೂಡಲಗಿಯ ಮಹಾಲಕ್ಷ್ಮಿ ಬ್ಯಾಂಕಿನ ನಿರ್ದೇಶಕರಾದ ಮುತ್ತಪ್ಪ ಈರಪ್ಪನವರ, ಉಪಾಧ್ಯಕ್ಷರಾದ ಮಹಾದೇವ ಗೋಕಾಕ, ಕಮಲದಿನ್ನಿಯ ಮಾಜಿ ಗ್ರಾಮಪಂಚಾಯತ ಸದಸ್ಯರಾದ ರಮೇಶ ಪಾಟೀಲ, ಘಟಪ್ರಭಾದ ಕ.ವಿ.ಪ್ರ.ನಿ.ನಿ.ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರಾದ ಸುರೇಶ ಮುರಗೋಡ ಕಾಲೇಜು ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಸತೀಶ ಗೋಟೂರೆ, ಸಂಗಮೇಶ ಹಳ್ಳೂರ ಹಾಜರಿದ್ದರು.

ಉಪನ್ಯಾಸಕ ಸಂಗಮೇಶ ಕುಂಬಾರ ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ ಹೆಳವರ ನಿರೂಪಿಸಿದರು ಉಪನ್ಯಾಸಕ ಬಿ. ಎಂ ಕಬ್ಬೂರೆ ವಂದಿಸಿದರು.

LEAVE A REPLY

Please enter your comment!
Please enter your name here

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group